Advertisement

ಟೆಂಪೋ ಟ್ರಾವೆಲರ್‌ನಲ್ಲೊಂದು ಸಸ್ಪೆನ್ಸ್‌ ಸ್ಟೋರಿ

09:58 AM Nov 10, 2019 | Lakshmi GovindaRaju |

ಕಿಡ್ನಾಪ್‌ ಕುರಿತ ಅನೇಕ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಈಗ ಅದೇ ಶೇಡ್‌ ಇರುವ ಹೊಸಬರ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಹೌದು, “ಐ 1′ ಸಿನಿಮಾ ಮೂಲಕ ಒಂದಷ್ಟ ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿವೆ. ಇಲ್ಲಿ ಒಬ್ಬಾತ ಮೂವರು ಅಮಾಯಕ ಹುಡುಗರನ್ನ ಟೆಂಪೋ ಟ್ರಾವೆಲರ್‌ವೊಂದರಲ್ಲಿ ಬಂಧಿಯಾಗಿಸುತ್ತಾನೆ. ಆಮೇಲೆ ಏನಾಗುತ್ತೆ ಎಂಬುದೇ ಇಡೀ ಚಿತ್ರದ ಸಸ್ಪೆನ್ಸ್‌. ಚಿತ್ರ ಈಗಾಗಲೇ ಬಿಡುಗಡೆಗೆ ರೆಡಿಯಾಗಿದ್ದು, “ಯು’ ಪ್ರಮಾಣ ಪತ್ರ ಪಡೆದುಕೊಂಡಿದೆ.

Advertisement

ಅಂದಹಾಗೆ ಈ ಚಿತ್ರವನ್ನು ಆರ್‌.ಎಸ್‌.ರಾಜ್‌ಕುಮಾರ್‌ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಅವರದೇ. ಹಿರಿಯ ನಿರ್ದೇಶಕ ಭವಾನಿ ಶಂಕರ್‌ ಬಳಿ ಕೆಲಸ ಕಲಿತ ರಾಜ್‌ಕುಮಾರ್‌, ಒಂದು ಸಸ್ಪೆನ್ಸ್‌ ಜಾನರ್‌ ಕಥೆ ಹೆಣೆದು ಕುತೂಹಲ ಮೂಡಿಸುವ ಚಿತ್ರ ಮಾಡಿದ್ದಾರೆ. ಅಷ್ಟಕ್ಕೂ ಅವರ ಕಥೆಯಲ್ಲಿ ಮೂವರು ಹುಡುಗರನ್ನು ವ್ಯಕ್ತಿಯೊಬ್ಬ ಟೆಂಪೋ ಟ್ರಾವೆಲ್‌ನಲ್ಲಿ ಯಾಕೆ ಹಿಡಿದಿಟ್ಟುಕೊಳ್ಳುತ್ತಾನೆ. ಅದಕ್ಕೆ ಏನು ಕಾರಣ ಎಂಬುದಕ್ಕೆ ಸಿನಿಮಾ ನೋಡಬೇಕು ಎಂಬುದು ಚಿತ್ರತಂಡದ ಮಾತು.

ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಒಂದೊಂದು ತಿರುವು ಕುತೂಹಲ ಮೂಡಿಸುತ್ತ ಹೋಗುತ್ತವೆ. ಇಲ್ಲಿ ಮೂವರು ಹುಡುಗರನ್ನು ಬಂಧಿಸಿಡುವ ಆ ವ್ಯಕ್ತಿ ಯಾರು ಮತ್ತು ಚಿತ್ರದ ನಾಯಕಿ ಯಾರು ಎಂಬುದು ಗೌಪ್ಯ. ಬಹುತೇಕ ನೆಲಮಂಗಲ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ವಿಶೇಷವೆಂದರೆ, ಬಹುತೇಕ ದೃಶ್ಯಗಳು ಟೆಂಪೋ ಟ್ರಾವೆಲ್‌ನಲ್ಲೇ ನಡೆಯುತ್ತದೆ. ಚಿತ್ರದಲ್ಲಿ ಕಿರುತೆರೆಯ ಕಿಶೋರ್‌, ರಂಜನ್‌, ರಂಗಭೂಮಿ ನಟ ಧೀರಜ್‌ ಪ್ರಸಾದ್‌ ನಟಿಸಿದ್ದಾರೆ.

ನಾಗೇಂದ್ರ ಪ್ರಸಾದ್‌ ಮತ್ತು ಉಮೇಶ್‌ ಬರೆದ ಹಾಡುಗಳಿಗೆ ವಿಭಿನ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಶಿವು ಛಾಯಾಗ್ರಹಣವಿದೆ. ಪಿ.ಚಾಕೋ ಸಂಕಲನ ಮಾಡಿದರೆ ಅಶೋಕ್‌ ಸಾಹಸವಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಈಗಾಗಲೇ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಶಿಕ್ಷಕಿ ಶೈಲಜಾ ಪ್ರಕಾಶ್‌ ನಿರ್ಮಾಣ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್‌ನಲ್ಲಿ ರಿಲೀಸ್‌ ಆಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next