Advertisement

Online Gameನಲ್ಲಿ 79 ಲಕ್ಷ ರೂಪಾಯಿ, 18 ಎಕ್ರೆ ಹೊಲ ಕಳಕೊಂಡ ಯುವಕ!

10:22 AM Aug 14, 2023 | Team Udayavani |

ರಾಯಚೂರು: ಬೇಗನೆ ಹಣ ಗಳಿಸುವ ಆಸೆಯಿಂದ ಆನ್‌ ಲೈನ್‌ ಗೇಮ್‌ ಆ್ಯಪ್‌ಗಳ ಸುಳಿಗೆ ಸಿಲುಕಿದ ಯುವನಕೊಬ್ಬ ಲಕ್ಷಾಂತರ ರೂ. ಕಳೆದುಕೊಂಡಿದ್ದಾನೆ. ಈಗ ತನಗೆ ವಂಚನೆಯಾಗಿದ್ದು, ಹಣವನ್ನು ಮರಳಿ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾನೆ.

Advertisement

ಇದನ್ನೂ ಓದಿ:Fraud: ಹೈದ್ರಾಬಾದ್‌ ಉದ್ಯಮಿಗೆ ವಂಚನೆ: ‌ಕೇರಳ ಮೂಲದ ದಂಪತಿ ಸೆರೆ

ಲಿಂಗಸುಗೂರು ತಾಲೂಕಿನ ಮುದಗಲ್ಲ ಪಟ್ಟಣದ ನಿವಾಸಿ ಸಹದೇವಪ್ಪ ಹಣ ಕಳೆದುಕೊಂಡವನು. ಆನ್‌ಲೈನ್‌ ಗೇಮ್‌ ಚಟದಿಂದ ಸುಮಾರು 79 ಲಕ್ಷ ರೂ. ಹಾಗೂ 18 ಎಕ್ರೆ ಜಮೀನನ್ನು ಕಳೆದುಕೊಂಡಿದ್ದಾಗಿ ತಿಳಿಸಿದ್ದಾನೆ.

ಆ್ಯಪ್‌ಗಳ ಡೀಲರ್‌ ಮೈನುದ್ದೀನ್‌, ಚನ್ನಬಸವ, ರುದ್ರಗೌಡ, ಹನುಮನಗೌಡ ಎನ್ನುವವರಿಂದ ನನಗೆ ವಂಚನೆಯಾಗಿದ್ದು, ಹಣ ಪಡೆದು ಲಾಗಿನ್‌ ಐಡಿ, ಪಾಸ್‌ ವರ್ಡ್‌ ನೀಡುತ್ತಿದ್ದರು ಎಂದು ಆಪಾದಿಸಿದ್ದಾನೆ. ವಿವಿಧ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳಾದ ರಮ್ಮಿ, ಕ್ರಿಕೆಟ್‌, ಕ್ಯಾಸಿನೋ ಸಹಿತ ಇತರ ಆಟಗಳಿಗೆ ದುಡ್ಡು ಕಟ್ಟಿದ್ದಾನೆ. ಆ್ಯಪ್‌ಗಳು ಹಾಗೂ ಅವುಗಳ ಡೀಲರ್‌ಗಳಿಂದ ವಂಚನೆಯಾಗಿದೆ ಎಂದು ಈಗ ಅಲವತ್ತುಕೊಂಡಿದ್ದಾನೆ. 2014ರಿಂದ ಈವರೆಗೆ ಆನ್‌ಲೈನ್‌ ಗೇಮ್‌ ಗಳ ಮೇಲೆ ಲಕ್ಷಾಂತರ ರೂ. ಸುರಿದ ಯುವಕ ತನಗೆ ನ್ಯಾಯ ಕಲ್ಪಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next