Advertisement

ಪ್ರತಿ ಕೆಜಿ ಈರುಳ್ಳಿಗೆ 80 ರೂ.

09:16 AM Sep 24, 2019 | sudhir |

ಹೊಸದಿಲ್ಲಿ: ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 70 ರೂ.ಗಳಿಂದ 80 ರೂ. ವರೆಗೆ ತಲುಪಿದ್ದು, ಕೇಂದ್ರ ಸರಕಾರ ದರ ನಿಯಂತ್ರಣಕ್ಕೆ ಮುಂದಾಗಿದೆ. ಈರುಳ್ಳಿ ಪೂರೈಕೆಗೆ ಕ್ರಮ ಕೈಗೊಂಡಿರುವಂತೆಯೇ, 2-3 ದಿನಗಳಲ್ಲಿ ಹೊಸದಿಲ್ಲಿ ಸಹಿತ ಹಲವು ನಗರಗಳಲ್ಲಿ ಬೆಲೆ ಏರಿಕೆ ಯಾಗತೊಡಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕೆಜಿ ಈರುಳ್ಳಿ ಬೆಲೆ ಹೊಸದಿಲ್ಲಿಯಲ್ಲಿ 57 ರೂ., ಮುಂಬಯಿನಲ್ಲಿ 56 ರೂ., ಕೋಲ್ಕತಾದಲ್ಲಿ 48 ರೂ., ಚೆನ್ನೈಯಲ್ಲಿ 34 ರೂ. ಆಗಿದ್ದರೆ, ಗುರ್ಗಾಂವ್‌ ಮತ್ತು ಜಮ್ಮುವಿನಲ್ಲಿ 60 ರೂ. ಆಗಿತ್ತು.

Advertisement

ಇದೊಂದು ಹಠಾತ್‌ ಬೆಳವಣಿಗೆಯಾಗಿದ್ದು, 2-3 ದಿನಗಳಲ್ಲಿ ದರ ಏರಿಕೆ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್‌, ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶಗಳಲ್ಲಿ 2 ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಸದ್ಯ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಈರುಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ನವೆಂಬರ್‌ ಮೊದಲ ವಾರದಲ್ಲಿ ಮಾರುಕಟ್ಟೆಗೆ ಹೊಸ ಬೆಳೆ ಬರಲಿದೆ. ದೇಶದಲ್ಲಿ ಅತ್ಯಂತ ದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಾಸಲ್ಗಾಂವ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕೆಜಿಗೆ 10 ರೂ. ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next