Advertisement

 ಒಂದು ವರ್ಷ ತುಂಬಿತು:  ಹ್ಯಾಪಿ ಬರ್ತಡೇ ಟೂ ಯೂ..

02:01 PM Sep 18, 2017 | |

ಜೀಯೋಗೆ ಒಂದು ವರ್ಷ. ಹೇಳಿ ಕೇಳಿ ಇದು ರಿಲಯನ್ಸ್‌ ಕೊಡುಗೆ. ಇದು ಎಷ್ಟು ವರ್ಷ ಇರುತ್ತೋ? ಅಂತ ಮೂಗು ಮುರಿಯುವವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಒಂದು ವರ್ಷ ದಾಟಿದೆ.  ಜೀಯೋ ಬಂದ ಮೇಲೆ ಎಲ್ಲರ ಕೈಯಲ್ಲೂ ಮೊಬೈಲು ಮಾತ್ರ ಬರಲಿಲ್ಲ. ಅದರೊಳಗೆ ಇಂಟರ್‌ನೆಟ್ಟೂ, ಅದರ ಹಿಂದೆಯೇ ಗೇಮ್ಸು, ಫೇಸ್‌ಬುಕ್ಕು ಸೇರಿದಂತೆ ಸಕಲೆಂಟು ಅನುಕೂಲಗಳು ದಕ್ಕಿದವು.  ಬದುಕಲ್ಲಿ ಮೊಬೈಲ್‌ ಮುಖ್ಯವಾಗುತ್ತಾ ಹೋಗುವ ಹೊತ್ತಿಗೆ, ಉಚಿತ ಇಂಟರ್‌ನೆಟ್‌ ಕೊಟ್ಟು ಮೊಬೈಲ್‌ ಇಲ್ಲದಿದ್ರೆ ಲೈಫ‌ು ಕಷ್ಟ. ಇವತ್ತು ಮೊಬೈಲ್‌ ಎಲ್ಲರಿಗೂ ಮತ್ತಷ್ಟು ಅನಿವಾರ್ಯವಾಗಿಸಿದ್ದು ರಿಲಯನ್ಸ್‌ ಕಂಪೆನಿ. 

Advertisement

  ಇವತ್ತು ಒಂದು, ಎರಡು ಜಿಬಿಗೆ 200-300ರೂ. ತೆಗೆದುಕೊಳ್ಳುತ್ತಿದ್ದ ಕಂಪೆನಿಗಳು ಇವತ್ತು ದಿನಕ್ಕೆ ಒಂದು ಜಿ.ಬಿ ಡಾಕ ಬಿಕರಿಗೆ ನಿಂತುಬಿಟ್ಟಿದೆ.  ಒಂದರ್ಥದಲ್ಲಿ ಇಡೀ ಮೊಬೈಲ್‌ ಮಾರುಕಟ್ಟೆಯನ್ನು ಜಿಯೋ ಅಂಗೈಯಲ್ಲಿ ಇಟ್ಟುಕೊಂಡಿದೆ.  ಜಿಯೋ ಕೆಲವೊಂದು ಹೈಲೆಟ್ಸ್‌ ಇಲ್ಲಿದೆ. 

1.    ಜಿಯೋ ಪ್ರಪಂಚದ ಏಕೈಕ 4ಜಿ ಸಂಪೂರ್ಣ ಐಪಿ ಜಾಲ. ಅತಿದೊಡ್ಡ ಫೈಬರ್‌ ಹೆಜ್ಜೆಗುರುತಿನೊಡನೆ ಜಿಯೋ ಭಾರತದ ಬೇರೆಲ್ಲ ಟೆಲಿಕಾಂ ಸಂಸ್ಥೆಗಳಿಗಿಂತ ದೊಡ್ಡದಾದ ಎಲ್ಟಿಇ ಪ್ರಸಾರವ್ಯಾಪ್ತಿಯನ್ನು ಹೊಂದಿದೆ. ಜಿಯೋ ಜಾಲ ಭಾರತದ ಶೇ.99 ಜನಸಂಖ್ಯೆಯನ್ನು ಸಂಪರ್ಕಿಸಿದೆ. ಭಾರತದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ರೂಪಿಸಲಾಗಿರುವ 2ಜಿ ಪ್ರಸಾರವ್ಯಾಪ್ತಿಗಿಂತ ದೊಡ್ಡದಾದ 4ಜಿ ವ್ಯಾಪ್ತಿಯನ್ನು ಪಡೆಯುವುದು ಜಿಯೋ ದೆಸೆಯಿಂದ ಇಷ್ಟರಲ್ಲೇ ಸಾಧ್ಯವಾಗಲಿದೆ.

2.    ಡೇಟಾ ಬಳಸುವ ರಾಷ್ಟ್ರಗಳ ಸಾಲಿನಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ನಮ್ಮಲ್ಲಿ ಮೊಬೈಲ… ಡೇಟಾ ಬಳಕೆ ತಿಂಗಳಿಗೆ 20 ಕೋಟಿ ಜಿಬಿಯಿಂದ 150 ಕೋಟಿ ಜಿಬಿಗೆ ಜಿಗಿದಿದೆ.  ಈ ಪೈಕಿ ಜಿಯೋ ಗ್ರಾಹಕರೇ 125 ಕೋಟಿ ಜಿಬಿ ಡೇಟಾ ಬಳಸುತ್ತಿದ್ದಾರೆ.

3.  ಪ್ರತಿ ತಿಂಗಳೂ 100 ಕೋಟಿ ಜಿಬಿ ಡೇಟಾ ನಿರ್ವಹಿಸುವ ಜಿಯೋ, ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ… ಟೆಲಿಕಾಂ ಜಾಲ. ಭಾರತದಲ್ಲಿರುವ ಇತರ ಎಲ್ಲ ಟೆಲಿಕಾಂ ಸಂಸ್ಥೆಗಳ ಒಟ್ಟಾರೆ ಹೋಲಿಕೆಯಲ್ಲಿ ಜಿಯೋ ಈಗಾಗಲೇ ಐದು ಪಟ್ಟು ಹೆಚ್ಚಿನ ಡೇಟಾ ನಿರ್ವಹಿಸುತ್ತಿದೆ.

Advertisement

4         ಪ್ರತಿ ತಿಂಗಳೂ 165 ಕೋಟಿ ಗಂಟೆಗಳಿಗಿಂತ ಹೆಚ್ಚು ಪ್ರಮಾಣದ ವೀಡಿಯೋ ಸ್ಟ್ರೀಮಿಂಗ್‌ ಮಾಡಲಾಗುತ್ತಿದೆ.

5.    ಪ್ರತಿದಿನವೂ 250 ಕೋಟಿ ನಿಮಿಷಗಳಿಗಿಂತ ಹೆಚ್ಚು ಪ್ರಮಾಣದ ವಾಯ್ಸ… ಟ್ರಾಫಿಕ್‌ ಅನ್ನು ನಿಭಾಯಿಸಲಾಗುತ್ತಿದೆ.

6.     ಪ್ರತಿ ವಾರವೂ ಮೊಬೈಲಿನೊಡನೆ ಕಳೆಯುವ ಸಮಯ, ಟೀವಿ ಮುಂದೆ ಕಳೆಯುವ ಸಮಯಕ್ಕಿಂತ 7 ಪಟ್ಟು ಹೆಚ್ಚು.

7.    ಪ್ರತಿ ಸೆಕೆಂಡಿಗೆ 7 ಗ್ರಾಹಕರಂತೆ ಕೇವಲ 170 ದಿನಗಳಲ್ಲಿ 100 ಮಿಲಿಯನ್‌ ಗ್ರಾಹಕರನ್ನು ಸೇರಿಸಿಕೊಂಡ ವಿಕ್ರಮ. ವಿಶ್ವದ ಯಾವುದೇ ಭಾಗದಲ್ಲಿ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳಲಾದ ತಂತ್ರಜ್ಞಾನ ಸೇವೆ ಎಂಬ ಹೆಗ್ಗಳಿಕೆಯನ್ನು ಜಿಯೋಗೆ ತಂದುಕೊಟ್ಟಿತು. ಸದ್ಯ ಜಿಯೋ ಜಾಲದಲ್ಲಿ 130 ಮಿಲಿಯನ್‌ಗಿಂತ ಹೆಚ್ಚು ಗ್ರಾಹಕರಿದ್ದಾರೆ

8      ಜಿಯೋ ಬರುವ ಮೊದಲು ಮಾರುಕಟ್ಟೆಯಲ್ಲಿದ್ದ ಸುಮಾರು 16,000 ಪ್ಲಾನುಗಳು ಗ್ರಾಹಕರಲ್ಲಿ ಗೊಂದಲ ಮೂಡಿಸುತ್ತಿದ್ದವು. ಜಿಯೋ ಬಂದ ನಂತರ ಪ್ಲಾನುಗಳ ಸಂಖ್ಯೆ ಕಡಿಮೆಯಾಗುತ್ತಿವೆ.  

9.   ಫೇಸ್‌ಬುಕ್‌, ಯೂಟ್ಯೂಬ… ಸೇರಿದಂತೆ ಎಲ್ಲ ಪ್ರಮುಖ ಸೋಷಿಯಲ… ಮೀಡಿಯಾ ಅಪ್ಲಿಕೇಶನ್‌ಗಳು ಹಾಗೂ ಕಂಟೆಂಟ… ಪೊ›ವೈಡರ್‌ಗಳು ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿವೆ. ಜಿಯೋ ಬಂದ ನಂತರ 70 ಮಿಲಿಯನ್‌  ಹೊಸ ಬಳಕೆದಾರರನ್ನು ಪಡೆದಿರುವ ಗೂಗಲ… ಹಾಗೂ ಫೇಸ್‌ಬುಕ್‌ಗಳ ಪಾಲಿಗೆ ಭಾರತ ಅತ್ಯಂತ ಸಕ್ರಿಯ ಮಾರುಕಟ್ಟೆಯಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next