Advertisement

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

07:57 PM Dec 08, 2021 | Team Udayavani |

ಬೆಂಗಳೂರು: ಕೋಟ್ಯಾಂತರ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸದ ಕಾರಣ, ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜಿ ಪ್ರ„ವೇಟ್‌ ಲಿಮಿಟೆಡ್‌ ಎಂಬ ಆನ್‌ಲೈನ್‌ ಗೇಮಿಂಗ್‌ ಕಂಪೆನಿಯ ಬ್ಯಾಂಕ್‌ ಖಾತೆ ಜಪ್ತಿ ಕುರಿತ ಜಿಎಸ್‌ಟಿ ಗುಪ್ತಚರ ಪಡೆಯ ಮಹಾನಿರ್ದೇಶಕರ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ.

Advertisement

ಗೈಮ್ಸ್‌ಕ್ರಾಫ್ಟ್ ಕಂಪನಿಯು 419 ಕೋಟಿ ಜಿಎಸ್‌ಟಿ ಶುಲ್ಕ ಪಾವತಿಸಲು ವಿಫಲವಾಗಿದೆ. ಹೀಗಾಗಿ, ಕಂಪೆನಿಯ ಬ್ಯಾಂಕ್‌ ಖಾತೆಗಳನ್ನು ವಶಕ್ಕೆ ಪಡೆಯಲು ಜಿಎಸ್‌ಟಿ ಗುಪ್ತಚರ ದಳ ಆದೇಶ ಹೊರಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾ.ಎಸ್‌.ಆರ್‌. ಕೃಷ್ಣ ಕುಮಾರ್‌ ನಡೆಸಿ, ತಡೆ ಆದೇಶ ಹೊರಡಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣದ ತನಿಖೆಯು ಪ್ರಾಥಮಿಕ ಹಂತದಲ್ಲಿದೆ. ಸಂಸ್ಥೆ 130 ಕೋಟಿ ರೂ. ಮೊತ್ತದ ಸ್ಥಿರಾಸ್ತಿಯನ್ನು ಭದ್ರತೆಯನ್ನಾಗಿ ನೀಡಿದೆ. ಆದರೂ ಗೇಮ್ಸ್‌ಕ್ರಾಫ್ಟ್ ಸಲ್ಲಿಸಿರುವ ದಾಖಲೆ ಪರಿಗಣಿಸದೇ, ಜಿಎಸ್‌ಟಿ ಗುಪ್ತಚರ ದಳ ಆದೇಶ ಹೊರಡಿಸಿದೆ ಹಾಗೂ ಆ ಆದೇಶವು ವಿವೇಚನಾರಹಿತವಾಗಿದೆ ಎಂದು ಹೇಳಿದೆ.

ಅಲ್ಲದೆ, ಜಿಎಸ್‌ಟಿ ಗುಪ್ತಚರ ಪಡೆಯ ಆದೇಶಕ್ಕೆ ತಡೆಯಾಜ್ಞೆ ನೀಡಿದ ನ್ಯಾಯಪೀಠ, ತಮ್ಮ ಖಾತೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಅರ್ಜಿದಾರ ಕಂಪನಿ ಮಾಡಿರುವ ಮನವಿಯು ನ್ಯಾಯಸಮ್ಮತವಾಗಿದೆ. ಆದ್ದರಿಂದ ಬಾಕಿ, ವೇತನ ಪಾವತಿ, ಗ್ರಾಹಕರು ಮತ್ತು ಪೂರೈಕೆದಾರರಿಗೆ ಹಣ ಪಾವತಿಸಲು ಗೇಮ್ಸ್‌ಕ್ರಾಫ್ಟ್‌ಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿ, ಅರ್ಜಿ ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿದೆ.

ಇದನ್ನೂ ಓದಿ : ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next