Advertisement

ಮತ್ತೆ ಒಂದಾದ ವಿಕ್ಟರಿ ಜೋಡಿ

11:42 AM Apr 10, 2018 | |

“ಕಾಲೇಜ್‌ ಕುಮಾರ್‌’ ಚಿತ್ರದ ನಂತರ ನಿರ್ದೇಶಕ ಸಂತು, ಶರಣ್‌ಗೆ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣ ಕೂಡಾ ಶುರುವಾಗಿದೆ. ಚಿತ್ರಕ್ಕೆ ನಾಯಕಿ ಯಾರು ಎಂಬ ಕುತೂಹಲ ಅನೇಕರಲ್ಲಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಅದು ಅಸ್ಮಿತಾ ಸೂದ್‌. ಈ ಹೆಸರನ್ನು ಎಲ್ಲೋ ಕೇಳಿದ್ದೇವೆಂದು ನೀವು ಆಲೋಚಿಸುತ್ತಿಬಹುದು.

Advertisement

ನೀವು ಶರಣ್‌ ಅವರ “ವಿಕ್ಟರಿ’ ಸಿನಿಮಾ ನೋಡಿದ್ದರೆ ಅಲ್ಲಿಗೆ ನಿಮಗೆ ಅಸ್ಮಿತಾ ಸೂದ್‌ ಕಾಣಸಿಗುತ್ತಾರೆ. ಆ ನಂತರ “ಅಧ್ಯಕ್ಷ’ ಸಿನಿಮಾದ ಕಲ್ಯಾಣಿ ಟೀಚರ್‌ ಪಾತ್ರವನ್ನು ನೀವು ನೆನಪು ಮಾಡಿಕೊಳ್ಳಬಹುದು. ಹೀಗೆ ಶರಣ್‌ ಅವರ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿರುವ ಅಸ್ಮಿತಾ ಸೂದ್‌ ಈಗ ಮೂರನೇ ಸಿನಿಮಾವನ್ನು ಶರಣ್‌ ಜೊತೆ ಮಾಡುತ್ತಿದ್ದಾರೆ.

ಸಂತು ನಿರ್ದೇಶನದ ಈ ಚಿತ್ರದಲ್ಲಿ ಅಸ್ಮಿತಾ ಸೂದ್‌ ನಾಯಕಿ ನಟಿಸುತ್ತಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅಸ್ಮಿತಾ ಸೂದ್‌ ಅವರ ಪಾತ್ರ ಹೇಗಿರುತ್ತದೆ ಎಂದು ನೀವು ಕೇಳಿದರೆ ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಅಸ್ಮಿತಾ ಸೂದ್‌ ಈಗಾಗಲೇ ಕನ್ನಡ ಸೇರಿದಂತೆ ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. 

ಈ ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದು, ಸಂತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ತರುಣ್‌ ಸುಧೀರ್‌ ಅವರ ಕಥೆ ಇದೆ. ಬಹುತೇಕ “ವಿಕ್ಟರಿ’ ತಂಡವೇ ಇಲ್ಲೂ ಮುಂದುವರೆಯಲಿದೆ. ಇದು ಕೂಡಾ ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾವಾಗಿದ್ದು, ಚಿತ್ರದ ಟೈಟಲ್‌ ಇನ್ನಷ್ಟೇ ಅಂತಿಮವಾಗಬೇಕಿದೆ. ಸದ್ಯ ಶರಣ್‌ ಅವರ “ರ್‍ಯಾಂಬೋ-2′ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next