Advertisement

ಆನ್ ಲೈನ್ ರಿಪೇರಿ

01:41 PM May 04, 2020 | Suhan S |

ಮನೆಯಲ್ಲಿದ್ದುಕೊಂಡು ಕೆಲಸ ಮಾಡುವಾಗ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಕೈಕೊಟ್ಟರೆ ಏನು ಮಾಡುವುದು ಎಂಬ ಚಿಂತೆ ಬೇಡ, ಈ ಸಮಸ್ಯೆಗೆ ಉಚಿತವಾಗಿ ಸಲಹೆ ನೀಡಲು, ಸಹಾಯ ಮಾಡಲು ಎಚ್‌ಪಿ ಸಂಸ್ಥೆ ಮುಂದೆ ಬಂದಿದೆ…

Advertisement

ಕೋವಿಡ್ 19 ಲಾಕ್‌ಡೌನ್‌ ಕಾರಣದಿಂದ, ಎಲೆಕ್ಟ್ರಾನಿಕ್‌ ಉಪಕರಣಗಳು,ಗ್ಯಾಜೆಟ್‌ಗಳು ರಿಪೇರಿಗೆ ಬಂದರೆ ಕಷ್ಟ ಕಷ್ಟ. ಮೊಬೈಲ್‌ ಫೋನ್‌ ರಿಪೇರಿಗೆ ಬಂದಿದ್ದರಂತೂ ರಿಪೇರಿ ಮಾಡಿಸಲಾಗದೇ, ಹೊಸದನ್ನುಕೊಳ್ಳಲೂ ಆಗದೇ ಜನರು ಪರಿತಪಿಸುತ್ತಿದ್ದಾರೆ.

ಇಂಥ ಪರಿಸ್ಥಿತಿಯಲ್ಲಿ, ಪರ್ಸನಲ್‌ ಕಂಪ್ಯೂಟರ್‌ (ಪಿಸಿ) ಮತ್ತು ಲ್ಯಾಪ್‌ಟಾಪ್‌ ಬಳಕೆದಾರರಿಗೆ ಸಮಾಧಾನ ತರುವ ಸೇವೆಯೊಂದನ್ನು, ಎಚ್‌ಪಿ ಇಂಡಿಯಾ ಪ್ರಕಟಿಸಿದೆ. ಈ ಮೂಲಕ, ಅದು ತನ್ನ ಗ್ರಾಹಕರು ಮಾತ್ರವಲ್ಲದೇ, ಬೇರೆ ಬ್ರಾಂಡಿನ ಗ್ರಾಹಕರಿಗೂ ನೆರವಾಗುತ್ತಿದೆ. ಈ ಸೇವೆಯಿಂದ, ವೈಯಕ್ತಿಕ ಬಳಕೆದಾರರು, ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್‌ (ಎಸ್‌ ಎಂಇಗಳಿಗೆ) ಗಳಿಗೆ ಮತ್ತು ಮನೆಯಲ್ಲೇ ಕೆಲಸ ಮಾಡುವವರಿಗೆ ತುಂಬಾ ಅನುಕೂಲವಾಗಲಿದೆ.

ಹೇಗೆಂದರೆ, ಎಲ್ಲ ಬ್ರಾಂಡಿನ, ಪಿಸಿ ಮತ್ತು ಲ್ಯಾಪ್‌ ಟಾಪ್‌ ಬಳಕೆದಾರರಿಗೆ, ಸೀಮಿತ ಅವಧಿಯ ಉಚಿತ ಹೆಲ್ಪ್ ಡೆಸ್ಕ್ ಬೆಂಬಲ ಘೋಷಿಸಿದೆ. ಇದು, ಎಲ್ಲಾ ಬ್ರ್ಯಾಂಡ್‌ಗಳ ಆಪರೇಷನಲ್‌ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುತ್ತದೆ. ಆರೋಗ್ಯ ತುರ್ತು ಘೋಷಣೆ ಪರಿಣಾಮ, ಲಕ್ಷಾಂತರ ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳನ್ನು ನಡೆಸುವವರು ಮತ್ತು ಅವರ ಸಿಬ್ಬಂದಿ, ಮನೆಯಲ್ಲೇ ಕೆಲಸ ನಿರ್ವಹಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ನೆರವನ್ನು ಎಚ್‌ಪಿ ಇಂಡಿಯಾ ಪ್ರಕಟಿಸಿದೆ.

ಹೀಗೆ ಕಾರ್ಯ ನಿರ್ವಹಿಸುವ ವೇಳೆಯಲ್ಲಿ, ಐಟಿ ಸಂಬಂಧಿತ ಸಮಸ್ಯೆಗಳು ಎದುರಾದರೆ, ಪರಿಣತರಿಂದ ರಿಮೋಟ್‌ ಬೆಂಬಲದೊಂದಿಗೆ ಅವುಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ನಿಯಮಿತ ಬೆಂಬಲ ಮತ್ತು ಸರ್ವೀಸ್‌ ಚಾನೆಲ್‌ಗ‌ಳ ಅಲಭ್ಯತೆಯ ಹಿನ್ನೆಲೆಯಲ್ಲಿ, ಎಚ್‌ಪಿ ಈ ಸೇವೆಯನ್ನು ಎಲ್ಲಾ  ಬ್ರ್ಯಾಂಡ್‌ಗಳ ಪಿಸಿ ಬಳಕೆದಾರರಿಗೆ ನೀಡಲು ಮುಂದಾಗಿದೆ. ಆ ಮೂಲಕ, ಲಾಕ್‌ಡೌನ್‌ ಸಮಯದಲ್ಲೂ ಪಿಸಿ ಬಳಕೆದಾರರು, ಯಾವುದೇ ಅಡೆತಡೆಗಳಿಲ್ಲದೇ ಕಾರ್ಯನಿರ್ವಹಿಸಲು ನೆರವಾಗುತ್ತಿದೆ.

Advertisement

ಈ ಸೇವೆ, ವೈಯಕ್ತಿಕ ಗ್ರಾಹಕರಿಗೆ ಮೇ 31, 2020 ರವರೆಗೆ ಸಂಪೂರ್ಣ ಉಚಿತವಾಗಿ ಲಭ್ಯವಾಗಲಿದೆ. ಸಣ್ಣ ಮತ್ತು ಮಧ್ಯಮ ವ್ಯವಹಾರಗಳ(ಎಸ್‌ಎಂಬಿ) ಬಳಕೆದಾರರಿಗೆ, ನೋಂದಣಿ ಮಾಡಿಕೊಂಡ ದಿನದಿಂದ ಒಂದು ತಿಂಗಳವರೆಗೆ ಈ ಸೇವೆ ಲಭ್ಯವಾಗಲಿದೆ.

ಹೆಲ್ಪ್ ಡೆಸ್ಕ್ ನಲ್ಲಿ ಎಚ್‌ಪಿ ಪ್ರಮಾಣೀಕೃತ ತಾಂತ್ರಿಕ ಸಿಬ್ಬಂದಿ ಇರಲಿದ್ದು, ಇವರು ರಿಮೋಟ್‌ ಮೂಲಕ ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಸಾಮಾನ್ಯ ಕಾರ್ಯದಕ್ಷತೆ, ಸೆಕ್ಯೂರಿಟಿ ಕಾನ್ಫಿಗರೇಷನ್‌, ಸಂಪರ್ಕ, ಆಪರೇಟಿಂಗ್‌ ಸಿಸ್ಟಂ, ಮೀಡಿಯಾ ಸಪೋರ್ಟ್‌, ಮೊಬಿಲಿಟಿ, ಸಾಫ್ಟ್ ವೇರ್‌ ಆಪರೇಷನ್‌ ಮತ್ತು ಇನ್‌ಸ್ಟಾಲೇಷನ್‌ ಸೇರಿದಂತೆ ಇನ್ನೂ ಹಲವಾರು ಸೇವೆಯನ್ನು ನೀಡಲಿದ್ದಾರೆ.

ಈ ಸಮಯದಲ್ಲಿ ಸರ್ವೀಸ್‌ ಸೆಂಟರ್‌ಗಳು ಸಹ ಮುಚ್ಚಿವೆ. ನಿರಂತರ ಬಳಕೆಯ ಕಾರಣಕ್ಕೆ, ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಈ ಸನ್ನಿವೇಶದಲ್ಲಿ, ಕಾರ್ಪೊರೇಟ್‌ ಗಡಿಗಳನ್ನು ಮೀರಿ, ಪ್ರತಿಯೊಬ್ಬ ಬಳಕೆದಾರರಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಿದೆ. ಎಂದು, ಎಚ್‌ಪಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿನಯ್‌ ಅವಸ್ತಿ ಹೇಳಿದ್ದಾರೆ.­

ಈ ಸೇವೆ ಪಡೆಯುವುದು ಹೇಗೆ? : ಬ್ಯುಸಿನೆಸ್‌ ಬಳಕೆದಾರರು- & hpindiaser viceshp. com ಗೆ ಇಮೇಲ್‌ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಮತ್ತು ಮಾಹಿತಿಯನ್ನು ಪಡೆಯಬಹುದಾಗಿದೆ.

ವ್ಯಕ್ತಿಗತ ಬಳಕೆದಾರರು: ದೂರವಾಣಿ ಸಂಖ್ಯೆ 1800 258 7140ಗೆ ಕರೆ ಮಾಡಿ ನೋಂದಣಿ ಮತ್ತು ಮಾಹಿತಿಯನ್ನು ಪಡೆಯಬಹುದು. ಇದಲ್ಲದೆ, ಸಾಮಾನ್ಯ ವಿಚಾರಣೆಯನ್ನು hpindiaserviceshp.com ಮೂಲಕ ಮಾಡಬಹುದಾಗಿದೆ.

 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next