Advertisement

ಟ್ರಾಫಿಕ್‌ ಒತ್ತಡ ನಿಯಂತ್ರಣಕ್ಕೊಂದು ದಾರಿ

12:09 AM Jul 07, 2019 | Team Udayavani |

ನಗರವನ್ನು ಒಂದಲ್ಲ ಒಂದು ಕಾರಣಕ್ಕಾಗಿ ಜನರು ಆಶ್ರಯಿಸಿರುತ್ತಾರೆ. ವಾಸ್ತವ್ಯ, ಕೆಲಸ, ಮನರಂಜನೆ, ಸೌಕರ್ಯ ಮುಂತಾದ ಅನೇಕ ಕಾರಣಗಳಿಗಾಗಿ ಜನರು ನಗರವನ್ನು ನೆಚ್ಚಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಇಂದು ನಗರಗಳು ಅನೇಕ ಸಮಸ್ಯೆಗಳನ್ನು ಹೊತ್ತುಕೊಂಡಿವೆ.

Advertisement

ಇದರಲ್ಲಿ ಟ್ರಾಫಿಕ್‌ ಸಮಸ್ಯೆ ಕೂಡ ಪ್ರಮುಖವಾದದ್ದು. ಹೌದು 15 ನಿಮಿಷದಲ್ಲಿ ತಲುಪಬೇಕಾದ ದಾರಿ ಕೂಡ ಸರಿಯಾದ ಉಪಕ್ರಮಗಳು ಇಲ್ಲದೇ ಮುಕ್ಕಾಲು ಗಂಟೆ ಸುತ್ತು ಸುತ್ತುವರಿದು ಸಂಚರಿಸುವಂತಾಗಿದೆ.

ದ್ವಿ ಪಥ ರಸ್ತೆಗಳನ್ನು ಚತುಷ್ಪಥವಾಗಿ ನಿರ್ಮಿಸುವುದು ಹೇಳುವಷ್ಟೂ ಸುಲಭವಿಲ್ಲ. ಬಹುಮಹಡಿಗಳು ಕಟ್ಟಡಗಳೇ ಸಂಧಿಗೊಂದಾಗಿ ನಿರ್ಮಾಣವಾಗಿವೆ. ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ನಗರಾಭಿವೃದ್ಧಿ ಇಲಾಖೆಗಳು ಬೇರೆ ಬೇರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದರೂ ಅಷ್ಟೇನು ಪರಿಣಾಮ ಬೀರುತ್ತಿಲ್ಲ.

ಯಾವುದೋ ರಸ್ತೆಯನ್ನು ಮತ್ತೂಂದು ಮಾರ್ಗಕ್ಕೆ ಜೋಡಿಸಿ ಪರಿಹಾರ ಆಗಬಹುದು ಎಂದುಕೊಂಡರೆ ಅಲ್ಲಿನ ಬಹುಮಹಡಿ ಕಟ್ಟಡಗಳು ಅಡ್ಡ ಬರುವುದು ಹಿಂದಿನ ಪೂರ್ವ ಯೋಜಿತ ನಿರ್ಧಾರಗಳು ಇಲ್ಲದೆಯೇ ಆಗಿದೆ.

ಇವೆಲ್ಲವನ್ನೂ ಅಳತೆ ತೂಗಿ ಪರಿಹಾರ ಇಲ್ಲವೇನೆಂದು ಕೈ ಕುಳಿತರೆ ವಿದೇಶದಲ್ಲಿ ಇದಕ್ಕೆ ಪರಿಹಾರ ಕಂಡುಕೊಂಡು ನಿರಮ್ಮುರಳರಾಗಿದ್ದಾರೆ.

Advertisement

ಹೈವೇ ಥ್ರೂ ಬಿಲ್ಡಿಂಗ್‌
ಜಪಾನ್‌ನ ನಗರಗಳು ಕಟ್ಟಡಗಳನ್ನು ಕಟ್ಟಲು ಅಲ್ಲಿನ ಆಡಳಿತ ಅಧಿಕಾರಿಗಳು ಅವಕಾಶ ನೀಡುವಾಗ ಮುಂಬರುವ ಸಮಸ್ಯೆಗಳಿಗೆ ಅವಕಾಶ ನೀಡದಂತೆ ಆ ಸ್ಥಳದ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ ಕಟ್ಟಡದ ವಿನ್ಯಾಸ ರಚನೆ ಹೇಗಿರಬೇಕು, ಯಾವೆಲ್ಲ ಅಂಶಗಳನ್ನು ಪಾಲಿಸಬೇಕು ಎನ್ನುವುದು ಮೊದಲೇ ತಿಳಿಸಲಾಗುತ್ತದೆ.

ಸಂಭಾವ್ಯ ಟ್ರಾಫಿಕ್‌ ಸಮಸ್ಯೆಗಳು ಬರುತ್ತದೆ ಎಂದು ಗೊತ್ತಾದರೆ ಈ ಬಿಲ್ಡಿಂಗ್‌ ವಿನ್ಯಾಸವನ್ನು ವಾಹನಗಳು ಸಾಗುವಂತೆ ಅದರ ಸಾಮರ್ಥ್ಯದ ಅನ್ವಯ ಘನ ವಾಹನ, ಲಘು ವಾಹನಗಳೆಂದು ಪರಿಗಣಿಸಿ ಸುರಂಗದ ರೀತಿಯಲ್ಲಿ ಕಟ್ಟಡಗಳು ರಚಿತಗೊಳ್ಳುತ್ತದೆ.

ಈ ಮೂಲಕ ಟ್ರಾಫಿಕ್‌ ಸಮಸ್ಯೆಗೆ ಯಾವುದೇ ಮರ, ಕಟ್ಟಡಗಳನ್ನು ಉರುಳಿಸದೆ ಕೈಗೊಳ್ಳುವ ಅಭಿವೃದ್ಧಿ ಕ್ರಮಗಳು ಎಲ್ಲ ನಗರಗಳಿಗೂ ಅನುಕರಣೀಯ.

ಮಂಗಳೂರಿನಲ್ಲೂ ಈ ಕಟ್ಟಡ ರಚನೆ ಪರಿಚಯವಾಗಲಿ

ಮಂಗಳೂರಿನ ಟ್ರಾಫಿಕ್‌ ಸಮಸ್ಯೆ ಮತ್ತು ಅದಕ್ಕೆ ಕಂಡುಕೊಳ್ಳುತ್ತಿರುವ ನಿಧಾನಗತಿಯ ಪರ್ಯಾಯ ಮಾರ್ಗಗಳು ಏನೊಂದು ಪ್ರಯೋಜನ ಕಾಣುತ್ತಿಲ್ಲ. ಇಲ್ಲಿನ ಬಹುಮಹಡಿ ಕಟ್ಟಡಗಳು ದಿನಕ್ಕೊಂದರಂತೆ ಏರುತ್ತಿರುವಾಗ ಪೂರ್ವಯೋಜಿತವಾಗಿ ಮತ್ತು ವಿದೇಶದ ಈ ಕ್ರಮಗಳನ್ನು ತಜ್ಞರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತಂದರೆ ಅನೇಕ ರೀತಿಯಲ್ಲಿ ಪ್ರಯೋಜನವಾಗಬಹುದು. ಇಂಥ ಕಟ್ಟಡಗಳು ಮಂಗಳೂರಿನ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಿವೆ,

•ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next