ಜಿಯೋ ಕಂಪನಿ ಮೆರೆಯುತ್ತಿದೆ. ಅತ್ಯಂತ ವೇಗದ ಅಂತರ್ಜಾಲ ಸಾಮರ್ಥಯ ಹೊಂದಿರುವ ಜಿಯೋಫೈಬರ್ ಬ್ರಾಡ್ಬ್ಯಾಂಡ್ ಸೇವೆಯನ್ನು ಈಗಾಗಲೇ ಅದು ಮಾರುಕಟ್ಟೆಗಿಳಿಸಿದೆ. ಇದೀಗ ಹಲವು ದಿನಗಳಿಂದ ಗಾಳಿಮಾತಿನಂತೆ ಹರಿದಾಡುತ್ತಿದ್ದ ಒಂದು ಸುದ್ದಿ ಖಚಿತವಾಗಿದೆ.
Advertisement
ಜಿಯೋಫೈಬರ್ ಬಳಕೆದಾರರಿಗೆ, 999 ರೂ. ಮೌಲ್ಯದ ವಾರ್ಷಿಕ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ಜಿಯೋ ನೀಡಲಿದೆ. ಗೋಲ್ಡ್ ಹಾಗೂ ಅದಕ್ಕೂ ಮೇಲಿನ ಪ್ಲಾನ್ಗಳನ್ನು ರೀಚಾರ್ಜ್ ಮಾಡಿಸುವ, ಹೊಸ ಹಾಗೂ ಹಳೆಯ ಜಿಯೋ ಫೈಬರ್ ಬಳಕೆದಾರರಿಗೆ ಈ ಸೌಲಭ್ಯ ಸಿಗಲಿದೆ. ಇದರೊಂದಿಗೆ ಜಾಹೀರಾತಿನ ತಾಪತ್ರಯವಿಲ್ಲದೇ ಪ್ರೈಮ್ ಮ್ಯೂಸಿಕ್ ವೀಕ್ಷಿಸಬಹುದು. ಪ್ರೈಮ್ ಗೇಮಿಂಗ್, ಪ್ರೈಮ್ ರೀಡಿಂಗ್ ಸೌಲಭ್ಯಗಳನ್ನು ಒಂದು ವರ್ಷದವರೆಗೆಉಚಿತವಾಗಿ ಪಡೆಯಬಹುದು.