Advertisement
2020-21ನೇ ಸಾಲಿನ ದ್ವಿ. ಪಿಯುಸಿ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ. ಪ್ರಸಕ್ತ ಸಾಲಿನ ಭೌತಿಕ ತರಗತಿಗಳ ಬಗ್ಗೆ ಸರಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದರಿಂದ ಆನ್‌ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಬೇಕು ಎಂದು ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.
ಈ ಬಾರಿ ಆಯಾ ಕಾಲೇಜುಗಳ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಎಂ.ಎಸ್. ಟೀಮ್, ಗೂಗಲ್ ಮೀಟ್, ಝೂಮ್ ಆ್ಯಪ್ ಅಥವಾ ಜಿಯೋ ಮೀಟ್ ಗಳನ್ನು ಉಪಯೋಗಿಸಿಕೊಂಡು ಪಾಠ ಆರಂಭಿಸಬೇಕು. ಆಯಾ ಕಾಲೇಜಿನ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಂತೆ ವೇಳಾಪಟ್ಟಿ ತಯಾರಿಸುವಂತೆ ನಿರ್ದೇಶನ ನೀಡಿದೆ. ವೇಳಾಪಟ್ಟಿ
ಬೆಳಗ್ಗೆ 10ಕ್ಕೆ ತರಗತಿ ಆರಂಭಿಸಿ 11 ಗಂಟೆ ತನಕ ಮೊದಲ ಅವಧಿ, 11ರಿಂದ 12ರ ವರೆಗೆ ಎರಡನೇ ಅವಧಿ ಅನಂತರ ಅರ್ಧಗಂಟೆ ವಿರಾಮ, ಮಧ್ಯಾಹ್ನ 12.30ರಿಂದ 2.30ರ ವರೆಗೆ ತಲಾ ಒಂದು ಗಂಟೆಯ ಎರಡು ಅವಧಿ ನಡೆಸಲು ತಿಳಿಸಿದೆ.
Related Articles
ಮುಂದಿನ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿರುವುದರಿಂದ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಸೇರಿದಂತೆ ಶೈಕ್ಷಣಿಕ ಚಟುವಟಿಕೆ ಇನ್ನಷ್ಟು ಚುರುಕುಗೊಳ್ಳಲಿವೆ. ಜುಲೈ 20ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವ ಸಾಧ್ಯತೆಯಿದೆ.
Advertisement