Advertisement
ಮೃತ ಭಾರತೀಯನನ್ನು ವಿಕಾಸ್ ಯಾದವ್ (22) ಎಂದು ಗುರುತಿಸಲಾಗಿದೆ. ಘರ್ಷಣೆ ಸಂಬಂಧ ಲಾಗನ್ ಯಾದವ್ (45) ಎಂಬಾತನನ್ನು ನೇಪಾಲದ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಗನ್ ಯಾದವ್‌ನ ನೇಪಾಲಿ ಸೊಸೆ ಗಡಿಯಲ್ಲಿ ಭಾರತೀಯರ ಜತೆಗೆ ಮಾತುಕತೆ ನಡೆಸುತ್ತಿದ್ದರು. ಅದಕ್ಕೆ ಎಪಿಎಫ್ ಸಿಬಂದಿ ತಕರಾರು ತೆಗೆದಿದ್ದು, ಮಾತಿಗೆ ಮಾತು ಬೆಳೆದು ಘರ್ಷಣೆ ಹಂತ ತಲುಪಿತು. ಭಾರತದ ಕಡೆಯಿಂದ 75-80 ಮಂದಿ ಸೇರಿದ್ದು, ಗುಂಪು ಚದುರಿ ಸಲು ಗುಂಡು ಹಾರಿಸ ಬೇಕಾಯಿತು ಎಂದು ಎಪಿಎಫ್ ಹೇಳಿದೆ.