Advertisement

Online ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

07:09 PM Jan 13, 2024 | Team Udayavani |

ಉಡುಪಿ: ಆನ್‌ಲೈನ್‌ ಉದ್ಯೋಗದ ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ.

Advertisement

ಬೆಳ್ತಂಗಡಿ ಮೂಲದ ಜಾಸ್ಮಿ ಟಿ.ಕೆ. ಅವರು ಮಣಿಪಾಲದ ವಿದ್ಯಾರತ್ನನಗರದ ಬಳಿ ತನ್ನ ಮನೆಯಲ್ಲಿ ಫೇಸ್‌ಬುಕ್‌ ನೋಡುತ್ತಿದ್ದಾಗ ಆನ್‌ಲೈನ್‌ ಉದ್ಯೋಗವೊಂದರ ಬಗ್ಗೆ ಜಾಹೀರಾತು ಬಂದಿತ್ತು. ಅದನ್ನು ಒಪ್ಪಿಕೊಂಡಾಗ ವ್ಯಕ್ತಿಯೊಬ್ಬ ಜಾಸ್ಮಿ ಅವರನ್ನು ಮೇಸೇಜ್‌ ಮೂಲಕ ಸಂಪರ್ಕಿಸಿ ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಸಂಪರ್ಕಿಸುವಂತೆ ತಿಳಿಸಿ ಲಿಂಕ್‌ ನೀಡಿದ್ದ. ಆ ಲಿಂಕ್‌ ಮೂಲಕ ಜಾಸ್ಮಿ ಅವರಿಗೆ ಪ್ರಾರಂಭದಲ್ಲಿ 150ರೂ. ಬಳಿಕ 200 ರೂ. ಖಾತೆಗೆ ಬಂದಿತ್ತು. ಬಳಿಕ ಜ. 8ರಂದು ಟೆಲಿಗ್ರಾಮ್‌ ಆ್ಯಪ್‌ ಮೂಲಕ ಸಂಪರ್ಕಿಸಿ ಟ್ರೇಡಿಂಗ್‌ ವಿವರ ನೀಡಿದ್ದು, ಜಾಸ್ಮಿ ಅವರು ಜ.11ರ ಮಧ್ಯಾಹ್ನದವರೆಗೆ 1,88,000 ರೂ.ಹಣವನ್ನು ಮಹೇಶ್‌ ಜೊಥೆ ಎಂಬಾತನ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದರು.

ಆ ಬಳಿಕ ಆರೋಪಿಯು ಇನ್ನು 1,50,000 ರೂ.ನೀಡಿದರೆ ಎಲ್ಲ ಹಣವನ್ನು ರೀಫಂಡ್‌ ಮಾಡುವುದಾಗಿ ತಿಳಿಸಿದ್ದ. ಟ್ರೇಡಿಂಗ್‌ ಆ್ಯಪ್‌ ಎಂದು ನಕಲಿ ಆ್ಯಪ್‌ ಮೂಲಕ ಹಣ ವರ್ಗಾವಣೆ ಮಾಡಿಸಿ ವಾಪಸ್‌ ಮರಳಿಸದೇ ಆರೋಪಿ ಮೋಸ ಮಾಡಿದ್ದಾನೆ ಎಂದು ಜಾಸ್ಮಿ ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next