ಬಂಟ್ವಾಳ : ಕಳೆದ ಲೋಕಸಭಾ ಚುನಾವಣೆ ಸಂದರ್ಭ ಗ್ರಾಮಸ್ಥರಿಂದ ಚುನಾವಣ ಬಹಿಷ್ಕಾರ ಹೋರಾಟಕ್ಕೆ ವೇದಿಕೆಯಾಗಿದ್ದ ಸರ ಪಾಡಿ ಗ್ರಾ.ಪಂ. ವ್ಯಾಪ್ತಿಯ ಬಜ- ಬಲಯೂರು ರಸ್ತೆ ಅಭಿವೃದ್ಧಿಗೆ ಕಾಲ ಕೂಡಿ ಬಂದಂತೆ ಕಂಡು ಬರುತ್ತಿದ್ದು, ಲೋಕೋಪಯೋಗಿ ಇಲಾಖೆಯ ಒಂದು ಬಾರಿ ಅಭಿವೃದ್ಧಿ (ವನ್ ಟೈಮ್ ಡೆವಲಪ್‌ಮೆಂಟ್) ಯೋಜನೆ ಮೂಲಕ ರಸ್ತೆ ಅಭಿವೃದ್ಧಿ ಗೊಳ್ಳಲಿದೆ.
ಕೆಲವು ಸಮಯಗಳ ಹಿಂದೆ ರಸ್ತೆಯ ಡಾಮರು ಕಿತ್ತು ಹೋಗಿ ಸಂಚಾರ ಅಸಾಧ್ಯವಾದ ಹಿನ್ನೆಲೆಯಲ್ಲಿ ಇದ್ದ ಅಲ್ಪಸಲ್ಪ ಡಾಮರನ್ನು ಕಿತ್ತು ಹಾಕಿ ಸಮತಟ್ಟುಗೊಳಿಸಲಾಗಿತ್ತು. ಈ ಹಿಂದೆ ಪೈಪ್‌ಲೈನ್ ಕಾಮಗಾರಿ ವೇಳೆ ರಸ್ತೆಗೆ ಪೂರ್ತಿ ಮಣ್ಣು ಬಿದ್ದು, ಧೂಳಿನಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಇದೀಗ ಮಳೆ ಬಿದ್ದು ರಸ್ತೆ ಸಂಪೂರ್ಣ ಕೆಸರುಮಯ ಸ್ಥಿತಿಗೆ ತಲುಪಿದೆ.
ವನ್ ಟೈಮ್ ಡೆವಲಪ್‌ಮೆಂಟ್
ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಾಗ ಅದನ್ನು ಜಿ.ಪಂ. ಅನುದಾನದಿಂದ ದುರಸ್ತಿ ಪಡಿಸುವುದು ಅಸಾಧ್ಯದ ಮಾತು. ಹೀಗಾಗಿ ಸರಕಾರವು ಲೋಕೋಪಯೋಗಿ ಇಲಾಖೆ ಮೂಲಕ ಒಂದು ಬಾರಿ ಅಭಿವೃದ್ಧಿ ಯೋಜನೆ ಮೂಲಕ ಅಭಿವೃದ್ಧಿಪಡಿಸಿ ಮತ್ತೆ ಜಿ.ಪಂ.ಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿದೆ.
Advertisement
ಸುಮಾರು 2 ಕಿ.ಮೀ. ಉದ್ದದ ಈ ರಸ್ತೆಯು ತೀರಾ ಹದಗೆಟ್ಟಿದ್ದು, ವಾಹನ ಸಂಚಾರವೇ ಅಸಾಧ್ಯ ಎಂಬಷ್ಟರ ಮಟ್ಟಿಗೆ ದುಸ್ತರವಾಗಿದೆ. ಕಳೆದ ಹಲವು ವರ್ಷಗಳಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯ ಕೇಳಿ ಬರುತ್ತಿದ್ದರೂ ರಸ್ತೆ ಅಭಿವೃದ್ಧಿಗೊಂಡಿರಲಿಲ್ಲ.
Related Articles
Advertisement
ಪ್ರಸ್ತುತ ರಸ್ತೆಗೆ ಮಂಜೂರಾದ ಅನು ದಾನದ ಟೆಂಡರ್ ಪ್ರಕ್ರಿಯೆ ಆರಂಭ ಗೊಂಡಿದ್ದು, ಲೋಕೋಪಯೋಗಿ ಇಲಾಖೆಯ ಮಂಗಳೂರು ಕಚೇರಿಯ ಮೂಲಕ ಟೆಂಡರ್ ಕಾರ್ಯ ನಡೆಯುತ್ತದೆ. ಅದಕ್ಕೆ ಬೆಂಗಳೂರಿನಲ್ಲಿ ಅನುಮೋದನೆ ಲಭಿಸಿದ ಬಳಿಕ ಕಾಮಗಾರಿಯ ಆದೇಶ ಪತ್ರ (ವರ್ಕ್ ಆರ್ಡರ್) ನೀಡಲಾಗುತ್ತದೆ. ಸುಮಾರು 1 ತಿಂಗಳಲ್ಲಿ ಈ ಕಾರ್ಯ ಪೂರ್ಣ ಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರಸ್ತುತ ಅದರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಮಳೆಗಾಲ ಹತ್ತಿರ ಬರುತ್ತಿರುವುದರಿಂದ ಮಳೆಗೆ ಕಾಮಗಾರಿ ನಡೆಸುವುದು ಅಸಾಧ್ಯವಾಗಬಹುದು. ಆದರೆ ಮಳೆ ಬಾರದೇ ಇದ್ದರೆ ಕಾಮಗಾರಿ ವೇಗವನ್ನು ಪಡೆದುಕೊಳ್ಳಬಹುದು, ಇಲ್ಲದೇ ಇದ್ದರೆ ಮಳೆಗಾಲ ಮುಗಿದ ಬಳಿಕವೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.
ಗ್ರಾಮಸ್ಥರ ಮನವೊಲಿಕೆ 50 ಲಕ್ಷ ರೂ.ಗಳಲ್ಲಿ ಅಭಿವೃದ್ಧಿ
ಈಗಾಗಲೇ ಟೆಂಡರು ಪ್ರಕ್ರಿಯೆ ಆರಂಭಗೊಂಡಿದ್ದು, ಒಂದು ತಿಂಗಳೊಳಗೆ ಪೂರ್ಣಗೊಳ್ಳುತ್ತದೆ. ಈ ಕುರಿತು ಯಾವುದೇ ಗೊಂದಲಗಳಿಲ್ಲ. ಒಂದು ಬಾರಿ ಅಭಿವೃದ್ಧಿ ಯೋಜನೆಯ ಮೂಲಕ 50 ಲಕ್ಷ ರೂ.ಗಳಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಜಿ.ಪಂ.ಗೆ ಹಸ್ತಾಂತರಿಸಲಾಗುವುದು.
– ಉಮೇಶ್ ಭಟ್, ಎಇಇ, ಲೋಕೋಪಯೋಗಿ ಇಲಾಖೆ, ಬಂಟ್ವಾಳ
– ಕಿರಣ್ ಸರಪಾಡಿ