Advertisement

ಮಹಾನಗರದಲ್ಲಿ ಏಕಮುಖಮಾರ್ಗಗಳ ಅಧಿಸೂಚನೆ

03:28 PM Jul 07, 2017 | |

ಕಲಬುರಗಿ: ಮಹಾನಗರದಲ್ಲಿ ಸಾರ್ವಜನಿಕರ ಸುರಕ್ಷತೆ, ಪರಿಸರ ಮಾಲಿನ್ಯ ತಡೆಯುವ ದೃಷ್ಟಿಯಿಂದ ಜಿಲ್ಲಾ ದಂಡಾಧಿಕಾರಿ ಉಜ್ವಲಕುಮಾರ ಘೋಷ್‌ ಕೇಂದ್ರ ಮೋಟಾರು ವಾಹನ ಅಧಿನಿಯಮದಡಿ ಏಕಮುಖ ಮಾರ್ಗಗಳ ಅಧಿಸೂಚನೆ ಹೊರಡಿಸಿದ್ದಾರೆ.

Advertisement

ನಗರದ ವಿವಿಧ ಮಾರ್ಗಗಳಲ್ಲಿ ಏಕಮುಖ ಮಾರ್ಗ, ಭಾರಿ ವಾಹನಗಳ ನಗರಕ್ಕೆ ಸಂಚಾರ ನಿಷೇಧ, ಲಘು ಸರಕು ವಾಹನಗಳ ಲೋಡಿಂಗ ಮತ್ತು ಅನ್‌ಲೋಡಿಂಗ್‌ ಸಮಯ ನಿರ್ಬಂಧ, ಎಡ ಮತ್ತು ಬಲ ತಿರುಗುವಿಕೆ ನಿಷೇಧ, ವಾಹನಗಳ ಪಾರ್ಕಿಂಗ್‌ ಸರಿ-ಬೆಸ
ಪರ್ಯಾಯ ನಿಲುಗಡೆ ಸ್ಥಳ, ನಾಲ್ಕು ಚಕ್ರ ವಾಹನಗಳ ನಿಲುಗಡೆ ಸ್ಥಳ, ಅಟೋ ನಿಲುಗಡೆ ಸ್ಥಳ ಹಾಗೂ ಆಟೋ ಪಾರ್ಕಿಂಗ ಸ್ಥಳಗಳ, ವಾಹನ ಸಂಚಾರಗಳ ನಿಷೇಧ ಮತ್ತು ಬಸ್ಸುಗಳ ನಿಲುಗಡೆ ಸ್ಥಳಗಳ ಕುರಿತು ಜು. 5ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ.

ನಗರದ ರಿಂಗ್‌ ರೋಡಿನ ಯಾವುದೇ ಭಾಗಗಳಲ್ಲಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಬಾರದು. ಸರ್ವಿಸ್‌ ರೋಡಿನ ನಿಲುಗಡೆಗೆ ಸೂಚಿಸಿದ ಸ್ಥಳಗಳಲ್ಲಿಯೇ ವಾಹನ ನಿಲುಗಡೆಗೊಳಿಸಬೇಕು. ನಗರದ ಎಲ್ಲ ಬಸ್‌ ನಿಲ್ದಾಣ ಹತ್ತಿರ ಮತ್ತು ನಗರದ ಎಲ್ಲ ಪಾಯಿಂಟ್‌
ಜಂಕ್ಷನ್‌ಗಳಲ್ಲಿ ಯಾವುದೇ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಇರುವುದಿಲ್ಲ. ಇದನ್ನು ಹೊರತುಪಡಿಸಿ ಈ ಮೇಲಿನ ಆದೇಶ ಜಾರಿಯಲ್ಲಿರುತ್ತದೆ. ರಾತ್ರಿ 10:00 ಗಂಟೆಯಿಂದ ಬೆಳಗಿನ 7:00 ಗಂಟೆ ವರೆಗೆ ಮಾತ್ರ ಭಾರಿ ವಾಹನಗಳಿಗೆ ನಗರದಲ್ಲಿ ಪ್ರವೇಶ ಇರುತ್ತದೆ. ರಾತ್ರಿ 9:00ರಿಂದ ಬೆಳಗಿನ 8:30 ಗಂಟೆ ವರೆಗೆ ಮಾತ್ರ ಸೂಪರ್‌ ಮಾರ್ಕೆಟ್ಟಿನಲ್ಲಿ ಗೂಡ್ಸ್‌ ಆಟೋ, ಟಂಟಂ, ಟಾಟಾ ಎಸಿ ಲೋಡಿಂಗ್‌ ಮತ್ತು ಅನ್‌ ಲೋಡಿಂಗ್‌ ಮಾಡತಕ್ಕದ್ದು. ಇತ್ತೀಚೆಯ ಕೆಲ ದಿನಗಳಲ್ಲಿ ವಾಹನಗಳ ನಿಗದಿತ ವೇಗಕ್ಕಿಂತ ಅತಿಹೆಚ್ಚು ವೇಗದಿಂದ ಸಂಚರಿಸಿ ಮಾರಣಾಂತಿಕ ಅಪಘಾತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಮತ್ತು 
ವರ್ತುಲ ರಸ್ತೆಗಳಲ್ಲಿ ವಾಹನಗಳ ವೇಗವನ್ನು ಪ್ರತಿ ಗಂಟೆಗೆ 50 ಕಿ.ಮೀ. ಗೆ ನಿರ್ಬಂಧಿಸಿ ಮೋಟಾರು ವಾಹನ ಕಾಯ್ದೆ ಯಡಿ ಅಂತಿಮ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಮೋಟಾರು ವಾಹನ ಕಾಯ್ದೆಯಡಿ ಮತ್ತು ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್‌ 115ರ ಅನ್ವಯ ಕಲಬುರಗಿ
ನಗರದಲ್ಲಿ ಈ ಮುಂದೆ ಸೂಚಿಸಿದ ರಸ್ತೆಗಳಲ್ಲಿ ಭಾರಿ ಮತ್ತು ಸರಕು ಸಾಗಣೆಯ ವಾಹನಗಳನ್ನು ನಿಷೇಧಿಸಿ ಅಧಿಸೂಚಿಸಿದ ಮಾರ್ಗಗಳ ವಿವರ ಇಂತಿದೆ. ಹುಮನಾಬಾದ ರಿಂಗ್‌ ರೋಡ್‌, ಹಾಗರಗಾ ರಿಂಗ್‌ ರೋಡ್‌, ಆದರ್ಶನಗರ ಕ್ರಾಸ್‌, ಎಂ.ಜಿ.ರೋಡ್‌, ನ್ಯೂ ಆರ್‌.ಟಿ.ಒ.ಕ್ರಾಸ್‌, ಸೇಡಂ ರಿಂಗ್‌ ರೋಡ್‌, ಶಹಾಬಾದ ರಿಂಗ್‌ ರೋಡ, ರಾಮಮಂದಿರ ರಿಂಗ್‌ ರೋಡ್‌, ನಾಗನಹಳ್ಳಿ ಕ್ರಾಸ್‌, ಆಳಂದ ರಿಂಗ್‌ ರೋಡ್‌, ಹಿರಾಪುರ ಕ್ರಾಸ್‌, ದಬರಾಬಾದಿ ಕ್ರಾಸ್‌, ಮಿರ್ಚಿ ಕೋಲ್ಡ್‌ ಸ್ಟೋರೇಜ್‌, ಸುಲ್ತಾನಪುರ ರಿಂಗ್‌ ರೋಡ ಮತ್ತು ಕಾಕಡೆ ಚೌಕ್‌ ರೋಡ್‌ಗಳಿಂದ ಸಿಟಿಗೆ ಬರುವ ರಸ್ತೆ.

ಏಕಮುಖ ಮಾರ್ಗಗಳು 
ಚೌಕ್‌ ಸರ್ಕಲ್‌-ಸರಾಫ್‌ ಬಜಾರ್‌ ಮತ್ತು ಮದನ ಟಾಕೀಜ್‌, ಸರಾಫ್‌ ಬಜಾರ್‌-ಜೆ.ಬಿ.ಕ್ರಾಸ್‌ ಮತ್ತು ದಂಖಾ ಕ್ರಾಸ್‌, ಮಿಲನ್‌ ಚೌಕ್‌
-ಸರಾಫ್‌ ಬಜಾರ್‌, ಮದನ ಟಾಕೀಜ್‌-ಹುಮನಾಬಾದ ಬೇಸ್‌, ಕೆ.ಬಿ.ಎನ್‌ .ದರ್ಗಾ-ನೂರ್‌ ಬಾಗ್‌ ಕ್ರಾಸ್‌, ಲಾಡಗಿ ಕ್ರಾಸ್‌-ರೋಜಾ
ಪೊಲೀಸ್‌ ಸ್ಟೇಶನ್‌ ರೋಡ್‌, ಕಾಮತಾನ್‌ ಲಾಜ್‌-ದರ್ಗಾ ರೋಡ, ಎಸ್‌ವಿಪಿ ಸರ್ಕಲ್‌ -ಪಿ.ಡಿ.ಎ.ಇಂಜಿನಿಯರಿಂಗ್‌ ಕಾಲೇಜ್‌ ಮತ್ತು ರೈಲ್ವೆ ಸ್ಟೇಶನ್‌, ಆರ್‌.ಪಿ.ಸರ್ಕಲ್‌-ವಿದ್ಯಾನಗರ ವಾಟರ್‌ ಟ್ಯಾಂಕ್‌, ಜಗತ್‌ ಸರ್ಕಲ್‌-ಸಿಟಿ ಬಸ್‌ ಸ್ಟಾಡ್‌, ರೈಲ್ವೆ ಸ್ಟೇಶನ್‌-ಎಸ್‌ವಿಪಿ ಸರ್ಕಲ್‌, ಗಣೇಶ ವಿಸರ್ಜನೆ ಕ್ರಾಸ್‌(ಎಸ್‌.ಬಿ.ಟೆಂಪಲ್‌ ರೋಡ)-ಲಾಲಗೇರಿ ಕ್ರಾಸ್‌ ಮತ್ತು ಆಲ್‌ ಸಿಟಿ ಬಸೆಸ್‌
ನಾಟ್‌ ಅಲೋವ್‌).

Advertisement
Advertisement

Udayavani is now on Telegram. Click here to join our channel and stay updated with the latest news.

Next