Advertisement

One more; ಕಲಬುರಗಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ

04:46 PM Mar 07, 2024 | Team Udayavani |

ಕಲಬುರಗಿ: ಮಾರ್ಚ್ 9 ರಂದು ಕಲಬುರಗಿಯಿಂದಲೇ ಬೆಂಗಳೂರಿಗೆ ಹೊಸ ರೈಲು ಶುರುವಾಗುತ್ತಿರುವ ನಡುವೆ ಈಗ ಮತ್ತೊಂದು ವಂದೇ ಭಾರತ್ ರೈಲು ಇದೇ ಮಾರ್ಚ್ 12 ರಿಂದ ಸಂಚಾರ ಆರಂಭಿಸಲಿದೆ.‌

Advertisement

ಕಲಬುರಗಿ ಯಿಂದಲೇ ಬೆಂಗಳೂರಿಗೆ ವಂದೇ ಭಾರತ ರೈಲು ಸಂಚರಿಸಲಿದ್ದು, 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿ ಯಿಂದ ಆನ್ಲೈನ್ ಮೂಲಕ ಚಾಲನೆ ನೀಡುವರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಲಬುರಗಿ ಜನತೆಗೆ ನೂತನ ವಂದೇ ಭಾರತ್ ರೈಲು ಘೋಷಣೆ ಮಾಡಿದ್ದು ಮಾರ್ಚ್ 12 ರಿಂದ ಸಂಚಾರ ಪ್ರಾರಂಭವಾಗುತ್ತಿರುವುದು ಇತಿಹಾಸ ನಿರ್ಮಾಣ ವಾದಂತಾಗಿದೆ ಎಂದು ಸಂಸದ ಡಾ. ಉಮೇಶ್ ಜಿ. ಜಾಧವ್‌ ಸಂತಸ ವ್ಯಕ್ತಪಡಿಸಿದ್ದಾರೆ.

ವಂದೇ ಭಾರತ ರೈಲು ಸಂಚಾರ ಕುರಿತಾಗಿ ಕೇಂದ್ರ ರೈಲ್ವೆ ಇಲಾಖೆಯಿಂದ ಗುರುವಾರದಂದು ಈ ಬಗ್ಗೆ ಮಾಹಿತಿ ಕೈ ಸೇರಿದ್ದು ಮಾರ್ಚ್ 12ರಂದು ಪ್ರಧಾನ ಮಂತ್ರಿಗಳು ವಂದೇ ಭಾರತ್ ರೈಲುಗಾಡಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದಿದ್ದಾರೆ.

ಬೆಂಗಳೂರು- ಕಲಬುರಗಿ ಮಧ್ಯೆ ಪ್ರತ್ಯೇಕ ರೈಲುಗಾಡಿ‌ ಸಂಚರಿಸಬೇಕೆನ್ನುವ ಬೇಡಿಕೆಯು ದಶಕಗಳಷ್ಟು ಆಗಿದೆ.‌ ಹಿಂದಿನದು ಮೊನ್ನೆಯಷ್ಟೇ ಕಲಬುರಗಿ – ಬೆಂಗಳೂರು (ಬೈಯಪ್ಪನಹಳ್ಳಿ) ವಿಶೇಷ ರೈಲು ಘೋಷಣೆ ಮಾಡಿ ಮಾರ್ಚ್ 9 ರಂದು ಶನಿವಾರ ಸಂಚಾರ ಪ್ರಾರಂಭವಾಗುತ್ತಲಿದೆ. ಇದರ ನಡುವೆ ಪ್ರಧಾನಮಂತ್ರಿಯವರು ಕಲಬುರಗಿ ಜನತೆಗೆ ವಿಶೇಷ ಗಿಫ್ಟ್ ರೂಪದಲ್ಲಿ ವಂದೇ ಭಾರತ್ ರೈಲು ಘೋಷಣೆ ಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಇದು ನನ್ನ ಜೀವನದ ಧನ್ಯತೆಯ ಕ್ಷಣವಾಗಿದೆ. ಕೇಳಿದ್ದು ಒಂದು ರೈಲು ಪ್ರಧಾನಿಯವರು ಕೊಟ್ಟದ್ದು ಎರಡು ರೈಲು. ಇದು ಕಲಬುರ್ಗಿ ಜನತೆಯ ಮೇಲೆ ಪ್ರಧಾನಿಯವರಿಗೆ ಇರುವ ಪ್ರೀತಿಗೆ ಸಾಕ್ಷಿಯಾಗಿದೆ‌ ಎಂದಿದ್ದಾರೆ.

Advertisement

ಈ ಮೂಲಕ ಕಲಬುರಗಿ ಲೋಕಸಭಾ ಕ್ಷೇತ್ರದ ಜನತೆಗೆ ನೀಡಿದ ವಾಗ್ದಾನವನ್ನು ಈಡೇರಿಸಿದ್ದು ಈ ಭಾಗದ ಅಭಿವೃದ್ಧಿಯಲ್ಲಿ ಇವು ಮೈಲಿಗಲ್ಲಾಗಲಿದೆ ಎಂದು ಜಾಧವ್ ಹೇಳಿದ್ದು, ಇಂತಹ ಮಹಾನ್ ಕೊಡುಗೆಯನ್ನು ನೀಡಿದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಕಲಬುರಗಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಆಸೆ ಕೈಗೂಡಿದೆ. ಜನರು ಪ್ರಧಾನಿ ಅವರ ಕೆಲಸವನ್ನು ಮೆಚ್ಚಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕಲಬುರಗಿ ಗತಿಶಕ್ತಿ ಕಾರ್ಗೋ ಟರ್ಮಿನಲ್ ಗೆ ಒಪ್ಪಿಗೆ

ಕಲಬುರಗಿಯ ಹಿರೇ ನಂದೂರು ಭಾರತ್ ಪೆಟ್ರೋಲಿಯಂ ನಿಗಮದ ಪೆಟ್ರೋಲಿಯಂ ಉತ್ಪನ್ನ ಸಂಗ್ರಹಕಾರವನ್ನು ಗತಿ ಶಕ್ತಿ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯು ಗುರುತಿಸಿ ಘೋಷಣೆ ಮಾಡಿರೋದು ‌ಮತ್ತೊಂದು ಹೆಮ್ಮೆಯ ಸಂಗತಿಯಾಗಿದ್ದು, ಈ ಭಾಗದ ಅಭಿವೃದ್ಧಿಗೆ ಪೂರಕವಾಗುವ ಯೋಜನೆ ಅಡಿ ಒಳಪಡಿಸಿರುವುದಕ್ಕೆ ಪ್ರಧಾನಮಂತ್ರಿಗಳು ಹಾಗೂ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ಸಚಿವರಾದ ಹರ್ ದೀಪ್ ಸಿಂಗ್ ಪುರಿ ಅವರಿಗೂ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ಬಿ ಪಿ ಸಿ ಎಲ್ ತೈಲ ಸಂಗ್ರಹಾಗಾರದ ಸಾಮರ್ಥ್ಯವನ್ನು 30ಸಾವಿರ ಕಿಲೋ ಲೀಟರ್ ಹೆಚ್ಚಿಸಿ ಪ್ರಧಾನಿಯವರು ಅದನ್ನು ಲೋಕಾರ್ಪಣೆ ಮಾಡಿದ್ದರು. ಈಗ ಇದೊಂದು ಕೊಡುಗೆಯಾಗಿದೆ ಎಂದು ಸಂಸದ ಡಾ‌.ಜಾಧವ್ ವಿವರಣೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next