Advertisement

ಕಾಂಚೀಪುರಂ ದೇವಸ್ಥಾನದಲ್ಲಿ ಸ್ಪೋಟ : ಓರ್ವ ಸಾವು ; ಐವರಿಗೆ ಗಾಯ

09:58 AM Aug 27, 2019 | Hari Prasad |

ಕಾಂಚಿಪುರಂ: ಇಲ್ಲಿನ ತಿರುಪೊರೂರ್ ಎಂಬಲ್ಲಿನ ಗಂಗೈ ಅಮ್ಮನ್ ದೇವಸ್ಥಾನದ ಆವರಣದಲ್ಲಿ ಸ್ಪೋಟ ಸಂಭವಿಸಿದೆ. ಈ ಸ್ಪೋಟದಲ್ಲಿ ಓರ್ವ ಮೃತಪಟ್ಟಿದ್ದು ಐವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ದೇವಸ್ಥಾನದ ಕೊಳದಲ್ಲಿ ಕಂಡುಬಂದ ವಸ್ತುವೊಂದು ಏಕಾಏಕಿ ಸ್ಪೋಟಗೊಂಡ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಆದರೆ ಈ ಘಟನೆಗೂ ಇತ್ತೀಚೆಗೆ ರಾಜ್ಯಾದ್ಯಂತ ಹೊರಡಿಸಲಾಗಿದ್ದ ಉಗ್ರ ಭೀತಿ ಎಚ್ಚರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೇವಸ್ಥಾನದ ಸಮೀಪದಲ್ಲಿದ್ದ ನೀರಿನ ಟ್ಯಾಂಕ್ ಒಂದನ್ನು ಸ್ಥಳೀಯರು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಒಂದು ವಸ್ತು ಸಿಕ್ಕಿತ್ತು ಅದನ್ನು ಅವರು ತೆರೆಯುವ ಪ್ರಯತ್ನದಲ್ಲಿದ್ದಾಗ ಈ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next