Advertisement

ಆನ್‌ಲೈನ್‌ ಮದ್ಯ ಮಾರಾಟ: ಕಾರಣ ಕೇಳಿದ ಹೈಕೋರ್ಟ್‌

11:01 PM Nov 04, 2019 | Team Udayavani |

ಬೆಂಗಳೂರು: ಆನ್‌ಲೈನ್‌ ಮೂಲಕ ಮದ್ಯ ಸರಬರಾಜಿಗೆ ಅನುಮತಿ ನೀಡಿ ನಂತರ ಅದನ್ನು ವಾಪಸ್‌ ಪಡೆದಿರುವುದಕ್ಕೆ ಸೂಕ್ತ ಕಾರಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ಚಾಟಿ ಬೀಸಿದೆ. ಈ ಸಂಬಂಧ ಚೆನ್ನೈ ಮೂಲದ ಖಾಸಗಿ ಕಂಪನಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

Advertisement

ಅರ್ಜಿ ವಿಚಾರಣೆ ವೇಳೆ, “ಆನ್‌ಲೈನ್‌ ಮದ್ಯ ಸರಬರಾಜಿಗೆ ಮೊದಲು ಅನುಮತಿ ನೀಡಿ, ಬಳಿಕ ವಾಪಸ್‌ ಪಡೆಯಲಾಗಿದೆ. ಆದರೆ, ಸಮರ್ಪಕ ಕಾರಣಗಳನ್ನು ನೀಡಿಲ್ಲ. ಸಮಂಜಸ ಕಾರಣ ನೀಡದಿದ್ದರೆ, ಅಬಕಾರಿ ಇಲಾಖೆಯ ಆದೇಶ ರದ್ದುಗೊಳಿಸಬೇಕಾಗುತ್ತದೆ. ಆದ್ದರಿಂದ ಅನುಮತಿ ವಾಪಸ್‌ ಪಡೆದ ಬಗ್ಗೆ ಕಾರಣ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು. ಆನ್‌ಲೈನ್‌ ಮೂಲಕ ಮದ್ಯ ಸರಬರಾಜಿಗೆ 2017ರ ಆ.1ರಂದು ಅರ್ಜಿದಾರ ಸಂಸ್ಥೆಗೆ ನೀಡಲಾಗಿದ್ದ ಅನುಮತಿಯನ್ನು ಅಬಕಾರಿ ಇಲಾಖೆ ವಾಪಸ್‌ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next