Advertisement

ಆನ್‌ಲೈನ್‌ನಲ್ಲಿ ಬಟ್ಟೆ ಖರೀದಿಸಿದ ಮಹಿಳೆಗೆ 65 ಸಾವಿರ ರೂ. ವಂಚನೆ

05:02 PM Jun 20, 2023 | Team Udayavani |

ಬೆಂಗಳೂರು: ಆನ್‌ಲೈನ್‌ನಲ್ಲಿ ಬಟ್ಟೆಗಳನ್ನು ಖರೀದಿಸಲು ಹೋದ ಮಹಿಳೆಯೊಬ್ಬರು ಸೈಬರ್‌ ಕಳ್ಳರ ಗಾಳಕ್ಕೆ ಸಿಲುಕಿ ಬರೋಬ್ಬರಿ 65 ಸಾವಿರ ರೂ. ಕಳೆದುಕೊಂಡಿದ್ದಾರೆ.

Advertisement

ನಾಗರಬಾವಿಯ ನಿವಾಸಿ ಅರ್ಪಿತಾ ಬಾಸಕ್‌ (44) ವಂಚನೆಗೊಳಗಾದವರು.

ಅರ್ಪಿತಾ ಜೂ.14ರಂದು ಆನ್‌ಲೈನ್‌ ವೆಬ್‌ಸೈಟ್‌ ವೊಂದರಲ್ಲಿ ಬಟ್ಟೆ ಖರೀದಿಸಲು ಕೆಲ ಪ್ರಕ್ರಿಯೆ ನಡೆಸಿದ್ದರು. ಇದಾದ ಕೆಲ ಹೊತ್ತಿನಲ್ಲಿ ಇದೇ ವೆಬ್‌ಸೈಟ್‌ನ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತ ಯುವಕ, “ನೀವು ಬಹುಮಾನಗಳನ್ನು ಗೆದ್ದಿದ್ದೀರಿ’ ಎಂದು ನಂಬಿಸಿದ್ದ. ಬಹುಮಾನವಾಗಿ ಗೆದ್ದ ಬೆಲೆ ಬಾಳುವ ಉಡುಗೊರೆ ಪಡೆಯಲು 65 ಸಾವಿರ ರೂ. ಅನ್ನು ವಿವಿಧ ಅಪರಿಚಿತ ಯುಪಿಐ ಐಡಿಗಳಿಗೆ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಆತನ ಮಾತಿನ ಮೋಡಿಗೆ ಮರುಳಾದ ಅರ್ಪಿತಾ, ಅಪರಿಚಿತ ವ್ಯಕ್ತಿ ಸೂಚಿಸಿದ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಇದಾದ ಬಳಿಕ ಅರ್ಪಿತಾ ಮನೆಗೆ ಉಡುಗೊರೆ ಬಂದಿರಲಿಲ್ಲ. ಇತ್ತ ಕರೆ ಮಾಡಿದ ವ್ಯಕ್ತಿಯೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ಪರಿಶೀಲಿಸಿ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next