ವರ್ಷಕ್ಕೊಮ್ಮೆ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ತನ್ನ ಫ್ಲಾಗ್ ಶಿಪ್ (ಅಗ್ರಶ್ರೇಣಿಯ) ಮೊಬೈಲ್ ಗಳನ್ನು ಬಿಡುಗಡೆ ಮಾಡುವ ಒನ್ ಪ್ಲಸ್ ಎರಡು ದಿನಗಳ ಹಿಂದೆ ಒನ್ ಪ್ಲಸ್ 10 ಪ್ರೊ 5ಜಿ ಫೋನನ್ನು ಭಾರತ, ಯೂರೋಪ್ ಹಾಗೂ ಅಮೆರಿಕಾ ದೇಶಗಳಲ್ಲಿ ಬಿಡುಗಡೆ ಮಾಡಿದೆ.
ಒನ್‍ಪ್ಲಸ್ ಅಭಿಮಾನಿಗಳು ಈ ಫ್ಲಾಗ್ ಶಿಪ್ ಫೋನ್ ಗಾಗಿ ಬಹಳ ದಿನಗಳಿಂದ ನಿರೀಕ್ಷೆ ಮಾಡುತ್ತಿದ್ದರು. ಇದರಲ್ಲಿ ಸೆಕೆಂಡ್ ಜನರೇಷನ್ ನ ಹ್ಯಾಸಲ್ ಬ್ಲಾಡ್ ಕ್ಯಾಮರಾ, ಅಗ್ರಪಂಕ್ತಿಯ ಸ್ನಾಪ್ ಡ್ರಾಗನ್ 8 ಜನರೇಷನ್ 1 ಪ್ರೊಸೆಸರ್, 80 ವ್ಯಾಟ್ಸ್ ನ ಸೂಪರ್ ವೂಕ್ ಚಾರ್ಜರ್ 120 ಹರ್ಟ್ಜ್, ಅಮೋಲೆಡ್ ಎಲ್‍ಟಿಪಿಓ ಡಿಸ್ ಪ್ಲೇ ಇದರ ವಿಶೇಷ.
ಅಮೋಲೆಡ್ ಪರದೆಗೆ LTPO (ಲೋ ಟೆಂಪರೇಚರ್ ಪಾಲಿಕ್ರಿಸ್ಟಲೈನ್ ಆಕ್ಸೈಡ್ ) ತಂತ್ರಜ್ಞಾನ ನೀಡಿರುವುದು ವಿಶೇಷ. ಈ ತಂತ್ರಜ್ಞಾನವುಳ್ಳ ಡಿಸ್ ಪ್ಲೇ ಆಪಲ್ ಫೋನ್ ಮತ್ತು ವಾಚ್ ಗಳಲ್ಲಿ ಇರುತ್ತಿತ್ತು. ಡಿಸ್ ಪ್ಲೇ 6.7 ಇಂಚಿನ QHD (525 ಪಿಪಿಐ) ರೆಸ್ಯೂಲೇಷನ್ ಹೊಂದಿದೆ. ಪರದೆಗೆ ಕಾರ್ನಿಂಗ್ ಗೊರಿಲ್ಲಾ ಗ್ರಾಸ್ ರಕ್ಷಣೆ ಇದೆ.
ಕ್ಯಾಮರಾಕ್ಕೆ ಹೆಸರಾದ ಸ್ವೀಡನ್ನಿನ ಹ್ಯಾಸಲ್ ಬ್ಲಾಡ್ ಕ್ಯಾಮರಾವನ್ನು ಹಿಂಬದಿ ಕ್ಯಾಮರಾ ಹೊಂದಿದೆ. ಇದಕ್ಕೆ ಸೋನಿ ಐಎಂಎಕ್ಸ್ 789 ಸೆನ್ಸರ್ ಬಳಸಲಾಗಿದೆ. 48 ಮೆಗಾಪಿಕ್ಸಲ್ ಮುಖ್ಯ ಕ್ಯಾಮರಾ, 50 ಮೆ.ಪಿ. ಅಲ್ಟ್ರಾ ವೈಡ್, 8 ಮೆ.ಪಿ. ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಕ್ಯಾಮರಾ 32 ಮೆ.ಪಿ. ಇದೆ.
ಹೊಸ ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ 150 ° ವೀಕ್ಷಣೆಯನ್ನು ನೀಡುತ್ತದೆ, ಇತರ ಸ್ಮಾರ್ಟ್‌ಫೋನ್‌ಗಳಲ್ಲಿ 120 ° ಅಲ್ಟ್ರಾ-ವೈಡ್ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ಫೋಟೋಗಳಿಗಿಂತ ಹೆಚ್ಚಿನ ವೈಡ್ ಆ್ಯಂಗಲ್ ಫೋಟೋಗಳನ್ನು ತೆಗೆಯಬಹುದು ಎಂದು ಕಂಪೆನಿ ತಿಳಿಸಿದೆ. ಅಲ್ಲದೇ 12-ಬಿಟ್ ರಾ ಫೋಟೋ ಸೆರೆಹಿಡಿಯುತ್ತದೆ. ಇದು ಹೆಚ್ಚಿನ ಡಿಟೇಲ್ ಉಳ್ಳ ಗುಣಮಟ್ಟದ ಫೋಟೋ ನೀಡುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ:ಸಲೂನ್ ಶಿವಾಸ್ ಸೆಲ್ಯೂಟ್ ಸಂಸ್ಥೆ ಗೆ ಲೊಓರಿಯಲ್ ಪ್ಯಾರಿಸ್ ವಿದೇಶಿ ತಂಡ ಭೇಟಿ
ಇದರಲ್ಲಿ Snapdragon 8 Gen 1 ಹೊಸ ಫ್ಲಾಗ್ ಶಿಪ್ ಪ್ರೊಸೆಸರ್ ಅಳವಡಿಸಲಾಗಿದೆ. 5-ಪದರದ 3D ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ, ಇದು OnePlus ಫೋನ್ ಗಳಲ್ಲಿ ಅತ್ಯಂತ ಸುಧಾರಿತ ಕೂಲಿಂಗ್ ವ್ಯವಸ್ಥೆಯಾಗಿದ್ದು ಪ್ರೊಸೆಸರ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
ಈ ಫೋನು Android 12 ಆಧಾರಿತ OxygenOS 12.1 ಹೊಂದಿದ್ದು, ಇತರ OnePlus ಫೋನ್‌ಗಳಂತೆ 3 ಪ್ರಮುಖ ಆಂಡ್ರಾಯ್ಡ್ ಅಪ್ ಡೇಟ್ ಹಾಗೂ 4 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ದೊರಕಲಿದೆ ಎಂದು ಕಂಪೆನಿ ತಿಳಿಸಿದೆ.
5000 ಎಂಎಎಚ್ ಬ್ಯಾಟರಿ ಇದ್ದು, ಇದಕ್ಕೆ 80 ವ್ಯಾಟ್ಸ್ ಸೂಪರ್ ವೂಕ್ ಚಾರ್ಜರ್ ಬಾಕ್ಸ್ ಜೊತೆಗೇ ನೀಡಲಾಗಿದೆ. ಈ ಚಾರ್ಜರ್ ನಲ್ಲಿ ಶೇ. 1 ರಿಂದ ಶೇ. 100ರವರೆಗೆ 32 ನಿಮಿಷದಲ್ಲಿ ಚಾರ್ಜ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.
ಈ ಮೊಬೈಲ್ ವೊಲ್ಕಾನಿಕ್ ಬ್ಲಾಕ್ (ಕಪ್ಪು) ಮತ್ತು ಎಮರಾಲ್ಡ್ ಫಾರೆಸ್ಟ್ (ಹಸಿರು) ಬಣ್ಣಗಳಲ್ಲಿ ದೊರಕುತ್ತದೆ. ಏ. 5ರಿಂದ ಒನ್‍ಪ್ಲಸ್.ಇನ್, ಅಮೆಜಾನ್.ಇನ್, ಒನ್‍ಪ್ಲಸ್ ಶೋರೂಮ್ ಮತ್ತು ಪಾಲುದಾರ ಮಾರಾಟ ಮಳಿಗೆಗಳಲ್ಲಿ ದೊರಕುತ್ತದೆ. ದರ: 8ಜಿಬಿ ರ್ಯಾಮ್, ಮತ್ತು 128 ಜಿಬಿ ಸಂಗ್ರಹ ಆವೃತ್ತಿಗೆ 66,999 ರೂ. 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸಂಗ್ರಹ ಆವೃತ್ತಿಗೆ 71,999 ರೂ. ಒನ್‍ಪ್ಲಸ್ ಆನ್‍ಲೈನ್, ಆಫ್‍ಲೈನ್ ಸ್ಟೋರ್ಸ್, ಅಮೆಜಾನ್.ಇನ್ ನಲ್ಲಿ ಎಸ್‍ಬಿ ಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದಾಗ 4500 ರೂ. ರಿಯಾಯಿತಿ ಸಹ ಇದೆ.
ಒನ್ ಪ್ಲಸ್ ಬುಲ್ಲೆಟ್ಸ್ ವೈರ್ ಲೆಸ್ ಝಡ್ 2
ಇದರೊಂದಿಗೆ OnePlus Bullets Wireless Z2 ಇಯರ್ ಫೋನನ್ನು ಭಾರತದಲ್ಲಿ ಮಾತ್ರ ಕಂಪೆನಿ ಬಿಡುಗಡೆ ಮಾಡಿದೆ. ಸಂಪೂರ್ಣ ಚಾರ್ಜ್ ಮಾಡಿದಾಗ 30 ಗಂಟೆಗಳ ಕಾಲ ಸಂಗೀತ ಆಲಿಸಬಹುದಾದ ಬ್ಯಾಟರಿ ಹೊಂದಿದೆ. ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 20 ಗಂಟೆಗಳ ಕಾಲ ಆಡಿಯೋ ಆಲಿಸಬಹುದು ಎಂದು ಕಂಪೆನಿ ತಿಳಿಸಿದೆ.
ಇದು 12.4 ಎಂಎಂ ಡ್ರೈವರ್ ಹೊಂದಿದ್ದು, OnePlus ಶ್ರೇಣಿಯ ಆಡಿಯೊ ಉತ್ಪನ್ನಗಳಲ್ಲಿ ಅತಿ ದೊಡ್ಡ ಡ್ರೈವರ್ ಆಗಿದ್ದು, ಹೆಚ್ಚಿನ ಬಾಸ್ ಅನುಭವವನ್ನು ನೀಡುತ್ತದೆ. ಐಪಿ55 ರೇಟಿಂಗ್ ಹೊಂದಿದ್ದು, ನೀರು ಮತ್ತು ಧೂಳು ನಿರೋಧಕವಾಗಿದೆ. ಕಪ್ಪು ಮತ್ತು ನೀಲಿ ಬಣ್ಣದಲ್ಲಿ ದೊರಕುತ್ತದೆ. ಇದರ ದರ 1999 ರೂ. ಆಗಿದ್ದು, ಏ.5ರಿಂದ ಒನ್‍ಪ್ಲಸ್.ಇನ್, ಅಮೆಜಾನ್.ಇನ್, ಫ್ಲಿಪ್‍ಕಾರ್ಟ್ ಮತ್ತು ಒನ್‍ಪ್ಲಸ್ ಸ್ಟೋರ್ ಗಳಲ್ಲಿ ದೊರಕುತ್ತದೆ.
ಒನ್‍ಪ್ಲಸ್ ಬಡ್ಸ್ ಪ್ರೊ ರೇಡಿಯಂಟ್ ಸಿಲ್ವರ್
ಇದಲ್ಲದೇ, ಒನ್‌ಪ್ಲಸ್ ಬಡ್ಸ್ ಪ್ರೊನ ಇಯರ್ ಬಡ್‍ನ ರೇಡಿಯಂಟ್ ಸಿಲ್ವರ್ ಎಡಿಷನ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಇಯರ್ ಬಡ್ ಮತ್ತು ಕೇಸ್, ನೋಡಲು ಸ್ಟೇನ್‍ಲೆಸ್ ಸ್ಟೀಲ್ ನಂತೆಯೇ ಇರುತ್ತದೆ ಎಂದು ಕಂಪೆನಿ ತಿಳಿಸಿದೆ. ಇದರ ದರ 9990 ರೂ. ಒನ್‍ಪ್ಲಸ್.ಇನ್, ಒನ್‍ಪ್ಲಸ್ ಸ್ಟೋರ್, ಅಮೆಜಾನ್.ಇನ್ ನಲ್ಲಿ ಏ.5ರಿಂದ ಲಭ್ಯ.
ಬಿಎಸ್‍ಎ