Advertisement

ಕೋವಿಡ್‌ ಸೋಂಕು ನಿಯಂತ್ರಣ ಕುರಿತು ಆನ್ಲೈನ್‌ ಸಭೆ

12:46 PM Feb 01, 2022 | Team Udayavani |

ರಾಮನಗರ: ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್‌ ಸೋಂಕುನಿಯಂತ್ರಿಸಲು ತರಗತಿಯ ಒಳಗೆ ಮತ್ತುಹೊರಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಜಾರಿ ಮಾಡಬೇಕು. ಕೋವಿಡ್‌ ಸೋಂಕು ಹರಡದಂತೆ ಸೂಕ್ತ ನಡಾವಳಿಗಳ ನಾಮಫ‌ಲಕಗಳನ್ನು ಮಕ್ಕಳಿಗೆಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದುಐಐಎಚ್‌ಎಂಆರ್‌ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಮೈತ್ರಿಯವರು ವಸತಿ ನಿಲಯಗಳ ಮೇಲ್ವಿಚಾರಕರಿಗೆ ಸಲಹೆ ನೀಡಿದರು.

Advertisement

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಎಸ್‌ಬಿಸಿಸಿ ಘಟಕ, ಯುನಿಸೆಫ್ ಹಾಗೂ ಐಐಎಚ್‌ಎಂಆರ್‌ (ಬೆಂಗಳೂರು), ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣಇಲಾಖೆ ಸಹಕಾರದೊಂದಿಗೆ ಜಿಪಂ ಸಭಾಂಗಣದಲ್ಲಿ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರು ಮತ್ತು ಶಿಕ್ಷಕರಿಗೆ ಕೋವಿಡ್‌ ಸೋಂಕು ನಿಯಂತ್ರಿಸಲು ಅನುಸರಿಸಬೇಕಾದ ಸೂಕ್ತ ನಡಾವಳಿಗಳ ಕುರಿತು ಆನ್ಲೈನ್‌ ಮೂಲಕ ಸಭೆ ಆಯೋಜಿಸಲಾಗಿತ್ತು.

ನಿಯಮ ಪಾಲಿಸಿ: ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಮಲಗುವ ಕೋಣೆಗಳಲ್ಲಿ ಹಾಸಿಗೆಗಳ ಅಂತರ ಕಾಯ್ದು ಕೊಳ್ಳಬೇಕು. ಅವರು ಟಿ.ವಿನೋಡುವ ಸಂದರ್ಭಗಳಲ್ಲಿ ಗುಂಪಾಗಿಕೂರದಂತೆ ಅಂತರ ಕಾಪಾಡಿಕೊಳ್ಳಲು ತಿಳಿಸಬೇಕು. ಕೈಗಳನ್ನು ಪದೇ ಪದೇ ಸ್ವತ್ಛಗೊಳಿಸಲಸೋಪು ಮತ್ತು ಸ್ಯಾನಿಟೈಸರ್‌ ವಸತಿ ನಿಲಯದ ಆಯ್ದ ಪ್ರದೇಶಗಳಲ್ಲಿ ಇಡಬೇಕು. ವಿದ್ಯಾರ್ಥಿಗಳು ತಮ್ಮ ಊರುಗಳಿಂದ ಮರಳಿದಾಗ 2 ದಿನಪ್ರತ್ಯೇಕವಾಗಿರಬೇಕು. ಶಿಕ್ಷಕರು ಮತ್ತುಸಿಬ್ಬಂದಿಗಳಿಗೆ ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆ ಇದ್ದರೆ ರಜೆ ಪಡೆಯುವಂತೆ ತಿಳಿಸಬೇಕುಎಂದರು.

ಮೇಲ್ವಿಚಾರಣೆ ಮಾಡಿ: ವಾರಕೊಮ್ಮೆ ಅಡಿಗೆಮನೆ, ಶೌಚಾಲಯ, ತರಗತಿಗಳು, ಊಟದಸ್ಥಳ ಇತ್ಯಾದಿಗಳ ಸ್ವಚ್ಛತೆ ಬಗ್ಗೆ ಮೇಲ್ವಿಚಾರಣೆಮಾಡಬೇಕು. ಅಡುಗೆ ಸಿಬ್ಬಂದಿ ಅಡುಗೆತಯಾರಿಸುವ ವೇಳೆ, ಊಟ ಬಡಿಸುವ ವೇಳೆ ರಕ್ಷಾ ಕವಚಗಳನ್ನು ಕಡ್ಡಾಯವಾಗಿ ಧರಿಸಿರಬೇಕು ಮತ್ತು ಸಿಬ್ಬಂದಿಗಳಲ್ಲಿ ನೈರ್ಮಲ್ಯ,

ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸುತ್ತಿರಬೇಕು. ನಿಲಯಗಳಲ್ಲಿ ಮಾಸ್ಕ್, ಸ್ಯಾನಿಟೈಸರ್‌, ಸೋಪು, ಥರ್ಮೋಮೀಟರ್‌, ಪಲ್ಸ್  ಆಕ್ಸಿಮೀಟರ್‌, ಲಭ್ಯವಿರುವಂತೆನೋಡುಕೊಳ್ಳಬೇಕು ಇದರಿಂದ ಮಕ್ಕಳಆರೋಗ್ಯದ ವ್ಯತ್ಯಯ ಪರೀಕ್ಷಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

Advertisement

ಮುಂಜಾಗೃತ ಕ್ರಮ ಪಾಲಿಸಿ: ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್‌ ಮಾತನಾಡಿ,ಕೋವಿಡ್‌ 19 3ನೇ ಅಲೆ ಜೊತೆಗೆ ರೂಪಾಂತರಿ ಓಮಿಕ್ರಾನ್‌ ಸೋಂಕು ಹರಡುತ್ತಿದ್ದು ಬೇಗನೆಕಡಿಮೆಯಾಗುವ ಸೂಚನೆ ಕಂಡು ಬರುತ್ತಿಲ್ಲ. ಜೊತೆಗೆ ಲಸಿಕೆ ಅಭಿವೃದ್ಧಿ ಪಡಿಸಲಾಗಿದ್ದರು ಸಹ ನಮ್ಮ ದೇಶದ ಬೃಹತ್‌ ಜನ ಸಂಖ್ಯೆಗೆ ಲಸಿಕೆನೀಡಲು ಇನ್ನು ಸಮಯ ಬೇಕಾಗುತ್ತದೆ.ಆದ್ದರಿಂದ ಈ ಸೋಂಕನ್ನು ನಿಯಂತ್ರಿಸಲು ಕೋವಿಡ್‌ ಮುಂಜಾಗೃತ ನಡವಳಿಕೆ ಪಾಲಿಸಬೇಕು ಎಂದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆ ಜಿಲ್ಲಾ ಅಧಿಕಾರಿ ಶಿವಪ್ರಿಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಬಿಂದುಮಣಿ, ಜಿಲ್ಲಾ ಸಂಯೋಜಕ ಸುರೇಶ್‌ಬಾಬು, ವಸತಿ ಶಾಲೆ ಮತ್ತು ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರು, ಶಿಕ್ಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next