Advertisement

Online game: ಆನ್‌ಲೈನ್‌ ಗೇಮ್‌: ಮಹಿಳೆಗೆ 3.50 ಲಕ್ಷ ರೂ. ನಷ್ಟ 

01:33 PM Aug 15, 2023 | Team Udayavani |

ಬೆಂಗಳೂರು: ಆನ್‌ಲೈನ್‌ ಗೇಮ್‌ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಮಹಿಳೆಯೊಬ್ಬರು ಪತ್ರ ಬರೆದಿಟ್ಟು ತನ್ನ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮಹಾಲಕ್ಷ್ಮೀ ಲೇಔಟ್‌ನ ಜೆ.ಸಿ.ನಗರ ನಿವಾಸಿ ನಂದನಾ(26) ಅವರು ತಮ್ಮ ಇಬ್ಬರು ಮಕ್ಕಳಾದ ಸನ್ನಿಧಿ(6) ಹಾಗೂ ಚಾರ್ವಿಕ್‌(1) ಜತೆ ನಾಪತ್ತೆಯಾಗಿದ್ದಾರೆ. ಆ.8ರ ಸಂಜೆ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡು “ನನ್ನನ್ನು ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಮಹಿಳೆ ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಪತಿ ಕೆ.ಜೆ.ಅವಿನಾಶ್‌ ಎಫ್ಐಆರ್‌ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಲೂಡೋ ಗೇಮ್‌: ಅವಿನಾಶ್‌ ಮತ್ತು ನಂದನಾ ಏಳು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆ ಯಾಗಿದ್ದು, ದಂಪತಿಗೆ ಪುತ್ರಿ ಸನ್ನಿಧಿ ಹಾಗೂ ಚಾರ್ವಿಕ್‌ ಎಂಬ ಪುತ್ರ ಇದ್ದಾರೆ. ಅವಿನಾಶ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಂದನಾ ಗೃಹಿಣಿಯಾಗಿದ್ದರು. ನಂದನಾ ಒಂದು ವರ್ಷದಿಂದ ಮೊಬೈಲ್‌ನಲ್ಲಿ ಆನ್‌ಲೈನ್‌ ಲೂಡೋ ಗೇಮ್‌ ಆಡುತ್ತಿದ್ದರು.

ಚಿನ್ನಾಭರಣ ಅಡಮಾನ: ಈ ಆಟಕ್ಕಾಗಿ ಮನೆ ಯಲ್ಲಿದ್ದ 50 ಸಾವಿರ ರೂ. ನಗದು ಹಾಗೂ 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಅಡಮಾನ ವಿರಿಸಿ ಪಡೆದ ಹಣ ಹಾಗೂ ಸಂಬಂಧಿಕರಿಂದ ಸಾಲ ಪಡೆದ 1.75 ಲಕ್ಷ ರೂ. ಸೇರಿ ಒಟ್ಟು 3.45 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಗೊತ್ತಾಗಿ ತಿಂಗಳ ಹಿಂದೆ ಅವಿನಾಶ್‌ ಪ್ರಶ್ನಿಸಿದಾಗ “ನಾನು ತಪ್ಪು ಮಾಡಿದ್ದೇನೆ. ಇನ್ನು ಮುಂದೆ ಹೀಗೆ ಮಾಡು ವುದಿಲ್ಲ’ ಎಂದು ನಂದನಾ ತಪ್ಪೊಪ್ಪಿಕೊಂಡಿದ್ದರು.

ಈ ಮಧ್ಯೆಯೂ ಆನ್‌ಲೈನ್‌ ಗೇಮ್‌ ಆಡಲು ಮತ್ತೂಮ್ಮೆ ಚಿನ್ನಾಭರಣ ಅಡಮಾನ ಇಟ್ಟಿದ್ದಾರೆ. ಜು.19ರಂದು 1.20 ಲಕ್ಷ ಮೌಲ್ಯದ ಚಿನ್ನಾಭರಣ ಅಡಮಾನವಿರಿಸಿ ಬಂದ ಹಣವನ್ನು ಗೇಮ್‌ಗೆ ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ. ಈ ವಿಚಾರ ಅವಿನಾಶ್‌ಗೆ ಗೊತ್ತಾಗಿದ್ದು, ಆತ ಆಕೆಯ ಪಾಲಕರಿಗೆ ತಿಳಿಸಿ, ಆಕೆಗೆ ಸೂಕ್ತ ತಿಳಿವಳಿಕೆ ನೀಡು ವಂತೆ ಹೇಳಿದ್ದಾರೆ. ಆ.8ರಂದು ಮ.3 ಗಂಟೆಗೆ ಅವಿ ನಾಶ್‌ ಪುತ್ರಿ ಸನ್ನಿಧಿಯನ್ನು ಶಾಲೆಯಿಂದ ಮನೆಗೆ ಕರೆತಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಆ ಬಳಿಕ ನಂದನಾ ಮಕ್ಕಳ ಜತೆ ನಾಪತ್ತೆಯಾಗಿದ್ದಾರೆ.

Advertisement

“ದಯವಿಟ್ಟು ಕ್ಷಮಿಸಿಬಿಡಿ’: ಪತಿಗೆ ಪತ್ರ:

ಆ.8ರಂದು ಸಂಜೆ 4.45ಕ್ಕೆ ಅವಿನಾಶ್‌, ಪತ್ನಿ ನಂದನಾ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌x ಆಫ್ ಬಂದಿದೆ. ಗಾಬರಿಗೊಂಡು ಕೂಡಲೇ ಮನೆ ಬಳಿ ಬಂದು ತಮ್ಮ ಬಳಿಯಿಂದ ಕೀ ಬಳಸಿ ಮನೆ ಬೀಗ ತೆರೆದಿದ್ದಾರೆ. ಈ ವೇಳೆ ಮನೆಯ ಟೇಬಲ್‌ ಮೇಲೆ “ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ. ನಿಮ್ಮನ್ನು ಕೈ ಮುಗಿದು ಕೇಳಿ ಕೊಳ್ಳುತ್ತೇನೆ. ನನ್ನಿಂದ ನಿಮಗೆ ನಷ್ಟವಾಗಿದೆ. ಮನೆಯಲ್ಲಿರುವ ದುಡ್ಡು ತೆಗೆದುಕೊಂಡು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಬಿಡಿ’ ಎಂದು ಪತ್ರ ಬರೆದಿಟ್ಟಿರುವುದು ಕಂಡು ಬಂದಿದೆ. ಜತೆಗೆ ಮನೆ ಪರಿಶೀಲಿಸಿ ದಾಗ ನಂದನಾ ತನ್ನ ಹಾಗೂ ಮಕ್ಕಳ ದಾಖಲೆಗಳು ಮತ್ತು ಬಟ್ಟೆಗಳನ್ನು ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಸಂಬಂಧಿಕರು, ಸ್ನೇಹಿತರು, ಪರಿಚಿತರ ಮನೆಗಳಲ್ಲಿ ಹುಡುಕಾಡಿದರೂ ಪತ್ನಿ ಮಕ್ಕಳು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ಮತ್ತು ಆಕೆಯ ಮಕ್ಕಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಮಹಾಲಕ್ಷ್ಮೀ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next