Advertisement

ಪಾಕಿಸ್ತಾನ: ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ

02:07 PM Jul 26, 2020 | Mithun PG |

ಪಾಕಿಸ್ತಾನ: ಬಲೂಚಿಸ್ತಾನದ ಟುರ್ಬಾತ್ ಪ್ರದೇಶದಲ್ಲಿ ಶನಿವಾರ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಓರ್ವ   ಪಾಕಿಸ್ತಾನದ ಸೈನಿಕ  ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಟುರ್ಬತ್‌ನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕೆಚ್ ಜಿಲ್ಲೆಯ ಪಿಡರಾಕ್ ಬಳಿ ಪಾಕ್ ಸೈನಿಕರು ಗಸ್ತು ತಿರುಗುತ್ತಿದ್ದಾಗ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ  ಎಂದು ಐಎಸ್‌ಪಿಆರ್ ಪ್ರಕಟಣೆಯಲ್ಲಿ ತಿಳಿಸಿದೆ.

ಮೃತ ಸೈನಿಕನನ್ನು  ಲ್ಯಾನ್ಸ್ ನಾಯಕ್ ಜಾವೇದ್ ಕರೀಮ್ ಎಂದು ಗುರುತಿಸಲಾಗಿದ್ದು ಇತರ ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಲೂಚಿಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರ ದಾಳಿ ಹೆಚ್ಚಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನನ್ನು ನಿಯೋಜಿಸಲಾಗುತ್ತಿದೆ.

ಜುಲೈ 14 ರಂದು ಕೂಡ  ಬಲೂಚಿಸ್ತಾನದ ಪಂಜಗೂರ್ ಜಿಲ್ಲೆಯಲ್ಲಿ ಭಯೋತ್ಪಾದಕರು ಹೊಂಚು ಹಾಕಿ ಮೂವರು ಸೈನಿಕರನ್ನು ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿ 8 ಮಂದಿ ಸೈನಿಕರು ಗಾಯಗೊಂಡಿದ್ದರು. ಮೇ ತಿಂಗಳಲ್ಲಿ  ಬುಲೆಡಾ ಪ್ರದೇಶದಲ್ಲಿ ನಡೆದ ಸ್ಫೋಟದಲ್ಲಿ ಮೇಜರ್ ಸೇರಿದಂತೆ ಆರು ಮಂದಿ ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದರು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next