Advertisement
ವಿದ್ಯಾರ್ಥಿಯ ತಂದೆ 51 ವರ್ಷದ ಶ್ರೀನಿವಾಸ್ ಪಂಕಲಾ ಅವರು ಈ ಬಗ್ಗೆ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಹೆಡ್‌ಫೋನ್ ಮತ್ತು ವೆಬ್‌ಕ್ಯಾಮ್ ಖರೀದಿಸಲು ಮುಂ ದಾಗಿದ್ದ ವಿದ್ಯಾರ್ಥಿ. ಜೂ. 13ರಂದು ವಿದ್ಯಾರ್ಥಿಯು ಆನ್‌ಲೈನ್‌ನಲ್ಲಿ ಅನಾಮ ಧೇಯ ವೆಬ್‌ಸೈಟ್ ರಿಯಾಯಿತಿ ಇದೆಯೇ ಎಂದು ವಿಚಾರಿಸಲು ಸೈಟ್‌ನಲ್ಲಿ ನಮೂದಿಸಲಾದ ಸಂಖ್ಯೆಯನ್ನು ಸಂಪರ್ಕಿಸಿದ್ದಾನೆ. ಈ ಉತ್ಪನ್ನಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ಆರೋಪಿ ಹೇಳಿದ್ದು, ಆನ್‌ಲೈನ್ ಪಾವತಿಯ ಬಳಿಕ ಪ್ರೊಡಕ್ಟ್ಗಳನ್ನು ಕಳುಹಿಸುವುದಾಗಿ ತಿಳಿಸಿದ್ದ. ಬಳಿಕ ಆರೋಪಿ ಸ್ವಲ್ಪ ಪ್ರೊಡಕ್ಟ್ಗಳನ್ನು ರವಾನಿಸಿದ್ದು ಕ್ಯೂಆರ್ ಕೋಡ್ ಕಳುಹಿಸಿ ಪಾವತಿಗಾಗಿ ಸ್ಕ್ಯಾನ್ ಮಾಡಬೇಕಾಗಿದೆ ಎಂದು ಹೇಳಿ 67,495 ರೂ. ಗಳನ್ನು ಅವನ ತಂದೆಯ ಖಾತೆಯಿಂದ ಕಡಿತವಾಗಿದೆ. Advertisement
ಆನ್‌ಲೈನ್ ಖರೀದಿ : 67 ಸಾವಿರ ರೂ. ಕಳೆದುಕೊಂಡ ವಿದ್ಯಾರ್ಥಿ
02:35 PM Jun 23, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.