Advertisement
ಕುಟುಂಬ ಸದಸ್ಯರಿಂದ ದೈಹಿಕ ವಾಗಿ ಹಲ್ಲೆಗೆ ಒಳಗಾದ ಅಥವಾ ಇತರೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಏಕಕಾಲಕ್ಕೆ ವಸತಿ, ಊಟ, ಕೌನ್ಸೆಲಿಂಗ್, ಚಿಕಿತ್ಸೆ ಹಾಗೂ ರಕ್ಷಣೆ ಬೇಕಿರುತ್ತದೆ. ಒಂದೇ ಸೂರಿನಡಿ ಸಿಕ್ಕರೆ ಅಲೆದಾಡುವುದು ತಪ್ಪುತ್ತದೆ. ಈ ಪರಿಕಲ್ಪನೆಯಡಿ ಕೇಂದ್ರಗಳು ಅಸ್ತಿತ್ವಕ್ಕೆ ಬಂದಿವೆ. ಇವುಗಳ ಸ್ಥಾಪನೆಗೆ ಕೇಂದ್ರ ಸರಕಾರ ಈಗಾಗಲೇ ಪ್ರತಿ ಜಿಲ್ಲೆಗೂ ತಲಾ 48 ಲಕ್ಷ ರೂ. ಅನುದಾನವನ್ನೂ ಬಿಡುಗಡೆ ಮಾಡಿದೆ. ಕಾಮಗಾರಿ ಅಂತಿಮ ಹಂತದಲ್ಲಿ ಪ್ರಗತಿಯಲ್ಲಿವೆ.
ಉಡುಪಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈಗಾಗಲೇ ಒನ್ ಸ್ಟಾಪ್ ಸೆಂಟರ್‌ಗಾಗಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸಿಬಂದಿ ನೇಮಕ ಮಾತ್ರ ಆಗಬೇಕಿದೆ. ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಜಾಗದ ಹುಡುಕಾಟ ನಡೆದಿದೆ. ಉಳಿದ 25 ಜಿಲ್ಲೆಗಳಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಆದರೀಗ ಕೊರೊನಾ ಹಿನ್ನೆಲೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.