Advertisement

ಚರ್ಮ, ಕೂದಲಿನ ಕಾಳಜಿಗೆ ಒಂದು ಚಮಚ ತುಪ್ಪ !

11:16 PM Aug 19, 2019 | mahesh |

ಭಾರತೀಯರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವ ಒಂದು ಪದಾರ್ಥ ತುಪ್ಪ. ಬೆಣ್ಣೆಯಿಂದ ತೆಗೆದ ತುಪ್ಪದಲ್ಲಿ ಕೊಬ್ಬಿನಿಂದ ಕೂಡಿದ ಆಮ್ಲ ಹಾಗೂ ಉತ್ತಮ ಕೊಲೆಸ್ಟ್ರಾಲ್ ಇದೆ. ತುಪ್ಪವನ್ನು ಆರೋಗ್ಯಕರ ಪೋಷಕಾಂಶ ಎಂದು ಪರಿಗಣಿಸಲಾಗಿದ್ದು, ಚರ್ಮ ಹಾಗೂ ಕೂದಲನ್ನು ಆರೈಕೆ ಮಾಡುತ್ತದೆ.

Advertisement

· ಪೋಷಕಾಂಶಗಳಿವೆ
ತುಪ್ಪ ಆ್ಯಂಟಿಆಕ್ಸಿಡೆಂಟ್‌ಗಳೊಂದಿಗೆ ವಿಟಮಿನ್‌ ಎ ಮತ್ತು ಇ ಯಿಂದ ಸಮೃದ್ಧವಾಗಿದೆ. ಚರ್ಮವನ್ನು ನಯಗೊಳಿಸಲು ಮತ್ತು ತೇವಾಂಶವನ್ನು ಉತ್ತಮವಾಗಿ ಹಿಡಿದಿಟ್ಟುಕೊಳ್ಳಲು ತುಪ್ಪ ಸಹಕಾರಿ. ಒಣ ಚರ್ಮವನ್ನು ಹೊಂದಿದ್ದರೆ ತುಪ್ಪ ಒಣ ಚರ್ಮದಿಂದ ಬರುವ ತುರಿಕೆ ನಿವಾರಿಸಲು ಸಹಾಯ ಮಾಡುತ್ತದೆ.

·ಕಣ್ಣಿನ ಕ್ರೀಮ್‌
ಮುಖವನ್ನು ತೊಳೆದ ಬಳಿಕ ಸಣ್ಣ ಪ್ರಮಾಣದಲ್ಲಿ ತುಪ್ಪವನ್ನು ತೆಗೆದುಕೊಂಡು ಕಣ್ಣಿನ ಕೆಳಗಡೆ ಹಚ್ಚಿ. 15 ನಿಮಿಷಗಳ ಆನಂತರ ಹತ್ತಿಯ ಸಹಾಯದಿಂದ ಅದನ್ನು ನಿಧಾನವಾಗಿ ತೆಗೆಯಿರಿ. ಇದು ಸುಕ್ಕು ಹಾಗೂ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ.

·ಫೇಸ್‌ಪ್ಯಾಕ್‌
ಒಂದು ಟೀ ಚಮಚ ಓಟ್ಸ್‌, ತುಪ್ಪ, ಜೇನುತುಪ್ಪ ಹಾಗೂ ಯೋಗರ್ಟ್‌ ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಅನಂತರ ತೊಳೆಯಿರಿ.

ಒರಟು ಕೂದಲಿಗೆ
ಒಣ ಹಾಗೂ ಹಾನಿಗೊಳಗಾದ ಕೂದಲನ್ನು ಸರಿಗೊಳಿಸಲು ತುಪ್ಪ ಉಪಯೋಗಿ. ಒಂದು ಪೂರ್ಣ ಚಮಚ ತುಪ್ಪವನ್ನು ತೆಗೆದುಕೊಂಡು ನಯವಾಗಿ ಮಸಾಜ್‌ ಮಾಡಿ.

Advertisement

ಒಂದು ಟೇಬಲ್ಸ್ಪೂನ್‌ ತುಪ್ಪವನ್ನು ಒಂದು ಟೇಬಲ್ಸ್ಪೂನ್‌ ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿ ಬಿಸಿ ಮಾಡಿ. ಇದನ್ನು ನೆತ್ತಿ ಹಾಗೂ ಕೂದಲಿನ ಹಚ್ಚಿ. ಬೆಚ್ಚಗಿನ ಬಟ್ಟೆಯಲ್ಲಿ ಕೂದಲನ್ನು ಕಟ್ಟಿ 20 ನಿಮಿಷ ಬಿಡಿ. ಬಟ್ಟೆ ಕೂದಲು ತುಪ್ಪವನ್ನು ಸರಿಯಾಗಿ ಹೀರಿಕೊಳ್ಳಲು ಸಹಕಾರಿ. •

– ರಮ್ಯಾ ಕೆದಿಲಾಯ

Advertisement

Udayavani is now on Telegram. Click here to join our channel and stay updated with the latest news.

Next