Advertisement

ದೇಶದಲ್ಲಿ ಹತ್ತರಲ್ಲಿ ಒಬ್ಬರು ಮಾರಕ ಕ್ಯಾನ್ಸರ್ ಗೆ ಬಲಿ : ಅಧ್ಯಯನ ವರದಿ

09:22 AM Feb 06, 2020 | Hari Prasad |

ಪುಣೆ/ಮುಂಬಯಿ: ದೇಶದ ಪ್ರತಿ ಹತ್ತು ಮಂದಿಯಲ್ಲಿ ಒಬ್ಬರು ಜೀವನದಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಪ್ರತಿ 15 ಮಂದಿಯಲ್ಲಿ ಓರ್ವರು ಈ ಸಮಸ್ಯೆಯಿಂದ ಜೀವ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ದೇಶದ 1.35 ಬಿಲಿಯ ಜನಸಂಖ್ಯೆಯ ಪೈಕಿ 1.16 ಮಿಲಿಯ ಹೊಸ ರೋಗಿಗಳು ಇದ್ದಾರೆ. 7,84, 800 ಮಂದಿ ಅದರಿಂದಾಗಿ ಮರಣ ಹೊಂದಿದ್ದಾರೆ ಎಂದು ಅದು ಹೇಳಿಕೊಂಡಿದೆ.

Advertisement

2018ನೇ ಸಾಲಿಗಾಗಿ ಸಂಬಂಧಿಸಿದ ವರದಿ ಇದಾಗಿದೆ. ಸ್ತನ, ಬಾಯಿ, ಗರ್ಭ ಕಂಠ, ಶ್ವಾಸಕೋಶ, ಹೊಟ್ಟೆ, ಕೊಲೊ ರೆಕ್ಟರಲ್‌, ಅನ್ನನಾಳದ ಕ್ಯಾನ್ಸರ್‌ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ ಎಂದು ಅದರಲ್ಲಿ ಹೇಳಲಾಗಿದೆ. ಕ್ಯಾನ್ಸರ್‌ಗೆ ಪಡೆಯುವ ಕಿಮೋಥೆರಪಿ ಚಿಕಿತ್ಸೆಯ ಪ್ರತಿಕೂಲ ಪರಿಣಾಮ ತಡೆಯಲು ಯೋಗ ಸಹಕಾರಿ.

ಸಾಂಪ್ರದಾಯಿಕ  ಪದ್ಧತಿಗಿಂತ ಅದುವೇ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಮುಂಬಯಿನ ಟಾಟಾ ಮೆಮೋರಿಯಲ್‌ ಸೆಂಟರ್‌ ಹೇಳಿದೆ. ಆಯುರ್ವೇದ, ಯೋಗದ ಮೂಲಕ ಕಿಮೋಥೆರ ಪಿಯ ಅಡ್ಡ ಪರಿಣಾಮದ ಬಗ್ಗೆ ಸಂಸ್ಥೆ ಈಗ ಅಧ್ಯಯನ ನಡೆಸುತ್ತಿದೆ. ರೋಗಿಗಳ ಮೇಲೆ ನಡೆಸಿದ ಅಧ್ಯಯನದಿಂದ ಈ ಸಾಬೀತಾಗಿದೆ ಎಂದು ಮುಂಬಯಿನ ಟಾಟಾ ಮೆಮೋರಿಯಲ್‌ ಸೆಂಟರ್‌ನ ಡಾ| ಸುದೀಪ್‌ ಗುಪ್ತಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next