ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಮುಂದಿನ ವಾರ ಕೃಷ್ಣಾ ಗೋದಾವರಿ ಜಲಾನಯನದಲ್ಲಿ ತನ್ನ ಪ್ರಮುಖ ಆಳವಾದ ನೀರಿನ ಯೋಜನೆಯಾದ ಕಚ್ಛಾ ತೈಲ ಉತ್ಪಾದನೆಯನ್ನು ಆರಂಭಿಸಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Kartarpur: ಗುರುದ್ವಾರದಲ್ಲಿ ಮದ್ಯ, ಮಾಂಸ ಸೇವಿಸಿ ಸಿಖ್ಖರ ಭಾವನೆಗೆ ಅಪಮಾನ: ಬಿಜೆಪಿ ಆರೋಪ
ಒಎನ್ ಜಿಸಿ ಕಚ್ಛಾ ತೈಲ ಉತ್ಪಾದನೆ ಮಾಡುವ ಮೂಲಕ ಭಾರತಕ್ಕೆ ವಾರ್ಷಿಕವಾಗಿ ಬರೋಬ್ಬರಿ 11,000 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಲಿದೆ. ಭಾರತ ಪ್ರತಿವರ್ಷ ಶೇ.85ರಷ್ಟು ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ವರದಿ ವಿವರಿಸಿದೆ.
ಒಎನ್ ಜಿಸಿ 2028-2030ರೊಳಗೆ ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದ ಪೆಟ್ರೋಕೆಮಿಕಲ್ ಯೋಜನೆ ಸಿದ್ಧಪಡಿಸಿಕೊಂಡಿರುವುದಾಗಿ ತಿಳಿಸಿದೆ. ಹೂಡಿಕೆಯನ್ನು ಎರಡು ಪ್ರತ್ಯೇಕ ಯೋಜನೆಗಳಿಗೆ ಬಳಸಲಾಗುತ್ತದೆ ಎಂದು ಹೇಳಿದೆ.
ಕೃಷ್ಣಾ ಗೋದಾವರಿ ಜಲಾನಯನದ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ ಎಂದು ಒಎನ್ ಜಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರಂಭಿಕವಾಗಿ ಕೆಜಿ ಬೇಸಿನ್ ನಲ್ಲಿ 2021ರ ನವೆಂಬರ್ ನಲ್ಲಿ ತೈಲ ಉತ್ಪಾದನೆ ಮಾಡಲು ನಿಗದಿಯಾಗಿತ್ತು. ಆದರೆ ನಂತರ ಹಲವು ಬಾರಿ ಡೆಡ್ ಲೈನ್ ಮುಂದುವರಿಸಲಾಗಿತ್ತು.
ಪ್ರಸ್ತುತ ಕಚ್ಛಾ ತೈಲದ ಬ್ಯಾರೆಲ್ ಬೆಲೆ 77.4 ಡಾಲರ್. ಇದರಿಂದಾಗಿ ನಾವೇ ಕಚ್ಛಾ ತೈಲ ಉತ್ಪಾದಿಸಿದರೆ ಪ್ರತಿದಿನ 29 ಕೋಟಿ ರೂಪಾಯಿ ಭಾರತಕ್ಕೆ ಉಳಿಯವಾಗಲಿದೆ. ವಾರ್ಷಿಕವಾಗಿ 10,600 ಕೋಟಿ ರೂಪಾಯಿ ಉಳಿತಾಯ ಮಾಡಿದಂತಾಗಲಿದೆ ಎಂದು ವರದಿ ತಿಳಿಸಿದೆ.