Advertisement

ಹಣದುಬ್ಬರ ಹತೋಟಿ ಸಾಧನೆ; ತೆರಿಗೆ ಸಂಗ್ರಹ ಹೆಚ್ಚಳ ಸವಾಲು

06:00 AM Jun 30, 2018 | Team Udayavani |

ಹೊಸದಿಲ್ಲಿ: ಹಲವು ರೀತಿಯ ತೆರಿಗೆ ವ್ಯವಸ್ಥೆ, ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ… ಸಾಕಪ್ಪಾ ಸಾಕು ಎನ್ನುವಂಥ ವ್ಯವಸ್ಥೆ ಸರಿಯಾಗಿ ಒಂದು ವರ್ಷದ ಹಿಂದೆ ಇತ್ತು. ಆದರೆ 2017ರ ಜು.1ರಂದು ಬಹು ನಿರೀಕ್ಷಿತ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾಗಿತ್ತು. ರವಿವಾರಕ್ಕೆ (ಜು.1)ಕ್ಕೆ ಹೊಸ ವ್ಯವಸ್ಥೆ ಜಾರಿಯಾಗಿ ಸರಿಯಾಗಿ 12 ತಿಂಗಳು ಕಳೆದಿವೆ. ಹಿಂದಿನ ಹಲವು ಸರಕಾರಗಳು ಜಾರಿ ಮಾಡಲು ವಿಫ‌ಲವಾದ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಜಾರಿ ಮಾಡಿ ಇತಿಹಾಸ ಸೃಷ್ಟಿಸಿತ್ತು.

Advertisement

ಸಾಧನೆಗಳು
1ಆರಂಭದಲ್ಲಿ ಹಣದುಬ್ಬರ ಏರಬಹುದು ಎಂಬ ಅಂದಾಜಿದ್ದರೂ ಕಡೆಗೆ ಹತೋಟಿ
2ಅಂತಾರಾಜ್ಯ ಗಡಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಟ್ರಕ್‌ಗಳಿಗೆ ಮುಕ್ತಿ ಹಾಡಿದ್ದು ಇ ವೇ ಬಿಲ್‌ ವ್ಯವಸ್ಥೆ.
3ಚೆಕ್‌ಪೋಸ್ಟ್‌ಗಳನ್ನು ತೆಗೆದು ಹಾಕಿದ್ದರಿಂದ ಸರಕು ಸಾಗಣೆಯಲ್ಲಿ ವೇಗ, ಗ್ರಾಹಕರಿಗೆ ಅನುಕೂಲ.
4ವಿಶ್ವಮಟ್ಟದಲ್ಲಿ ದೇಶದ ಅರ್ಥ ವ್ಯವಸ್ಥೆ ಸ್ಪರ್ಧಿಸುವಂತಾಗಲು ಹಳೆಯ ತೆರಿಗೆಗಳನ್ನು ಹೊಸ ವ್ಯವಸ್ಥೆಯಲ್ಲಿ ವಿಲೀನಗೊಳಿಸಲಾಗಿದೆ.

ಎಡವಿದ್ದೆಲ್ಲಿ?
1ಹೊಸ ತೆರಿಗೆ ವ್ಯವಸ್ಥೆ ಮಾಹಿತಿ ತಂತ್ರಜ್ಞಾನ ಆಧಾ ರಿತವಾಗಿದ್ದರಿಂದ ಜಾರಿಗೆ ತರುವಲ್ಲಿ ವಿಳಂಬ.
2ಹಲವು ಹಂತದ ನೋಂದಣಿ ವ್ಯವಸ್ಥೆ ತೆಗೆದು ಹಾಕಬೇಕೆಂಬುದೇ ಉದ್ದಿಮೆ ವಲಯದ ಒತ್ತಾಸೆ.
3 ತೆರಿಗೆ ಹೋಯಿತು. ಆದರೆ ಹೊಸ ಸೆಸ್‌ಜಾರಿಯಾದದ್ದು ಸಮಸ್ಯೆಗೆ ಕಾರಣವಾಯಿತು.
4ತೆರಿಗೆ ಏನೋ ಒಂದೇ ಬಂತು. ಆದರೆ ತೆರಿಗೆ ವಿಧಿಸುವ ಹಂತಗಳು ಹೆಚ್ಚಾಗಿ ಗೊಂದಲವಾಯಿತು
.

17 ರಾಜ್ಯ, ಕೇಂದ್ರ ತೆರಿಗೆಗಳ ಸಮ್ಮಿಳನ
5% 1 ವರ್ಷದ ಚಿಲ್ಲರೆ ಕ್ಷೇತ್ರದ ಹಣದುಬ್ಬರ

ತೆರಿಗೆ ಪಾವತಿ ಮಾಡುವವರ ಸಂಖ್ಯೆ ಹೆಚ್ಚಳ
5.43 ಕೋಟಿ ರೂ. 2016-17ರ‌ಲ್ಲಿ  ಸಲ್ಲಿಕೆಯಾದ ರಿಟರ್ನ್ಸ್
6.48 ಕೋಟಿ ರೂ. 2017-18ರಲ್ಲಿ ಸಲ್ಲಿಕೆಯಾದ ರಿಟರ್ನ್ಸ್

Advertisement

ಹೆಚ್ಚು ಉದ್ದಿಮೆಗಳ ನೋಂದಣಿ
64ಲಕ್ಷ ಹಳೆಯ ವ್ಯವಸ್ಥೆ  ಅಡಿ ನೋಂದಣಿ ಆಗಿದ್ದ ಉದ್ದಿಮೆ
1.12 ಕೋಟಿ ಜಿಎಸ್‌ಟಿ ಅಡಿ ನೋಂದಣಿ ಆದ ಉದ್ದಿಮೆಗಳು

 

Advertisement

Udayavani is now on Telegram. Click here to join our channel and stay updated with the latest news.

Next