Advertisement

 ಶೀತ-ಕೆಮ್ಮು ನಿವಾರಣೆಗೆ ಈರುಳ್ಳಿ ಸಹಕಾರಿ    

04:05 PM Jun 11, 2021 | Team Udayavani |

ಅಡುಗೆಗೆ ಅಗತ್ಯವಾಗಿ ಬೇಕಾಗುವ ಈರುಳ್ಳಿ ಕೆಲವು ಔಷಧಿಯ ಅಂಶಗಳನ್ನು ಹೊಂದಿದೆ.  ಅದರಲ್ಲೂ ಸಾಮಾನ್ಯವಾಗಿ ಮಳೆಗಾಲದಲ್ಲಿ ಬರುವ ಶೀತ, ಕೆಮ್ಮ, ನೆಗಡಿಯಂತಹ ಕಾಯಿಲೆ ನಿವಾರಣೆಗೆ ಮನೆ ಮದ್ದು.

Advertisement

ಹೌದು, ಮಳೆಗಾಲದಲ್ಲಿ ಶೀತ, ಕೆಮ್ಮು ಜ್ವರ ಹೀಗೆ ಅನೇಕ ಖಾಯಿಲೆಗಳು ಬರೋದು ಸಾಮಾನ್ಯ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ಇದಕ್ಕೆ ಮುಖ್ಯ ಕಾರಣ. ಇವುಗಳನ್ನು ತಪ್ಪಿಸಲು, ರೋಗಗಳಿಂದ ದೂರವಿರಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ.  ಇದಕ್ಕಾಗಿ ಈರುಳ್ಳಿ ಬಹು ಉಪಯೋಗಿ.

ಈರುಳ್ಳಿ ಬಳಸಿ ನೀವು ಮಳೆಗಾಲದ ಅನೇಕ ವೈರಲ್ ಸೋಂಕುಗಳಿಂದ ಪರಿಹಾರ ಪಡೆಯಬಹುದು. ಇದಕ್ಕಾಗಿ ಸಣ್ಣ ಈರುಳ್ಳಿ ತೆಗೆದುಕೊಂಡು, ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳನ್ನು 5 ರಿಂದ 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತ್ರ ಅದನ್ನು ಪೇಸ್ಟ್ ಮಾಡಿ. ಈ ಪೇಸ್ಟನ್ನು ದಿನಕ್ಕೆರಡು ಬಾರಿ ತಿನ್ನಿ. ಇದನ್ನು ಕೆಲವು ದಿನಗಳವರೆಗೆ ನಿಯಮಿತವಾಗಿ ಬಳಸುವುದರಿಂದ ನಿಮಗೆ ಶೀತ, ಕೆಮ್ಮಿನಿಂದ ಪರಿಹಾರ ಸಿಗುತ್ತದೆ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.

ಇದಕ್ಕೆ ನೀವು ಜೇನುತುಪ್ಪವನ್ನು ಸಹ ಬಳಸಬಹುದು. ಆದ್ರೆ ಜೇನುತುಪ್ಪದ ಪ್ರಮಾಣ ಹೆಚ್ಚಾಗದಂತೆ ಎಚ್ಚರ ವಹಿಸಿ. ಸಣ್ಣ ಚಮಚದಷ್ಟು ಮಾತ್ರ ಜೇನುತುಪ್ಪ ಬಳಸಿ. ಇದ್ರಿಂದ ಗಂಟಲು ಕೆರೆತ, ಕಟ್ಟಿದ ಮೂಗು ಸರಿಯಾಗುತ್ತದೆ. ಕೆಮ್ಮಿನೊಂದಿಗೆ ಕಫವಿದ್ದಲ್ಲಿ ಕರಿಮೆಣಸನ್ನು ತುಪ್ಪದೊಂದಿಗೆ ಬೆರೆಸಿ ತಿನ್ನಿರಿ. ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದನ್ನು ಉಪ್ಪಿನೊಂದಿಗೆ ತಿನ್ನಿ. ಇದು ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next