ಭೋಪಾಲ್: ನಮೀಬಿಯಾದಿಂದ ಭಾರತಕ್ಕೆ ತರಲಾದ ಚೀತಾಗಳಲ್ಲಿ ಒಂದು ಗರ್ಭಿಣಿ ಎಂದು ಹೇಳಲಾಗಿದೆ. “ಇದು ನಿಜ, ಆಶಾ ಎಂಬ ಚೀತಾ ಗರ್ಭಿಣಿಯಾಗಿರಬಹುದು. ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಮೊದಲ ಬಾರಿಗೆ ಗರ್ಭ ಧರಿಸಿದೆ ಎಂದು ನಂಬಲಾಗಿದೆ ಎಂದು ಚೀತಾ ಸಂರಕ್ಷಣಾ ನಿಧಿಯ ಡಾ.ಲಾರಿ ಮಾರ್ಕರ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
“ಮುಂದೆ ಏನಾಗುತ್ತದೆ ಎಂದು ನೋಡಲು ನಾವು ಕಾಯುತ್ತಿದ್ದೇವೆ. ಗರ್ಭಿಣಿಯಾಗಿರುವ ಸಾಧ್ಯತೆ ಹೆಚ್ಚು.ಸಿಸಿಎಫ್ ಅನ್ನು ಒಳಗೊಂಡಿರುವ ಕುನೋದಲ್ಲಿ ಪ್ರಾಜೆಕ್ಟ್ ಚೀತಾ ತಂಡವು ಸಿದ್ಧವಾಗುತ್ತಿದೆ. ಚೀತಾ ಮರಿಗಳನ್ನು ಹೊಂದಿದ್ದರೆ, ಇದು ನಮೀಬಿಯಾದಿಂದ ಮತ್ತೊಂದು ಉಡುಗೊರೆಯಾಗಿದೆ” ಎಂದು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
” ನಮೀಬಿಯಾದಲ್ಲೇ ಗರ್ಭ ಧರಿಸಿದ್ದು, ಆಶಾ ಮರಿಗಳನ್ನು ಹೊಂದಿದ್ದರೆ, ನಾವು ಅವಳಿಗೆ ಗೌಪ್ಯತೆಯನ್ನು ಮತ್ತು ಶಾಂತತೆಯನ್ನು ನೀಡಬೇಕಾಗಿದೆ. ಅವಳ ಸುತ್ತಲೂ ನಿರ್ಜನ ವಾತಾವರಣವನ್ನು ಅವಳು ಹೊಂದಿರಬೇಕು. ಅವಳ ಆವರಣದಲ್ಲಿ ಒಂದು ಹುಲ್ಲಿನ ಗುಡಿಸಲು ನಿರ್ಮಿಸಲಾಗಿದೆ ಎಂದು ಡಾ ಮಾರ್ಕರ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಆದರೆ, ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಹೆಣ್ಣು ಚಿರತೆ ಗರ್ಭಿಣಿಯಾಗಿರುವ ಸುದ್ದಿ ತಪ್ಪುದಾರಿಗೆಳೆಯುವಂತಿದೆ. ನಮೀಬಿಯಾದಿಂದ ಯಾವುದೇ ಪರೀಕ್ಷೆ ಮಾಡಿಲ್ಲ ಮತ್ತು ಗರ್ಭಧಾರಣೆಯ ವರದಿಯನ್ನು ನೀಡಿಲ್ಲ. ಈ ಸುದ್ದಿ ಹೇಗೆ ಹರಡಿದೆ ಎಂದು ನನಗೆ ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ.
ಪ್ರಾಜೆಕ್ಟ್ ಚೀತಾದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜನ್ಮದಿನವಾದ ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚೀತಾಗಳನ್ನು ಮರುಪರಿಚಯಿಸಿದ್ದರು.