Advertisement

ದಕ್ಷಿಣಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಈರುಳ್ಳಿ ಅಗ್ಗ

10:02 PM Dec 09, 2019 | Team Udayavani |

ಬೆಂಗಳೂರು: ಮಾರುಕಟ್ಟೆಗಳಲ್ಲಿ ತೀವ್ರ ಈರುಳ್ಳಿ ಕೊರೆತೆಯ ಕಾರಣದಿಂದ ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದೆ. ಕೆಲವು ಕಡೆಗಳಲ್ಲಿ ಕೆ.ಜಿಯೊಂದಕ್ಕೆ 200 ರೂ.ನಿಗದಿ ಪಡಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ದಿನವೊಂದಕ್ಕೆ 45 ರೂ.ಗಳ ಏರಿಕೆ ಕಾಣುವ ಮೂಲಕ 200 ರೂ.ಗಳ ಆಸುಪಾಸಿನಲ್ಲಿ ವ್ಯವಹಾರ ನಡೆಸಿದೆ.

Advertisement

ಪಶ್ಚಿಮ ಬಂಗಾಲದಲ್ಲಿ 50 ರೂ.ಗಳಿಗೆ ದೊರೆಯುತ್ತಿದ್ದ ಈರುಳ್ಳಿ 80 ರೂ.ಗೆ ಸೋಮವಾರ ಏರಿಕೆಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ 5 ರಿಂದ 20 ರೂ,ಗಳ ವರೆಗೆ ಏರಿಕೆಯಾಗಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಈರುಳಗಳಿ ದರಗಳು ದುಬಾರಿಯಾಗಿದೆ. ಇಲ್ಲಿ ಈರುಳ್ಳಿ ದುಬಾರಿಯಾದ ಟಾಪ್‌ 5 ನಗರಗಳನ್ನು ಇಲ್ಲಿ ಕೊಡಲಾಗಿದೆ. ಪಣಜಿ (ಗೋವಾ) 165 ರೂ., ಕೋಯಿಕೋಡ್‌ (ಕೇರಳ) 160 ರೂ., ಅಂಡಾಮಾನ್‌ 160 ರೂ., ತಿರುವನಂತಪುರ (ಕೇರಳ) 160 ರೂ., ವಯನಾಡ್‌ (ಕೇರಳ) 155 ರೂ.ಗೆ ಮಾರಾಟವಾಗಿದೆ.

ಉತ್ತರ ಭಾರತದ ಕೆಲವು ನಗರಗಳಲ್ಲಿ ಈರುಳ್ಳಿ ದರ 55 ರೂ.ಗಳ ಕೆಳಗೆ ಇದೆ. ಅವುಗಳ ಪೈಕಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ 45 ರೂ., ಚತ್ತೀಸ್‌ಗಢನ‌ ಅಂಬಿಕಾಪುರದಲ್ಲಿ 50 ರೂ., ರಾಜಸ್ಥಾನದ ಉದಯ್‌ಪುರದಲ್ಲಿ 50 ರೂ., ಮಧ್ಯಪ್ರದೇಶದ ಗ್ವಾಲಿಯರ್‌ ಮತ್ತು ಸಾಗರ್‌ನಲ್ಲಿ 55 ರೂ.ಗಳಿಗೆ ಈರುಳ್ಳಿ ಮಾರಾಟವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next