Advertisement

One Nation One Election ;ಇಂದು ಲೋಕಸಭೆಯಲ್ಲಿ ಮಸೂದೆ ಮಂಡನೆ?

12:40 AM Dec 17, 2024 | Team Udayavani |

ಹೊಸದಿಲ್ಲಿ: ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಗಳವಾರ ಮಂಡನೆಯಾಗುವ ಸಾಧ್ಯತೆ ಇದೆ. ಬಳಿಕ ಇದನ್ನು ಸಂಸತ್ತಿನ ಉಭಯ ಸದನಗಳ ಜಂಟಿ ಸದನ ಸಮಿತಿಗೆ ಒಪ್ಪಿಸುವ ನಿರೀಕ್ಷೆ ಇದೆ. ಒಂದು ದೇಶ, ಒಂದು ಚುನಾವಣೆ ಎಂದೇ ಜನಪ್ರಿ­ಯವಾಗಿರುವ “ಸಂವಿಧಾನದ 129ನೇ ತಿದ್ದು­ಪಡಿ ಮಸೂದೆ-2024’ನ್ನು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘಾÌಲ್‌ ಲೋಕಸಭೆ­ಯಲ್ಲಿ ಮಂಡಿಸಲಿದ್ದಾರೆ. ಬಳಿಕ ಮೇಘಾÌಲ್‌ ಅವರು ಮಸೂದೆಯ ವಿಸ್ತೃತ ಚರ್ಚೆಗೆ ಜಂಟಿ ಸದನ ಸಮಿತಿ ನೀಡುವಂತೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಕೋರಲಿದ್ದಾರೆ ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಜಂಟಿ ಸದನ ಸಮಿತಿಗೆ ಲೋಕಸಭೆಯಲ್ಲಿ ಪಕ್ಷಗಳು ಹೊಂದಿರುವ ಸಂಖ್ಯಾಬಲದ ಆಧಾ­ರದಲ್ಲಿ ಸದಸ್ಯರನ್ನು ನೇಮಿಸಲಿದ್ದು ಬಿಜೆಪಿಗೆ ಅಧ್ಯಕ್ಷ ಸ್ಥಾನ ದೊರೆಯಲಿದೆ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಸಮಿತಿ ದೇಶದಲ್ಲಿ ಸ್ಥಳೀಯ ಸಂಸ್ಥೆಗಳು ಸೇರಿ ಎಲ್ಲ ಚುನಾವಣೆ ಏಕಕಾಲಕ್ಕೆ ಚುನಾವಣೆ ನಡೆಸಲು ಶಿಫಾರಸು ಮಾಡಿತ್ತು. ಆದರೆ ಕಳೆದ ವಾರ ಕೇಂದ್ರ ಸಚಿವ ಸಂಪುಟ ಇದನ್ನು ಅನುಮೋದಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next