Advertisement

ಮೂವರು ನಾಯಕಿಯರಲ್ಲಿ ಒಬ್ಬರು ಸಿಕ್ಕಾಯ್ತು

03:48 PM Oct 15, 2018 | Team Udayavani |

1981 ರಲ್ಲಿ ಶಂಕರ್ ನಾಗ್ ನಟಿಸಿದ್ದ “ಗೀತಾ’ ಸಿನಿಮಾ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಇದೀಗ ಅದೇ ಟೈಟಲ್‍ನಲ್ಲಿ ಚಿತ್ರವೊಂದು ಮೂಡಿಬರುತ್ತಿದೆ. ಹೌದು! ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ “ಗೀತಾ’ ಚಿತ್ರ ಮೂಡಿಬರುತ್ತಿದ್ದು, ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಮೊದಲ ನಾಯಕಿಯಾಗಿ ಮಲಯಾಳಂ ಬೆಡಗಿ ಪಾರ್ವತಿ ಅರುಣ್ ಆಯ್ಕೆಯಾಗಿದ್ದಾರೆ.

Advertisement

ಪಾರ್ವತಿ ಹೊಸಮುಖವಾಗಿದ್ದು, “ಗೀತಾ’ ಸಿನಿಮಾಗೆ ಸಹಿ ಮಾಡಿದ್ದಾರೆ. ಪಾರ್ವತಿ ಅರುಣ್ ಈಗಾಗಲೇ ಮಲಯಾಳಂ ಚಿತ್ರದಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಮುಖ್ಯವಾಗಿ ಮೊದಲನೇ ನಾಯಕಿಯನ್ನು ಆಯ್ಕೆ ಮಾಡುವುದೇ ಚಿತ್ರ ತಂಡಕ್ಕೆ ದೊಡ್ಡ ಕೆಲಸವಾಗಿತ್ತಂತೆ. ಇನ್ನು ಉಳಿದ ನಾಯಕಿಯರ ಹೆಸರನ್ನು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ. ಸದ್ಯ ಗೋಲ್ಡನ್ ಸ್ಟಾರ್ ಗಣೇಶ್​​​ “ಗಿಮಿಕ್’​​ ಸಿನಿಮಾ ಶೂಟಿಂಗ್​​ಗಾಗಿ ಶ್ರೀಲಂಕಾದಲ್ಲಿದ್ದಾರೆ.

ಇದಾದ ನಂತರ ” ಗೀತಾ ಸಿನಿಮಾದ ಶೂಟಿಂಗ್​ ಆರಂಭವಾಗಲಿದೆ. ಚಿತ್ರವನ್ನು ವಿಜಯ್ ನಾಗೇಂದ್ರ ನಿರ್ದೇಶಿಸುತ್ತಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಅಲ್ಲದೇ  ಸೈಯ್ಯದ್ ಸಲಾಮ್ ಮತ್ತು ಗಣೇಶ್ ಹೋಮ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದ್ದು, ಉಳಿದ ಕಲಾವಿದ, ತಂತ್ರಜ್ಞರನ್ನು ಇನ್ನಷ್ಟೇ ಆಯ್ಕೆ ಮಾಡಬೇಕಿದೆ. “ಗೀತಾ’ ಚಿತ್ರದ ಶೂಟಿಂಗ್​​ ಕೊಲ್ಕತಾ, ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next