Advertisement

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

08:01 PM Dec 29, 2024 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ, ಭದ್ರತಾ ಪಡೆಗಳು ಈ ವರ್ಷ ಇದುವರೆಗೆ 75 ಉಗ್ರರನ್ನು ಹೊಡೆದುರುಳಿಸಿವೆ. ಅವರಲ್ಲಿ ಸುಮಾರು 60 ಪ್ರತಿಶತದಷ್ಟು ಜನರು ಪಾಕಿಸ್ಥಾನದವರು ಎಂದು ಸೇನಾ ಅಧಿಕಾರಿಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಭಾರತೀಯ ಭದ್ರತಾ ಪಡೆಗಳು ಪ್ರತಿ ಐದು ದಿನಗಳಿಗೊಮ್ಮೆ ಉಗ್ರನೊಬ್ಬನನ್ನು ಬಲಿ ಹಾಕಿವೆ. ಹ*ತ್ಯೆಗೀಡಾದ 75 ಉಗ್ರರ ಪೈಕಿ ಹೆಚ್ಚಿನವರು ವಿದೇಶಿಯರು, ಇದರಲ್ಲಿ 17 ಮಂದಿ ಗಡಿ ನಿಯಂತ್ರಣ ರೇಖೆ ಯಲ್ಲಿ ಒಳನುಸುಳುವಿಕೆ ಪ್ರಯತ್ನದ ವೇಳೆ, ಆಂತರಿಕ ಪ್ರದೇಶಗಳಲ್ಲಿ ಎನ್‌ಕೌಂಟರ್‌ಗಳಲ್ಲಿ 26 ಮಂದಿ ಹ*ತ್ಯೆಯಾಗಿದ್ದಾರೆ.

ಜಮ್ಮು ಪ್ರದೇಶದ ಐದು ಜಿಲ್ಲೆಗಳಾದ ಜಮ್ಮು, ಉಧಂಪುರ, ಕಥುವಾ, ದೋಡಾ ಮತ್ತು ರಾಜೌರಿಗಳಲ್ಲಿ 42 ಸ್ಥಳೀಯೇತರ ಉಗ್ರರು ಹತರಾಗಿದ್ದಾರೆ.

ಬಾರಾಮುಲ್ಲಾ ವಿದೇಶಿ ಉಗ್ರರ ಚಟುವಟಿಕೆಗಳ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದ್ದು, ಒಂಬತ್ತು ಎನ್‌ಕೌಂಟರ್‌ಗಳಲ್ಲಿ 14 ಸ್ಥಳೀಯೇತರ ಸಾ*ವನ್ನು ದಾಖಲಿಸಿದೆ.

ಸ್ಥಳೀಯ ಉಗ್ರರ ಗುಂಪು ಬಹುತೇಕ ನಿರ್ನಾಮವಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2024 ರಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 60 ಉಗ್ರ ಸಂಬಂಧಿತ ಘಟನೆಗಳಿಗೆ ಸಾಕ್ಷಿಯಾಗಿದ್ದು, ಪರಿಣಾಮವಾಗಿ 32 ನಾಗರಿಕರು ಮತ್ತು 26 ಭದ್ರತಾ ಪಡೆಗಳಸಿಬಂದಿ ಸೇರಿ 122 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next