Advertisement

ಭಾರಿ ಮಳೆಗೆ 4 ಎಕರೆ ಜಾಗದಲ್ಲಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣ ನಾಶ

11:57 AM Oct 08, 2020 | sudhir |

ಗದಗ: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದ ಹಾಳಾದ ನಾಲ್ಕು ಎಕರೆಯಲ್ಲಿ ಬೆಳೆದ ಈರುಳ್ಳಿಯನ್ನು ತಾಲೂಕಿನ ಸಂಭಾಪುರ ಗ್ರಾಮದ ಭೀಮರೆಡ್ಡಿ ಹಾಗೂ ಗೋವಿಂದರೆಡ್ಡಿ ಬಂಡಿ ಸಹೋದರರು ಟ್ರಾಕ್ಟರ್‌ ಮೂಲಕ ಹರಗಿದ್ದಾರೆ.
ಈರುಳ್ಳಿ ಈಗಾಗಲೇ ಸುಮಾರು ಒಂದೂವರೆ ಅಡಿಯಷ್ಟು ಬೆಳೆದಿತ್ತು. ಗಡ್ಡೆ ಕಟ್ಟುವ ಹಂತದಲ್ಲಿತ್ತು. ಉತ್ತಮ ಬೆಲೆಯ ನಿರೀಕ್ಷೆಯೂ ಇತ್ತು. ಆದರೆ, ಸೆ.8ರ ಬಳಿಕ ಸುರಿದ ಸತತ ಮಳೆಯಿಂದ ಕಣ್ಣೀರಿಡುವಂತಾಗಿದೆ. ನಿರಂತರ ಸುರಿದ ಮಳೆಯಿಂದ ಸುಳಿರೋಗ ಬಾಧಿಸುತ್ತಿದೆ.

Advertisement

ರೋಗ ನಿಯಂತ್ರಣಕ್ಕಾಗಿ ಎರಡು ಬಾರಿ ಕ್ರಿಮಿನಾಶಕ ಸಿಂಪಡಿಸಲಾಯಿತು. ಆದರೆ ಬಿಟ್ಟೂ ಬಿಡದೆ ಮಳೆ ಸುರಿದಿದ್ದರಿಂದ ಈ ಪ್ರಯತ್ನ ಫಲಿಸಲಿಲ್ಲ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಈರುಳ್ಳಿ ಗಡ್ಡೆ ಭೂಮಿಯಲ್ಲೇ ಕೊಳೆಯುತ್ತಿದೆ. ಭೂಮಿ ಒಣಗಲು ಇನ್ನಷ್ಟು ದಿನಗಳು ¸ಬೇಕಾಗುವುದರಿಂದ ಸದ್ಯಕ್ಕೆ ಈರುಳ್ಳಿ ಮೇಲಿನ ಆಸೆ ಬಿಟ್ಟು, ಹರಗಿದ್ದೇವೆ ಎಂಬುದು ಭೀಮರೆಡ್ಡಿ ಬಂಡಿ ಅವರ ನೋವಿನ ನುಡಿ.

ಇದನ್ನೂ ಓದಿ :ವಿಷಪೂರಿತ ಹಾವು ಕಡಿದ ಬಾಲಕರ ರಕ್ಷಣೆ : ಸೂಕ್ತ ಚಿಕಿತ್ಸೆ ನೀಡಿದತಜ್ಞರ ಕಾರ್ಯಕ್ಕೆ ಶ್ಲಾಘನೆ

ಈ ಬಾರಿ ಈರುಳ್ಳಿ ಕೈಹಿಡಿಯುವ ನಿರೀಕ್ಷೆಯೊಂದಿಗೆ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದೆವು. ಆದರೆ, ವಿಪರೀತ ಮಳೆಯಾಗಿದ್ದರಿಂದ ಬೆಳೆ ಕೊಳೆಯುವಂತಾಗಿತ್ತು. ಹೀಗಾಗಿ ಈರುಳ್ಳಿಯನ್ನು ಹರಗಿದ್ದೇವೆ. ಬಿತ್ತನೆ, ಕ್ರಿಮಿನಾಶಕ, ಕೃಷಿ ಕಾರ್ಮಿಕರ ಕೂಲಿ ಸೇರಿದಂತೆ ಪ್ರತಿ ಎಕರೆಗೆ 10- 12 ಸಾವಿರ ರೂ. ಖರ್ಚು ಮಾಡಿದ್ದು, ಆ ಹಣವೂ ಮರಳಿಲ್ಲ. ಹಿಂಗಾರಿಗೆ ಮತ್ತೆ ಸಾಲ
ಮಾಡುವಂತಾಗಿದೆ ಎನ್ನುತ್ತಾರೆ ಗೋವಿಂದ ರೆಡ್ಡಿ.

Advertisement

Udayavani is now on Telegram. Click here to join our channel and stay updated with the latest news.

Next