Advertisement
ಆ್ಯಪ್ ಮೂಲಕ ಸಾವಿರಾರು ರೂ. ವಂಚನೆಬೈಂದೂರಿನ ಮಹಾದೇವ ಅವರು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದಾಖಲಾತಿಗಾಗಿ ಗೂಗಲ್ ಸಹಾಯದಿಂದ ಸಂಪರ್ಕ ಸಂಖ್ಯೆಯನ್ನು ಹುಡುಕಿದಾಗ ಒಂದು ಮೊಬೈಲ್ ಸಂಖ್ಯೆ ದೊರೆತಿತ್ತು. ಆತನಿಗೆ ಕರೆ ಮಾಡಿ ವಿಚಾರ ಹೇಳಿದಲ್ಲಿ ಇನ್ನೊಂದು ದೂರವಾಣಿ ಸಂಖ್ಯೆ ನೀಡಿ ಕಸ್ಟಮರ್ ಸಪೋರ್ಟ್ (1.0) ಆ್ಯಪ್ ಅನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿ ಅದರಲ್ಲಿ ವಿವರಗಳನ್ನು ಪೂರ್ಣಗೊಳಿಸಲು ಸೂಚಿಸಿ ಹಣ ಪಾವತಿಸುವಂತೆ ತಿಳಿಸಿದ್ದರು. ಅದರಂತೆ ಮಹಾದೇವ ಅವರು ಫೋನ್ ಪೇ ಮೂಲಕ ಪಾಸ್‌ವರ್ಡ್ ಹಾಗೂ ಆ ವ್ಯಕ್ತಿ ಕಳುಹಿಸಿದ ಓಟಿಪಿ ಸಂಖ್ಯೆಯನ್ನು ಕೂಡ ನಮೂದಿಸಿದ್ದು, ಅನಂತರ ಅಪಾಯಿಂಟ್‌ಮೆಂಟ್ ಕೋಡ್ ಅನ್ನು ಕಳುಹಿಸಿ ಮಾರನೇ ದಿನ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರು. ಬಳಿಕ ಆ ವ್ಯಕ್ತಿ ಇವರ ಕರ್ಣಾಟಕ ಬ್ಯಾಂಕ್ ಹಟ್ಟಿಯಂಗಡಿ ಶಾಖೆಯ ಎಸ್‌ಬಿ ಖಾತೆಯಿಂದ ಹಂತ-ಹಂತವಾಗಿ ಒಟ್ಟು 99,992 ರೂ.ಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿದ್ದಾರೆ.
ಟಾಸ್ಕ್ ನೆಪದಲ್ಲಿ ಟೆಲಿಗ್ರಾಮ್ ಆ್ಯಪ್ ಮೂಲಕ ಸಂಪರ್ಕಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ಮಣಿಪಾಲದ ರಕ್ಷಾ ವಂಚನೆಗೊಳಗಾದವರು. ಇವರಿಗೆ ವಾಟ್ಸ್ ಆ್ಯಪ್‌ನಲ್ಲಿ ಅಪರಿಚಿತ ಸಂಖ್ಯೆಯಲ್ಲಿ ಟಾಸ್ಕ್ ಉದ್ಯೋಗ ನಡೆಸಿ ಕಮಿಷನ್ ಮತ್ತು ಹೆಚ್ಚಿನ ಹಣ ಪಡೆಯುವ ಬಗ್ಗೆ ಸಂದೇಶ ಬಂದಿತ್ತು. ಬಳಿಕ ಆರೋಪಿಗಳು ಅವರನ್ನು ಟೆಲಿಗ್ರಾಮ್ ಆ್ಯಪ್ ಮೂಲಕ ಸಂಪರ್ಕಿಸಿ ಬ್ಯಾಂಕ್ ಖಾತೆಗಳನ್ನು ಹಾಗೂ ಯುಐ.ಡಿ.ಗಳನ್ನು ನೀಡಿದ್ದು, ಇದನ್ನು ಸತ್ಯವೆಂದು ನಂಬಿದ ಅವರು ಹಂತ-ಹಂತವಾಗಿ ಒಟ್ಟು 2,92,500 ರೂ.ಗಳನ್ನು ಆರೋಪಿಗಳ ಖಾತೆಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಪಡೆದ ಹಣವನ್ನು ಹಾಗೂ ಉದ್ಯೋಗವನ್ನು ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Related Articles
ಇ-ಕೆವೈಸಿ ಅಪ್‌ಡೇಟ್ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆ ನಡೆದಿದೆ. ಪರ್ಕಳದ ಅವಿನಾಶ್ ಶೆಟ್ಟಿಗಾರ್ ಅವರು ಮಣಿಪಾಲದ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಅದಕ್ಕೆ ಮೊಬೈಲ್ ನಂಬರ್ ಅವರ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದರು. ಮೇ 18ರಂದು ಅವರ ಮೊಬೈಲ್ ಸಂಖ್ಯೆಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು ಕೆನರಾ ಬ್ಯಾಂಕ್ ಸಿಬಂದಿ ಎಂಬುದಾಗಿ ಹೇಳಿ, ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿದೆ ಕೂಡಲೇ ಕೆ.ವೈ.ಸಿ. ಅಪ್‌ಡೇಟ್ ಮಾಡಬೇಕು ಎಂಬುದಾಗಿ ಅವರನ್ನು ನಂಬಿಸಿ ಕಾರ್ಡ್ ಹಾಗೂ ಓ.ಟಿ.ಪಿ. ಸಂಖ್ಯೆ ಪಡೆದು ಹಂತಹಂತವಾಗಿ ಒಟ್ಟು 1,07,000 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಮೂರು ಪ್ರತ್ಯೇಕ ಪ್ರಕರಣಗಳು ಸೆನ್ ಠಾಣೆಯಲ್ಲಿ ದಾಖಲಾಗಿದೆ.
Advertisement