Advertisement
ಕಲಬುರಗಿ ಯಿಂದಲೇ ಬೆಂಗಳೂರಿಗೆ ವಂದೇ ಭಾರತ ರೈಲು ಸಂಚರಿಸಲಿದ್ದು, 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿ ಯಿಂದ ಆನ್ಲೈನ್ ಮೂಲಕ ಚಾಲನೆ ನೀಡುವರು.
Related Articles
Advertisement
ಈ ಮೂಲಕ ಕಲಬುರಗಿ ಲೋಕಸಭಾ ಕ್ಷೇತ್ರದ ಜನತೆಗೆ ನೀಡಿದ ವಾಗ್ದಾನವನ್ನು ಈಡೇರಿಸಿದ್ದು ಈ ಭಾಗದ ಅಭಿವೃದ್ಧಿಯಲ್ಲಿ ಇವು ಮೈಲಿಗಲ್ಲಾಗಲಿದೆ ಎಂದು ಜಾಧವ್ ಹೇಳಿದ್ದು, ಇಂತಹ ಮಹಾನ್ ಕೊಡುಗೆಯನ್ನು ನೀಡಿದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಕಲಬುರಗಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಆಸೆ ಕೈಗೂಡಿದೆ. ಜನರು ಪ್ರಧಾನಿ ಅವರ ಕೆಲಸವನ್ನು ಮೆಚ್ಚಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಲಬುರಗಿ ಗತಿಶಕ್ತಿ ಕಾರ್ಗೋ ಟರ್ಮಿನಲ್ ಗೆ ಒಪ್ಪಿಗೆ
ಕಲಬುರಗಿಯ ಹಿರೇ ನಂದೂರು ಭಾರತ್ ಪೆಟ್ರೋಲಿಯಂ ನಿಗಮದ ಪೆಟ್ರೋಲಿಯಂ ಉತ್ಪನ್ನ ಸಂಗ್ರಹಕಾರವನ್ನು ಗತಿ ಶಕ್ತಿ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯು ಗುರುತಿಸಿ ಘೋಷಣೆ ಮಾಡಿರೋದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದ್ದು, ಈ ಭಾಗದ ಅಭಿವೃದ್ಧಿಗೆ ಪೂರಕವಾಗುವ ಯೋಜನೆ ಅಡಿ ಒಳಪಡಿಸಿರುವುದಕ್ಕೆ ಪ್ರಧಾನಮಂತ್ರಿಗಳು ಹಾಗೂ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ಸಚಿವರಾದ ಹರ್ ದೀಪ್ ಸಿಂಗ್ ಪುರಿ ಅವರಿಗೂ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಬಿ ಪಿ ಸಿ ಎಲ್ ತೈಲ ಸಂಗ್ರಹಾಗಾರದ ಸಾಮರ್ಥ್ಯವನ್ನು 30ಸಾವಿರ ಕಿಲೋ ಲೀಟರ್ ಹೆಚ್ಚಿಸಿ ಪ್ರಧಾನಿಯವರು ಅದನ್ನು ಲೋಕಾರ್ಪಣೆ ಮಾಡಿದ್ದರು. ಈಗ ಇದೊಂದು ಕೊಡುಗೆಯಾಗಿದೆ ಎಂದು ಸಂಸದ ಡಾ.ಜಾಧವ್ ವಿವರಣೆ ನೀಡಿದ್ದಾರೆ.