Advertisement

ಇಂದಿನಿಂದ ಆನ್‌ಲೈನ್‌ ತರಗತಿ ಆರಂಭ: ಸೂಚನೆ

09:41 AM Jul 03, 2020 | Suhan S |

ದಾವಣಗೆರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2018-19ನೇ ಸಾಲಿನ ದ್ವಿತೀಯ ವರ್ಷದ ಬಿಎ, ಬಿಕಾಂ ಮತ್ತು 2019-20ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಹಾಗೂ 2019-20ನೇ ಜನವರಿ ಆವೃತ್ತಿ ಸಾಲಿನಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ಬಿಎ, ಬಿಕಾಂ, ಬಿ ಲೈಬ್ರರಿ, ಐಎಸ್‌ಸಿ, ಎಂಎ, ಎಂಕಾಂ, ಎಂಎಸ್ಸಿ, ಎಂಬಿಎ, ಎಂಎಲ್‌ಐಬಿ, ಐಎಸ್‌ಸಿ, ಬಿಇಡಿ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ತರಗತಿಗಳನ್ನು ಕೋವಿಡ್‌-19 ಕಾರಣದಿಂದಾಗಿ ಭೌತಿಕವಾಗಿ ನಡೆಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೆಎಸ್‌ಒಯು ಕನೆಕ್ಟ್ ಫ್ಲಾಟ್‌ಫಾರಂ ಮುಖಾಂತರ ಆನ್‌ಲೈನ್‌ ತರಗತಿಗಳನ್ನು ಜು. 3 ರಿಂದ 14 ರವರೆಗೆ ನಡೆಸಲಾಗುವುದು.

Advertisement

ಕೌಶಲ್ಯಾಭಿವೃದ್ಧಿ ತರಬೇತಿಯ ಪಠ್ಯ ವಿಷಯ, ವೇಳಾಪಟ್ಟಿ ಮತ್ತು ತರಗತಿಗಳ ವೆಬ್‌ ಲಿಂಕ್‌ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೌಶಲ್ಯಾಭಿವೃದ್ಧಿ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳು ಇ-ಡಿಜಿಟಲ್‌ ಪ್ರಮಾಣಪತ್ರಗಳನ್ನು ಆನ್‌ ಲೈನ್‌ ಮೂಲಕ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಯೋಜನಾಧಿಕಾರಿ (96114-34810) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next