ನವದೆಹಲಿ: ಒನ್‌ಪ್ಲಸ್ ಅಭಿಮಾನಿಗಳು ಬಹಳ ದಿನಗಳಿಂದ ಎದುರು ನೋಡುತ್ತಿದ್ದ ಒನ್‌ಪ್ಲಸ್ 9 ಸರಣಿಯ ಫೋನ್‌ಗಳು ಮಂಗಳವಾರ ರಾತ್ರಿ ಭಾರತದಲ್ಲಿ ಬಿಡುಗಡೆಯಾಗಿವೆ. ಈ ಬಾರಿ ಒಟ್ಟಿಗೆ ಮೂರು ಫೋನ್‌ಗಳನ್ನು ಕಂಪೆನಿ ಲಾಂಚ್ ಮಾಡಿದೆ. ಒನ್‌ಪ್ಲಸ್ 9 ಪ್ರೊ, ಒನ್‌ಪ್ಲಸ್ 9 ಮತ್ತು ಒನ್‌ಪ್ಲಸ್ 9ಆರ್ ಆ ಮೂರು ಫೋನ್‌ಗಳು.
ಈ ಮೂರೂ ಫೋನ್‌ಗಳಲ್ಲಿ ಹೆಸರಾಂತ ಕ್ಯಾಮರಾ ಕಂಪೆನಿ ಹ್ಯಾಸಲ್‌ಬ್ಲಾಡ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಸಹಜ ಬಣ್ಣದ ಫೋಟೋಗಳನ್ನು ಸ್ಪಷ್ಟವಾಗಿ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಈ ಮೂರೂ ಫೋನ್‌ಗಳ ಜೊತೆಗೆ ಮೊದಲ ಸ್ಮಾರ್ಟ್ ವಾಚನ್ನು ಕಂಪೆನಿ ಹೊರ ತಂದಿದೆ. ಇದರಲ್ಲಿ ಆಕ್ಸಿಜನ್ ಸ್ಯಾಚುರೇಷನ್ ಅಳೆಯುವಿಕೆ, ಒತ್ತಡ ಪತ್ತೆ ಹಚ್ಚುವಿಕೆ, ಉಸಿರಾಟದ ಅಭ್ಯಾಸಗಳು, ಹೃದಯ ಬಡಿತ ಏರುಪೇರಿನ ಎಚ್ಚರಿಕೆ ನೀಡುವಿಕೆ ಸೇರಿ ಅನೇಕ ಅಂಶಗಳಿವೆ ಎಂದು ತಿಳಿಸಿದೆ.
ಒನ್‌ಪ್ಲಸ್ 9 ಪ್ರೊ ಸ್ಪೆಸಿಫೀಕೇಷನ್:
6.7 ಇಂಚಿನ ಫುಲ್‌ಎಚ್ ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ (3216×1440 ಪಿಕ್ಸಲ್ ರೆಸೂಲೇಷನ್, 525 ಪಿಪಿಐ) 120 ಹರ್ಟ್ಜ್ ರಿಫ್ರೆಶ್‌ರೇಟ್. 3ಡಿ ಕಾರ್ನಿಂಗ್ ಗ್ಲಾಸ್ ರಕ್ಷಣೆ. ಸ್ನಾಪ್‌ಡ್ರಾಗನ್‌ನ ಹೊಚ್ಚ ಹೊಸ 888 ಪ್ರೊಸೆಸರ್. 12 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್, ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್ ಕಾರ್ಯಾಚರಣೆ ಇದೆ . ಹಾಗೂ ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ಲೆನ್ಸ್ ಹೊಂದಿದೆ. 48 MP. ಮುಖ್ಯ ಲೆನ್ಸ್, 50 MP. ಅಲ್ಟ್ರಾ ವೈಡ್, 8 MP. ಟೆಲಿಫೋಟೋ ಮತ್ತು 2 MP. ಮೊನೊಕ್ರೋಮ್ ಲೆನ್ಸ್ ಇದೆ. ಮುಂಬದಿಗೆ 16 MP. ಕ್ಯಾಮರಾ ಇದೆ. 4500 ಎಂಎಎಚ್ ಬ್ಯಾಟರಿ. ಇದಕ್ಕೆ ಫಾಸ್ಟ್ ಚಾರ್ಜರ್ ನೀಡಲಾಗಿದೆ. ಇದು 29 ನಿಮಿಷದಲ್ಲಿ 1 ರಿಂದ ಶೇ.100 ಚಾರ್ಜ್ ಆಗಲಿದೆ.
ಒನ್‌ಪ್ಲಸ್ ವಾರ್ಪ್ 50 ವೈರ್‌ಲೆಸ್ ಚಾರ್ಜರ್ ಮೂಲಕ, ಒನ್‌ಪ್ಲಸ್ 9 ಪ್ರೊ ಮೊಬೈಲನ್ನು1 ರಿಂದ ಶೇ. 100ರಷ್ಟನ್ನು 43 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದೆಂದು ಕಂಪೆನಿ ತಿಳಿಸಿದೆ. ಇದನ್ನು ಒನ್‌ಪ್ಲಸ್ ಹೊರತುಪಡಿಸಿ ಬೇರೆ ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್, ಟ್ಯಾಬ್‌ಗಳನ್ನು ಚಾರ್ಜ್ ಮಾಡಲು ಬಳಸಬಹುದು.
ಒನ್‌ಪ್ಲಸ್ 9 ಸ್ಪೆಸಿಫಿಕೇಷನ್:
ಇದು 6.55 ಇಂಚಿನ, ಫುಲ್‌ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ (1080X2400 ಪಿಕ್ಸಲ್) ಹೊಂದಿದೆ. ಮೂರು ಲೆನ್ಸ್ ಕ್ಯಾಮರಾ ಹೊಂದಿದೆ. 48 MP. ಪ್ರಾಥಮಿಕ ಕ್ಯಾಮರಾ, 50 MP. ಅಲ್ಟ್ರಾ ವೈಡ್, 2 MP ಮೊನೊಕ್ರೋಮ್ ಸೆನ್ಸರ್ ಹೊಂದಿದೆ. 4500 ಎಂಎಎಚ್ ಬ್ಯಾಟರಿ ಇದೆ. ಇದು ಹೊರತುಪಡಿಸಿದರೆ, ಪ್ರೊಸೆಸರ್, ರ್ಯಾಮ್, ರೋಮ್ ಎಲ್ಲ 9 ಪ್ರೊ ದಲ್ಲಿರುವುದೇ.
ಒನ್‌ಪ್ಲಸ್ 9ಆರ್ ಸ್ಪೆಸಿಫಿಕೇಷನ್‌ಸ್:
ಇದು ಸ್ನಾಪ್‌ಡ್ರಾಗನ್ 870 ಪ್ರೊಸೆಸರ್ ಹೊಂದಿದೆ. 6.55 ಇಂಚಿನ ಫುಲ್‌ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಇದೆ. 120 ಹರ್‌ಟ್ಜ್ ರಿಫ್ರೆಶ್‌ರೇಟ್‌ಇದೆ. ಇದರಲ್ಲಿ ನಾಲ್ಕು ಲೆನ್ಸ್ ಹಿಂಬದಿ ಕ್ಯಾಮರಾ ಹೊಂದಿದೆ. 48 MP ಮುಖ್ಯ ಲೆನ್ಸ್. 16 MP. ವೈಡ್, 5 MP ಮ್ಯಾಕೊ್ರೀ, 2 MP. ಮೊನೋಕ್ರೋಮ್ ಲೆನ್ಸ್ ಇದೆ. 16 ಮೆಪಿ. ಸೆಲ್ಫೀ ಕ್ಯಾಮರಾ ಹೊಂದಿದೆ.
ಒನ್‌ಪ್ಲಸ್ ವಾಚ್:
1.39 ಇಂಚಿನ ಓಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. 454X454 ಪಿಕ್ಸಲ್ ರೆಸೂಲೇಷನ್. ಸ್ಟೇನ್‌ಲೆಸ್ ಸ್ಟೀಲ್ ಕೇಸ್ ಇದೆ. ಇದು 14 ದಿನಗಳ ಬ್ಯಾಟರಿ ಹೊಂದಿದೆ. 20 ನಿಮಿಷ ಚಾರ್ಜ್ ಮಾಡಿದರೆ ಒಂದು ವಾರ ಬ್ಯಾಟರಿ ಬರುತ್ತದೆ. ಇದರಲ್ಲಿ ರಕ್ತದ ಆಮ್ಲಜನಕ ಮಟ್ಟ, ಹೃದಯ ಬಡಿತ, ನಿದ್ದೆಯ ಪ್ರಮಾಣ ಇತ್ಯಾದಿಗಳ ಪ್ರಮಾಣ ನೋಡುವಿಕೆ ಮಾತ್ರವಲ್ಲ 110 ರೀತಿಯ ವರ್ಕೌಟ್‌ಗಳ ಕ್ಯಾಲರಿ ಕಡಿತದ ಮಾನಕಗಳನ್ನು ನೋಡಬಹುದು. ಇದರ ಮೂಲಕ ಒನ್‌ಪ್ಲಸ್ ಟಿವಿ, ಒನ್‌ಪ್ಲಸ್ ಇಯರ್‌ಬಡ್‌ಗಳನ್ನು ನಿಯಂತ್ರಿಸಬಹುದು. ಒನ್‌ಪ್ಲಸ್ ಟಿವಿಗೆ ರಿಮೋಟ್ ಆಗಿಯೂ ಬಳಸಬಹುದು.
ದರ ಪಟ್ಟಿ:
ಒನ್‌ಪ್ಲಸ್ 9 ಪ್ರೊ: 12 ಜಿಬಿ ರ್ಯಾಮ್, 256 ಜಿಬಿ ಸಂಗ್ರಹ 69,999 ರೂ. 8 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ 64,999 ರೂ.
ಒನ್‌ಪ್ಲಸ್ 9 : 12 ಜಿಬಿ ರ್ಯಾಮ್, 256 ಜಿಬಿ ಸಂಗ್ರಹ 54,999 ರೂ. 8 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ 49,999 ರೂ.
ಒನ್‌ಪ್ಲಸ್ 9ಆರ್: 12 ಜಿಬಿ ರ್ಯಾಮ್, 256 ಜಿಬಿ ಸಂಗ್ರಹ 43,999 ರೂ. 8 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ 39,999 ರೂ.
ಒನ್‌ಪ್ಲಸ್ ವಾಚ್: ಕ್ಲಾಸಿಕ್ ಎಡಿಷನ್ 14,999 ರೂ. ವಾರ್ಪ್ ಚಾರ್ಜ್ 50 ವೈರ್‌ಲೆಸ್ ಚಾರ್ಜರ್ 5,999 ರೂ.
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 9 ಪ್ರೊಗೆ 4000 ರೂ., 9ಗೆ 3000 ರೂ., 9ಆರ್‌ಗೆ 2000 ರೂ. ರಿಯಾಯಿತಿ ದೊರಕುತ್ತದೆ. ಮಾರ್ಚ್ 31 ರಿಂದ ಅಮೆಜಾನ್.ಇನ್ ಮತ್ತು ಒನ್‌ಪ್ಲಸ್.ಇನ್ ಮತ್ತು ಒನ್‌ಪ್ಲಸ್ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯ. ವಾಚ್ ಏಪ್ರಿಲ್‌ಗೆ ಲಭ್ಯ. ಅದಕ್ಕೂ ಆರಂಭಿಕವಾಗಿ ಎಸ್‌ಬಿಐ ಕಾರ್ಡ್ ಮೂಲಕ 2000 ರೂ. ರಿಯಾಯಿತಿ ಇದೆ.