ನವದೆಹಲಿ: ರಾಹುಲ್ ಗಾಂಧಿ ತನ್ನ ಹೆಸರಿನ ಜೊತೆಗೆ ಸಾವರ್ಕರ್ ಹೆಸರು ಸೇರಿಸಿಕೊಳ್ಳಬೇಕಾದರೆ “ವೀರ್ ಸಾವರ್ಕರ್ ಅವರಂತೆಯೇ ಧೈರ್ಯಶಾಲಿಯಾಗಿರಬೇಕೆಂದು” ಬಿಜೆಪಿ ಮುಖಂಡ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವ್ಯಂಗ್ಯವಾಡಿದ್ದಾರೆ.
ರೇಪ್ ಇನ್ ಇಂಡಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕ್ಷಮೆಯಾಚಿಸುವಂತೆ ಬಿಜೆಪಿ ಆಗ್ರಹಿಸಿತ್ತು. ಇದನ್ನು ತಳ್ಳಿ ಹಾಕಿದ್ದ ರಾಹುಲ್ ಗಾಂಧಿ ದೆಹಲಿಯಲ್ಲಿ ನಡೆದ ಭಾರತ್ ಬಚಾವೋ ರ್ಯಾಲಿಯಲ್ಲಿ ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ. ನಾನು ಸತ್ಯ ಹೇಳಿದ್ದು ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ಕಿಡಿಕಾರಿದ ಶಿವರಾಜ್ ಸಿಂಗ್ ಚೌಹಾಣ್ ಮೊದಲು ಧೈರ್ಯಶಾಲಿಯಾಗಿ, ನಂತರ ವೀರ್ ಸಾವರ್ಕರ್ ಹೆಸರು ಸೇರಿಸಿಕೊಳ್ಳಿ ಎಂದಿದ್ದಾರೆ.
ಹಲವು ಬಿಜೆಪಿ ನಾಯಕರು ಕೂಡ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದು ಇದು ಸಾರ್ವಕರ್ ಅವರ ದೇಶಪ್ರೇಮಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. “ರಾಹುಲ್ ಹೆಸರಿನ ಜೊತೆಗೆ ಸಾವರ್ಕರ್ ಹೆಸರು ಸೂಕ್ತವಾಗಿಲ್ಲ. ಯಾವಾಗಲೂ ಮುಸ್ಲಿಮರ ಪರವಾಗಿಯೇ ಮಾತನಾಡು ವುದರಿಂದ ಅವರಿಗೆ “ರಾಹುಲ್ ಜಿನ್ನಾ’ ಎನ್ನುವುದೇ ಹೆಚ್ಚು ಸೂಕ್ತ ಎಂಧು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ತಿಳಿಸಿದ್ದಾರೆ.
ಬಿಜೆಪಿಯ ಮತ್ತೊಬ್ಬ ವಕ್ತಾರ ಸಂಬಿತ್ ಪಾತ್ರಾ “”ರಾಹುಲ್ ಎಂದಿಗೂ ಸಾವರ್ಕರ್ ಆಗಲು ಸಾಧ್ಯವಿಲ್ಲ” ಎಂದಿದ್ದಾರೆ.