Advertisement
ಈ ಬಾರಿ ಲಾಕೌಡೌನ್ ಹಿನ್ನೆಲೆಯಲ್ಲಿ ಗ್ರಾಹಕರು ಅಕ್ಷಯ ತೃತೀಯಾದ ದಿನ ಚಿನ್ನವನ್ನು ಕೊಳ್ಳುವ ಉದ್ದೇಶ ತಪ್ಪಿಸಿಕೊಳ್ಳಬಾರದೆಂದು ಉಭಯ ಜಿಲ್ಲೆಗಳ ಚಿನ್ನಾಭರಣ ಮಳಿಗೆಯವರು ಗ್ರಾಹಕರಿಗೆ ಆನ್‌ಲೈನ್ ಮೂಲಕ ಖರೀದಿ ಮಾಡಲು ಅವಕಾಶ ಸೃಷ್ಟಿಸಿದ್ದಾರೆ.
ಹಲವು ಸಂಸ್ಥೆಗಳು ಸಂಸ್ಥೆಗಳ ವೆಬ್‌ಸೈಟ್ ಮೂಲಕ ಆನ್‌ಲೈನ್ ಖರೀದಿ ಕೈಗೊಳ್ಳಬಹುದೆಂದು ಪ್ರಕಟಿಸಿವೆ. ಇದರಿಂದ ಅಕ್ಷಯ ತೃತೀಯಾ ದಿನದಂದು ಮಳಿಗೆ ಹೋಗದೇ ಇದ್ದರೂ ಚಿನ್ನ ಕೊಳ್ಳುವ ಸಂಭ್ರಮಕ್ಕೆ ಕೊರತೆಯಾಗದು. ಮಂಗಳೂರಿನ ಜೋಯ್ ಆಲುಕ್ಕಾಸ್, ಜೋಸ್ ಆಲುಕ್ಕಾಸ್, ಪುತ್ತೂರಿನ ಜಿ.ಎಲ್. ಆಚಾರ್ಯ ಸ್ವರ್ಣ ಮಳಿಗೆಗಳೂ ಸೇರಿದಂತೆ ಹಲವರು ಆನ್ ಲೈನ್ ಖರೀದಿಗೆ ಆಫರ್‌ಗಳನ್ನು ಘೋಷಿಸಿದ್ದಾರೆ.
Related Articles
ಉಡುಪಿಯಲ್ಲೂ ಅಕ್ಷಯ ತೃತೀಯಾದ ಸೊಬಗಿದೆ. ಆಭರಣ ಜುವೆಲರ್, ಗುಜ್ಜಾಡಿ ಸ್ವರ್ಣ ಜುವೆಲರ್ ಸೇರಿದಂತೆ ಹಲವರು ಆನ್ ಲೈನ್ ಮೂಲಕ ಖರೀದಿಗೆ ವ್ಯವಸ್ಥೆ ಮಾಡಿದ್ದಾರೆ. ವಿವಿಧ ಆಫರ್‌ಗಳನ್ನೂ ಘೋಷಿಸಿದ್ದು, ಗ್ರಾಹಕರು ಮುಂಗಡವಾಗಿ ಹಣ ಪಾವತಿಸಿ ಚಿನ್ನದ ದರವನ್ನು ನಿಗದಿಪಡಿಸಿಕೊಳ್ಳಬೇಕು ಎಂದು ಕಂಪೆನಿಗಳು ತಿಳಿಸಿವೆ. ಗ್ರಾಹಕರು ಆನ್‌ಲೈನ್ ಮೂಲಕ ಖರೀದಿಸಿದ ದಿನವೇ ಚಿನ್ನದ ಮಾಲಿಕತ್ವದ ಪ್ರಮಾಣ ಪತ್ರ ಪಡೆಯ ಬಹುದು ಎಂದು ಕೆಲ ಚಿನ್ನಾಭರಣ ಕಂಪೆನಿಗಳು ತಿಳಿಸಿವೆ.
Advertisement
ಅಕ್ಷಯ ತೃತೀಯಾ ಹಿಂದೂ ಧರ್ಮದ ಪ್ರಕಾರ ವಿಶೇಷ ಮಹತ್ವದ ದಿನ. ಉತ್ತಮ ಮುಹೂರ್ತ, ಒಳ್ಳೆಯ ದಿನ ಎಂಬ ನಂಬಿಕೆ ಹಲವು ವರ್ಷಗಳಿಂದ ಪಾಲಿಸಲಾಗುತ್ತಿದೆ. ಅಂದು ಎಲ್ಲವೂ ಶುಭ ಎಂಬ ನಂಬಿಕೆ ಭಾರತೀಯರದು. ಈ ಬಾರಿಯ ಸಣ್ಣ ಕೊರಗೆಂದರೆ ಒಂದು ತಿಂಗಳು ಮೊದಲೇ ಅಕ್ಷಯ ತೃತೀಯಾಕ್ಕೆಂದು ಬುಕ್ಕಿಂಗ್ ಮಾಡಿ, ಹಬ್ಬದ ದಿನದಂದು ಸಾಲಿನಲ್ಲಿ ನಿಂತು ಖರೀದಿಸುವ ಸಡಗರವಿಲ್ಲವಷ್ಟೇ ; ಆದರೆ ಚಿನ್ನವನ್ನು ಕೊಂಡುಕೊಂಡ ಸಂಭ್ರಮಕ್ಕೇನೂ ಕೊರತೆ ಇಲ್ಲ.
14 ಕೋ. ರೂ. ವ್ಯವಹಾರಕಳೆದ ವರ್ಷ ಅಕ್ಷಯ ತೃತೀಯಾದಂದು ಮಂಗಳೂರಿನ ಸ್ವರ್ಣ ಮಳಿಗೆಗಳಲ್ಲಿ ಅಂದಾಜು 14 ಕೋಟಿ ರೂ.ಗಳಿಗೂ ಮಿಕ್ಕಿ ವ್ಯವಹಾರವಾಗಿತ್ತು. ಸರಾಸರಿ 25 ಕೆಜಿ ಚಿನ್ನ, 100 ಕೆಜಿ ಬೆಳ್ಳಿ ಮಾರಾಟವಾಗಿತ್ತು. ಈ ವರ್ಷ ಮಳಿಗೆಗಳಲ್ಲಿ ಮಾರಾಟ ಇಲ್ಲದಿದ್ದರೂ, ಆನ್‌ಲೈನ್ ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಒಳ್ಳೆಯ ವಹಿವಾಟು ನಿರೀಕ್ಷಿಸಿದ್ದೇವೆ ಎನ್ನುತ್ತಾರೆ ಸ್ವರ್ಣ ಮಳಿಗೆಗಳ ಪ್ರಮುಖರು. ಆನ್‌ಲೈನ್ ಖರೀದಿ
ಅಕ್ಷಯ ತೃತೀಯಾದಂದು ಚಿನ್ನ ಖರೀದಿಸಿದರೆ ಶುಭ ಎಂಬ ನಂಬಿಕೆ ದೆ. ಹಾಗಾಗಿ ಪ್ರತಿ ವರ್ಷ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ ಖರೀದಿಸುತ್ತಾರೆ. ಈ ಬಾರಿ ಲಾಕ್‌ಡೌನ್ ಕಾರಣದಿಂದ ಗ್ರಾಹಕರಿಗೆ ನೇರವಾಗಿ ಮಳಿಗೆಗಳಲ್ಲಿ ಖರೀದಿಸಲು ಅವಕಾಶವಿಲ್ಲ. ಅದಕ್ಕಾಗಿ ನಗರದ ಕೆಲವು ಮಳಿಗೆಗಳು ಆನ್‌ಲೈನ್‌ನಲ್ಲಿ ಖರೀದಿಗೆ ಅವಕಾಶ ಕಲ್ಪಿಸಿವೆ.
– ಪ್ರಶಾಂತ್ ಎಲ್. ಶೇಟ್, ಕಾರ್ಯದರ್ಶಿ, ಚಿನ್ನ-ಬೆಳ್ಳಿ ಮಾರಾಟಗಾರರ ಸಂಘ, ದ.ಕ.