ಬೆಂಗಳೂರು: ಬೆಸ್ಕಾಂ ಸಾಫ್ಟ್ ವೇರ್ ನ ತಾಂತ್ರಿಕ ದೋಷದಿಂದಾಗಿ ನವೆಂಬರ್ 1 ರಂದು ನೀಡಿರುವ ವಿದ್ಯುತ್ ಬಿಲ್ ನಲ್ಲಿ ಕಂಡುಬಂದ ವ್ಯತ್ಯಾಸವನ್ನು ಮರು ದಿನವೇ ಸರಿಪಡಿಸಲಾಗಿದ್ದು, ಆನ್ ಲೈನ್ ಬಿಲ್ ಪಾವತಿಗೆ ಯಾವುದೇ ತೊಂದರೆಯಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಸಾಫ್ಟ್ ವೇರ್ ತಾಂತ್ರಿಕ ದೋಷದಿಂದಾಗಿ ನವೆಂಬರ್ 1 ರಂದು ಗ್ರಾಹಕರಿಗೆ ನೀಡಿರುವ ಬಿಲ್ ನಲ್ಲಿ ಕಂಡಬಂದ ವೆತ್ಯಾಸವನ್ನು ತಕ್ಷಣವೇ ಸರಿಪಡಿಸಿ ಆನ್ ಲೈನ್ ಬಿಲ್ ಪಾವತಿಗೆ ಅವಕಾಶ ನೀಡಲಾಗಿದ್ದು, ಗ್ರಾಹಕರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಇನ್ಫೋಸಿಸ್ ನಿಂದ ಇನ್ ಫೋಟೆಕ್ ಕಂಪ್ಯೂಟರ್ ಸೆಲ್ಯೂಷನ್ಸ್ ಕಂಪನಿಯು ಸಾಫ್ಟ್ ವೇರ್ ನಿರ್ವಹಣೆ ಹೊಣೆಗಾರಿಕೆ ವಹಿಸಿಕೊಂಡ ಸಂದರ್ಭದಲ್ಲಾದ ತಾಂತ್ರಿಕ ದೋಷದಿಂದಾಗಿ ಗ್ರಾಹಕರಿಗೆ ನವೆಂಬರ್ 1 ರಂದು ನೀಡಿದ್ದ ಭೌತಿಕ ಬಿಲ್ ನಲ್ಲಿ ಕಂಡ ಬಂದ ದೋಷವನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.
ಇದನ್ನೂ ನೋಡಿ:ಅವಧಿಗೂ ಮುನ್ನ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಸುಪ್ರೀಂ ಆದೇಶ
ಕಂಪ್ಯೂಟರ್ ನಲ್ಲಿ ಸರಿಯಾದ ಬಿಲ್ ಮೊತ್ತವನ್ನು ನಮೂದಿಸಿರುವುದರಿಂದ ಬೆಸ್ಕಾಂ ಬಿಲ್ ಕೌಂಟರ್ ನಲ್ಲಿ ಅಥವಾ ಆನ್ ಲೈನ್ ಪಾವತಿ ಸಂದರ್ಭದಲ್ಲಿ ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಗ್ರಾಹಕರಿಗೆ ಆನ್ ಲೈನ್ ಬಿಲ್ ಪಾವತಿಯಲ್ಲಿ ತೊಂದರೆ ಆಗಿದೆ ಎಂದು ಕೆಲವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.