Advertisement

ಕಡುಕಷ್ಟದಲ್ಲೊಂದು ಭರವಸೆಯ ಬೆಳಕು

06:15 PM Apr 13, 2020 | Sriram |

ಲಂಡನ್‌: ಇಡೀ ಭೂಮಂಡಲ ಕೋವಿಡ್‌-19 ಹಾವಳಿಗೆ ಥರ ಗುಟ್ಟುತ್ತಿರುವಾಗ ಅಲ್ಲಲ್ಲಿ ಚಿಕ್ಕಪುಟ್ಟ ಭರವಸೆಯ ಕಿರಣಗಳು ಗೋಚರಿಸುತ್ತಿವೆ. ನ್ಯೂ ಇಂಗ್ಲಂಡ್‌ ಜರ್ನಲ್‌ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿರುವ ವರದಿಯೊಂದು ಕೋವಿಡ್‌ಗೆ ಗಿಲೀಡ್‌ ಸಯನ್ಸಸ್‌ ಇಂಕ್‌ ಅಭಿವೃದ್ಧಿಪಡಿಸಿರುವ ಒಂದು ಔಷಧ ಪರಿಣಾಮಕಾರಿಯಾಗಬಹುದು ಎಂಬ ಆಶಾಭಾವನೆ ಬಿತ್ತಿದೆ.

Advertisement

61 ಕೋವಿಡ್‌ ಸೋಂಕಿತರ ಮೇಲೆ ಈ ಔಷಧವನ್ನು ಪ್ರಯೋಗಿಸಿದಾಗ ಗುಣಾತ್ಮಕವಾದ ಫ‌ಲಿತಾಂಶ ಸಿಕ್ಕಿದೆ. ಆದರೆ ಸೋಂಕಿತರಿಗೆ ಬೇರೆ ಯಾವ ಚಿಕಿತ್ಸೆ ನೀಡಲಾಗಿತ್ತು ಎಂಬ ಮಾಹಿತಿ ಈ ವರದಿಯಲ್ಲಿಲ್ಲ. ಇದು ಪ್ರಾಥಮಿಕ ಹಂತದಲ್ಲಿರುವ ಚಿಕಿತ್ಸೆ. ಇತರ ಸೋಂಕಿತರ ಜತೆಗೆ ಈ ಚಿಕಿತ್ಸೆಯನ್ನು ಹೋಲಿಸಿ ನೋಡಿಲ್ಲ ಮತ್ತು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಿಲ್ಲ. ಆದರೂ ಇದೊಂದು ಆಶಾದಾಯಕ ಬೆಳವಣಿಗೆ ಎಂದಷ್ಟೇ ಹೇಳಬಹುದು ಎಂದು ವರದಿ ಹೇಳಿದೆ.

ರೆಮೆಡ್‌ಸಿವಿರ್‌ ಎಂಬ ಔಷಧಿಯನ್ನು ಸೋಂಕಿತರ ಮೇಲೆ ಪ್ರಯೋಗಿಸಲಾಗಿದೆ. 61 ಸೋಂಕಿತರ ಪೈಕಿ 30 ಮಂದಿ ಮೆಕಾನಿಕಲ್‌ ವೆಂಟಿಲೇಟರ್‌, ನಾಲ್ವರು ಶರೀರದಲ್ಲಿ ರಕ್ತವನ್ನು ಪಂಪ್‌ ಮಾಡುವ ಮೆಶಿನ್‌ನಲ್ಲಿದ್ದರು. 18 ದಿನಗಳ ಚಿಕಿತ್ಸೆಯ ಬಳಿಕ ಆಕ್ಸಿಜನ್‌ ಸಪೋರ್ಟ್‌ ಬೇಸ್‌ನಲ್ಲಿದ್ದ 36 ರೋಗಿಗಳಲ್ಲಿ ಅಂದರೆ ಶೇ. 68 ರೋಗಿಗಳಲ್ಲಿ ಗಣನೀಯವಾದ ಸುಧಾರಣೆ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next