Advertisement

One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ

03:00 AM Dec 18, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಬಹು ನಿರೀಕ್ಷಿತ ಘೋಷಣೆಯಾಗಿದ್ದ, “ಒಂದು ದೇಶ ಒಂದು ಚುನಾವಣೆ’ಯನ್ನು ಜಾರಿ ಮಾಡಲು ಅಗತ್ಯ ವಿರುವ, ಎರಡು ಸಂವಿಧಾನ ತಿದ್ದುಪಡಿ ಗಳಿರುವ ಮಸೂದೆ (129ನೇ ತಿದ್ದುಪಡಿ ಮಸೂದೆ) ಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ಮಸೂದೆಗೆ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, ಮಂಡನೆಗೆ ಮುನ್ನ 90 ನಿಮಿಷಗಳ ಕಾಲ ಚರ್ಚೆ ನಡೆಯಿತಲ್ಲದೆ, ಮಂಡನೆಗಾಗಿಯೇ ಮತದಾನವೂ ನಡೆದಿದೆ.

Advertisement

ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಈ ಮಸೂದೆಯನ್ನು ಮಂಡಿಸಿದರು. ಮಸೂದೆ ಮಂಡನೆಗೆ ಮುನ್ನ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಸಾಕಷ್ಟು ಚರ್ಚೆ ನಡೆಯಿತು. ಮಂಡನೆಯ ವಿಷಯವನ್ನು ಮತಕ್ಕೆ ಹಾಕುವಂತೆ ವಿಪಕ್ಷ ಗಳು ಒತ್ತಡ ಹಾಕಿದ್ದರಿಂದ ಮತದಾನ ನಡೆ ಯಿತು. ಮಸೂದೆಯ ಪರ 269 ಮತಗಳು ಚಲಾ ವಣೆ ಯಾದರೆ, ವಿರುದ್ಧವಾಗಿ 198 ಮತಗಳು ಬಿದ್ದವು. ಸರಳ ಬಹುಮತ ಸಿಕ್ಕಿದ ಕಾರಣ ಮಸೂದೆಯನ್ನು ಮಂಡಿಸಲಾಯಿತು. ಇದರೊಂದಿಗೆ ಕೇಂದ್ರಾಡಳಿತ ಪ್ರದೇಶಗಳ ನಿಯಮ ತಿದ್ದುಪಡಿ ಕಾಯ್ದೆಯನ್ನು ಕೂಡ ಸಚಿವರು ಮಂಡಿಸಿದರು.

ಸಂವಿಧಾನದ ಮೂಲ ನಿಯಮಗಳು ಬದಲಾಗುವುದಿಲ್ಲ
ಮಸೂದೆ ಮಂಡನೆಯ ವೇಳೆ ಮಾತನಾಡಿದ ಸಚಿವ ಮೇಘಾÌಲ್‌, ಹೊಸ ಸಂವಿಧಾನ ತಿದ್ದುಪಡಿಗಳು ಸಂವಿಧಾನದ ಮೂಲ ನಿಯಮಗಳನ್ನು ಇವು ಬದಲಾವಣೆ ಮಾಡುವುದಿಲ್ಲ. ಕೇಂದ್ರ ರಾಜ್ಯಗಳ ನಡುವಿನ ಅಧಿಕಾರ ಹಂಚಿಕೆ, ಜಾತ್ಯತೀತ, ಸಂವಿಧಾನದ ಅಧಿಪತ್ಯ ಮುಂತಾದವುಗಳು ಬದಲಾಗುವುದಿಲ್ಲ ಎಂದರು.

ವಿಪಕ್ಷಗಳ ಭಾರೀ ವಿರೋಧ
ಒಂದು ದೇಶ ಒಂದು ಚುನಾವಣೆ ಮಸೂದೆಗೆ ವಿಪಕ್ಷ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದರು. ಇದು ಸಂವಿಧಾನವನ್ನು ಬುಡಮೇಲು ಮಾಡುವ ನಡೆ ಎಂದು ಲೋಕಸಭೆಯಲ್ಲಿ ವಾಗ್ಧಾಳಿ ನಡೆಸಿದರು. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ, ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಭಾಗವೆಂದರೆ ಒಕ್ಕೂಟ ವ್ಯವಸ್ಥೆ. ಆದರೆ ಈ ಒಕ್ಕೂಟ ವ್ಯವಸ್ಥೆಯನ್ನು ಏಕ ಚುನಾವಣೆ ನಾಶ ಮಾಡುತ್ತದೆ ಎಂದರು.

ಜೆಪಿಸಿಗೆ ನೀಡಲು ಮೋದಿ ಇಂಗಿತ: ಶಾ
ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆಯಾದ ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ಒಪ್ಪಿಸುವ ಇಂಗಿತವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ ಎಂದಿದ್ದಾರೆ. ಜೆಪಿಸಿ ಈ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಲಿದ್ದು, ಬಳಿಕ ಕೇಂದ್ರ ಸಚಿವ ಸಂಪುಟಕ್ಕೆ ವರದಿ ನೀಡಲಿದೆ. ಸಂಪುಟ ಒಪ್ಪಿಗೆ ಸೂಚಿಸಿದ ಬಳಿಕ ಮತ್ತೆ ಲೋಕಸಭೆಯಲ್ಲಿ ಮಂಡನೆ ಮಾಡಿ, ವಿವರವಾದ ಚರ್ಚೆ ನಡೆಸಿ, ಸದನದ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ ಎಂದರು.

Advertisement

ಅಗತ್ಯ ಮತ ನಿಮ್ಮಲ್ಲಿಲ್ಲ: ವಿಪಕ್ಷ
ಮಸೂದೆ ಮಂಡನೆಗೆ ಮುನ್ನ ನಡೆದ ಮತದಾನದಲ್ಲಿ ಸರಕಾರದ ಪರ 269 ಮತಗಳು ಮಾತ್ರ ಚಲಾವಣೆಯಾದವು. ಈ ವಿಷಯವನ್ನಿಟ್ಟುಕೊಂಡು ವ್ಯಂಗ್ಯ ಮಾಡಿರುವ ವಿಪಕ್ಷಗಳು, ಮಸೂದೆಗೆ ಒಪ್ಪಿಗೆ ಪಡೆದುಕೊಳ್ಳಲು ಬೇಕಾದ ಮೂರನೇ ಎರಡರಷ್ಟು ಬಹುಮತ ಸರಕಾರದ ಬಳಿ ಇಲ್ಲ. ಆದರೂ ಮಸೂದೆ ಮಂಡನೆಗೆ ಮುಂದಾಗಿದೆ ಎಂದಿವೆ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಶಿ ತರೂರ್‌, ಕೇಂದ್ರದಲ್ಲಿ ಸರಕಾರ ಬಿದ್ದರೆ, ರಾಜ್ಯದಲ್ಲೂ ಸರಕಾರ ಬೀಳಬೇಕಾ? ಈ ವ್ಯವಸ್ಥೆಯೇ ಸರಿಯಿಲ್ಲ ಎಂದಿದ್ದಾರೆ.


ಕೇಂದ್ರ ಸರಕಾರದ ವಾದವೇನು?

ಹೊಸ ಸಂವಿಧಾನ ತಿದ್ದುಪಡಿಗಳು ಸಂವಿಧಾನದ ಮೂಲ ನಿಯಮಗಳನ್ನು ಬದಲಾವಣೆ ಮಾಡುವುದಿಲ್ಲ. ಕೇಂದ್ರ-ರಾಜ್ಯಗಳ ನಡುವಿನ ಅಧಿಕಾರ ಹಂಚಿಕೆ, ಜಾತ್ಯತೀತ ತಣ್ತೀ, ಸಂವಿಧಾನದ ಆಧಿಪತ್ಯ ಬದಲಾಗುವುದಿಲ್ಲ.

ವಿಪಕ್ಷಗಳು ಹೇಳಿದ್ದೇನು?
ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಏಕ ಚುನಾವಣೆಯು ಸಂವಿಧಾನವನ್ನು ಬುಡಮೇಲು ಮಾಡುವ ನಡೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಎಂದು ಕರೆಸಿಕೊಳ್ಳುವ ಒಕ್ಕೂಟ ವ್ಯವಸ್ಥೆಯನ್ನು ಏಕ ಚುನಾವಣೆಯು ನಾಶ ಮಾಡುತ್ತದೆ.

ಏನೇನಾಯಿತು?
* ಮಸೂದೆ ಮಂಡನೆಗಾಗಿ ಸಚಿವ ಮೇಘ್ವಾಲ್‌ ಎದ್ದುನಿಲ್ಲುತ್ತಿದ್ದಂತೆ ಗಲಾಟೆ

*ತಿದ್ದುಪಡಿ ಮಸೂದೆ ಮಂಡನೆಗೆ ಮೊದಲು 90 ನಿಮಿಷಗಳ ಕಾಲ ಚರ್ಚೆ

*ಮಸೂದೆ ಮಂಡನೆಗೆ ಮುನ್ನ ಮತಕ್ಕೆ ಹಾಕಲು ವಿಪಕ್ಷಗಳಿಂದ ಆಗ್ರಹ

*ಮತದಾನ ನಡೆಸಲು ಸ್ಪೀಕರ್‌ ಒಪ್ಪಿಗೆ, ಮತ ಚಲಾಯಿಸಿದ ಸಂಸದರು

*ಜೆಪಿಸಿಗೆ ಒಪ್ಪಿಸುವ ಇಂಗಿತ ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ

*ಮಸೂದೆ ಮಂಡನೆಯಾದ ಬಳಿಕ ಲೋಕಸಭಾ ಕಲಾಪ ಮುಂದೂಡಿಕೆ

ಮುಂದೇನು?
*ಲೋಕಸಭೆಯಲ್ಲಿ ಮಸೂದೆಯ ಪರಿಣಾಮ ಕುರಿತು ವಿಸ್ತೃತ ಚರ್ಚೆ

*ಕೇಂದ್ರ ಸರಕಾರ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸುವ ಸಾಧ್ಯತೆ

* ಮಸೂದೆಯ ಬಗ್ಗೆ ಜೆಪಿಸಿಯಿಂದ ವಿವರವಾಗಿ ಅಧ್ಯಯನ, ಚರ್ಚೆ

*ಬಳಿಕ ಜಂಟಿ ಸಮಿತಿಯಿಂದ ಕೇಂದ್ರ ಸಚಿವ ಸಂಪುಟಕ್ಕೆ ವರದಿ ಸಲ್ಲಿಕೆ

*ಸಂಪುಟ ಒಪ್ಪಿದ ಬಳಿಕ ಮತ್ತೂಮ್ಮೆ ಲೋಕಸಭೆಯಲ್ಲಿ ಮಂಡನೆ, ಚರ್ಚೆ

*ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿದರೆ, ರಾಜ್ಯಸಭೆಯಲ್ಲೂ ಮಸೂದೆ ಮಂಡನೆ

*ಎರಡೂ ಸದನ ಒಪ್ಪಿದರೆ ರಾಷ್ಟ್ರಪತಿಗೆ, ಅಲ್ಲಿ ಅಂಕಿತ ಬಿದ್ದರೆ ಕಾಯ್ದೆ ಜಾರಿ

 

Advertisement

Udayavani is now on Telegram. Click here to join our channel and stay updated with the latest news.

Next