Advertisement
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿ ಪೂರ್ಣ ದಾಖಲೆಗಳೊಂದಿಗೆ ವ್ಯಾಸಂಗ ಮಾಡಿದ ಪ್ರೌಢಶಾಲೆಯ ಮೂಲಕವೇ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಬಾರಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಇದು ಮೂರು ಬಾರಿ ಅಂಕಪಟ್ಟಿ ಕಳೆದುಹೋದ ಸಂದರ್ಭದಲ್ಲಿ. ಈಗ ಈ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಅಭ್ಯರ್ಥಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಅಂಕಪಟ್ಟಿಯಲ್ಲಿ ನಮೂದಾಗಿರುವ ಪಾಲಕ, ಪೋಷಕರೂ ಅರ್ಜಿ ಸಲ್ಲಿಸಬಹುದಾಗಿದೆ.
ಅಂಕಪಟ್ಟಿಯ ನಕಲು ಪ್ರತಿ ಪಡೆಯಲು ಅಭ್ಯರ್ಥಿಗಳು ಆಧಾರ್ ನೀಡುವುದು ಕಡ್ಡಾಯ. ಅಂಕಪಟ್ಟಿ ಕಳೆದು ಹೋಗಿರುವ ಬಗ್ಗೆ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕಾಗಿತ್ತು. ಈಗ ಅದು ಅಗತ್ಯವಿಲ್ಲ. ಬದಲಾಗಿ ಮಂಡಳಿಯ ಅಫಿಡವಿಟ್ ಭರ್ತಿ ಮಾಡಿ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಮೂಲ ಅಂಕಪಟ್ಟಿಯ ಪ್ರತಿ ಲಭ್ಯವಿದ್ದಲ್ಲಿ ಅದು, ಆಧಾರ್ ಕಾರ್ಡ್, ಅಫಿಡವಿಟ್ ಪ್ರತಿಗಳನ್ನು ಪಿಡಿಎಫ್ ರೂಪದಲ್ಲಿ ಅಪ್‌ಲೋಡ್ ಮಾಡಿ, ಆನ್‌ಲೈನ್ ಶುಲಪಾವತಿಸಿ, ಅಂಕಪಟ್ಟಿ ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಅರ್ಜಿ ಸಲ್ಲಿಕೆ ಹೇಗೆ?
//kseeb.kar.nic.in/ ಗೆ ಭೇಟಿ ನೀಡಬೇಕು.
– “ಆನ್‌ಲೈನ್ ಸೇವೆಗಳು’ ಆಯ್ಕೆ ಕ್ಲಿಕ್ ಮಾಡಬೇಕು. ಆಗ ಎಸೆಸೆಲ್ಸಿ ಮತ್ತು ಇತರ ಪರೀಕ್ಷೆ ಎಂಬ ಆಯ್ಕೆಗಳು ಬರುತ್ತವೆ.
– ಎಸೆಸೆಲ್ಸಿ ಆಯ್ಕೆಯಲ್ಲೇ ಮುಂದುವರಿದರೆ, ಅಂಕಪಟ್ಟಿಗೆ ಅರ್ಜಿ ಸಲ್ಲಿಸುವ ಇನ್ನೊಂದು ಆಯ್ಕೆ ಸಿಗುತ್ತದೆ.
– ಕ್ಲಿಕ್ ಮಾಡುತ್ತಿದ್ದಂತೆ ಹೊಸ ಪುಟ ತೆರೆದುಕೊಳ್ಳುತ್ತದೆ.
– ನಕಲು ಅಂಕ ಪಟ್ಟಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ವಿವರವಾದ ಮಾಹಿತಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದೆ.
– ಪಕ್ಕದಲ್ಲೇ ಅರ್ಜಿ(ಅಪ್ಲಿಕೇಷನ್) ಕಾಲಂ ಸಿಗುತ್ತದೆ. ಅದನ್ನು ಭರ್ತಿ ಮಾಡಿದ ಅನಂತರ ದಾಖಲಾತಿ ಅಪ್‌ಲೋಡ್, ಶುಲ್ಕ ಪಾವತಿ, ಅರ್ಜಿ ಪರಿಶೀಲನೆ ಮತ್ತು ಸಲ್ಲಿಸಬಹುದಾಗಿದೆ.
Related Articles
-ವಿ. ಸುಮಂಗಲಾ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ
Advertisement