ಹೈದರಾಬಾದ್: ಬಿಗ್ ಬಾಸ್ ತೆಲುಗು ಸೀಸನ್ -8 (Bigg Boss Telugu Season 8) ಭಾನುವಾರದಿಂದ(ಸೆ.1 ರಿಂದ) ಆರಂಭಗೊಂಡಿದೆ.
ನಾಗಾರ್ಜುನ(Nagarjuna) ಅವರು ನಡೆಸಿಕೊಳ್ಳಲಿರುವ ಬಿಗ್ ಬಾಸ್ ತೆಲುಗು ಸ್ಪರ್ಧಿಗಳ ಪಟ್ಟಿಯಿಂದ ಕುತೂಹಲ ಹೆಚ್ಚಿಸಿದೆ. 14 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ಆಗಿದ್ದಾರೆ.
ಮೊದಲ ದಿನ ಸ್ಪರ್ಧಿಗಳು ಪರಸ್ಪರ ಸ್ನೇಹಿತರಾಗಿದ್ದು, ಕ್ಷಣಗಳು ಕಳೆದಂತೆ ದೊಡ್ಮನೆಯಲ್ಲಿನ ಸ್ಪರ್ಧಿಗಳು ಬಿಗ್ ಬಾಸ್ ಆಟಕ್ಕೆ ಹೊಂದಿಕೊಳ್ಳುತ್ತಿದ್ದಾರೆ.
14 ಸ್ಪರ್ಧಿಗಳ ಲಿಸ್ಟ್ ಸುದ್ದಿಯಲ್ಲಿರುವಂತೆಯೇ ಅಂತಿಮ ಕ್ಷಣದಲ್ಲಿ ಬಿಗ್ ಬಾಸ್ ಮನೆಗೆ ಹೋಗುವ ನಿರ್ಧಾರದಿಂದ ಹಿಂದೇಟು ಹಾಕಿರುವ ಸ್ಪರ್ಧಿಯ ವಿಚಾರ ಸದ್ಯ ಬಿಗ್ ಬಾಸ್ ವೀಕ್ಷಕರ ವಲಯದಲ್ಲಿ ಚರ್ಚಾ ವಿಷಯವಾಗಿದೆ.
ಕೊನೆಯ ನಿಮಿಷದಲ್ಲಿ ಸ್ಪರ್ಧೆಯಿಂದ ಹಿಂದೇಟು:
ತೆಲುಗಿನಲ್ಲಿ ಗುಮ್ಮಡಿ ನರಸಯ್ಯ ಅವರ ಜೀವನಚರಿತ್ರೆಯಲ್ಲಿನ ಪಾತ್ರಕ್ಕಾಗಿ ಖ್ಯಾತಿಯನ್ನು ಗಳಿಸಿ, 2021 ರಲ್ಲಿ ʼಜಾತಿಯ ರಾಹದಾರಿʼಯಲ್ಲಿನ ಕೆಲಸಕ್ಕಾಗಿ ಫಿಲ್ಮ್‌ಫೇರ್ ನಾಮನಿರ್ದೇಶನವನ್ನು ಗಳಿಸಿದ ನಟ ಪರಮೇಶ್ವರ್ ಹಿವರ್ಲಿ ಬಿಗ್ ಬಾಸ್ ಸ್ಪರ್ಧಿ ಆಗುವುದು ಅಧಿಕೃತವಾಗಿತ್ತು.
ಆದರೆ ಕಾರ್ಯಕ್ರಮದ ಆರಂಭಕ್ಕೆ ಒಂದು ದಿನ ಮೊದಲು ಪರಮೇಶ್ವರ್ ಅವರು ದಿಢೀರ್ ಆಗಿ ಬಿಗ್ ಬಾಸ್‌ನಲ್ಲಿ ಭಾಗಿಯಾಗಲ್ಲ ಎಂದಿದ್ದಾರೆ. ಆರೋಗ್ಯ ಸಮಸ್ಯೆ ಕಾರಣ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
ಆದರೆ ಅವರು ಮುಂದೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆಯೊಳಗೆ ಪ್ರವೇಶ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ತೆಲುಗು 8ರ ಸ್ಪರ್ಧಿಗಳ ಪಟ್ಟಿ:
ವಿಷ್ಣುಪ್ರಿಯಾ ಭೀಮನೇನಿ (ನಟಿ)
ಪೃಥ್ವಿರಾಜ್ ಶೆಟ್ಟಿ(ನಟ)
ನಿಖಿಲ್ (ನಟ)
ನಾಗ ಮಣಿಕಂಠ(ನಟ)
ಅಭಯ್ ನವೀನ್(ನಟ)
ನಬೀಲ್ ಅಫ್ರಿದಿ(ಯೂಟ್ಯೂಬರ್)
ಶೇಖರ್ ಬಾಷಾ (ಆರ್ ಜೆ)
ಯಾಸ್ಮಿ ಗೌಡ(ನಟಿ)
ಸೋನಿಯಾ ಅಕುಲ(ನಟಿ)
ಪ್ರೇರಣಾ(ನಟಿ)
ಸೀತಾ (ನಟಿ)
ಬೇಜವಾಡ ಬೇಬಕ್ಕ( ಸೋಶಿಯಲ್ ಮೀಡಿಯಾ ಪ್ರಭಾವಿ, ನಟಿ)
ನೈನಿಕಾ (ಡ್ಯಾನ್ಸರ್)
ಆದಿತ್ಯ ಓಂ (ನಟ)