Advertisement
ಬೆಳ್ತಂಗಡಿ ತಾ|ನಲ್ಲಿ ವಿವಿಧ ಇಲಾ ಖೆಗಳಡಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾರ್ಯ ಕ್ರಮದ ವಿಚಾರವಾಗಿ ಸಭೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತ ನಾಡಿದರು. ಬೆಳ್ತಂಗಡಿ ಅಭಿವೃದ್ಧಿ ಪೂರಕ ಯೋಜ ನೆಗಳಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅಭಿವೃದ್ಧಿ, ಕುಡಿಯುವ ನೀರು, ಘನತ್ಯಾಜ್ಯ ಘಟಕ ನಿರ್ವಹಣೆ ಕುರಿತಾದ ಒಂದಿಷ್ಟು ಅಭಿವೃದ್ಧಿ ಪೂರಕ ವಿಚಾರಗಳನ್ನು ಸಂಬಂ ಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾ ಲಿಸಿಸ್‌ಯಂತ್ರ ಸಮಸ್ಯೆ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆ. ಹೊಸ ಡಯಾಲಿಸಿಸ್ ಯಂತ್ರ ಜತೆಗೆ 7 ಯಂತ್ರಗಳು ರೋಗಿಗಳ ತುರ್ತು ಸೇವೆಗೆ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಕ್ರಮ ಕೈಗೊಳ್ಳುವ ಸಲುವಾಗಿ ಸರಕಾರಿ ಆಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೊಳಪಡಿಸುವುದು, ಆಹಾರ, ಸ್ವತ್ಛತೆ ಮತ್ತು ಸರಕಾರದಿಂದ ಬಂದ ವೆಂಟಿಲೇಟರ್‌ಗಳನ್ನು ಹೇಗೆ ಸದುಪಯೋಗ ಪಡಿಸಬಹುದು ಮುಂತಾದ ವಿಚಾರವಾಗಿ ಕ್ರಮ ಕೈಗೊಳ್ಳಲು ಆರೋಗ್ಯಧಿಕಾರಿ, ತಹಶೀಲ್ದಾರ್‌ಗೆ ಸೂಚಿಸಿದ್ದೇನೆ ಎಂದರು.
ಗುತ್ತಿಗೆ ನೌಕರರ ವೇತನ ಹಾಗೂ ಖಾಯಂಗೊಳಿಸುವ ಬೇಡಿಕೆಯಿಟ್ಟು ಮುಷ್ಕರ ಕೈಗೊಂಡಿದ್ದರಿಂದ ಅವರ ವೇತನ ಖಡಿತಗೊಳಿಸಿ ಕ್ರಮ ಕೈಗೊಳ್ಳಲು ಸರಕಾರದ ಹಂತದಲ್ಲಿ ನಿರ್ದೇಶನ ಸಿಕ್ಕಿದೆ. ನಿವೇಶನ ವೀಕ್ಷಿಸಿದ ಜಿಲ್ಲಾಧಿಕಾರಿ
ಬೆಳ್ತಂಗಡಿ ಪ.ಪಂ. ವ್ಯಾಪ್ತಿಗೊಳಪಟ್ಟಂತೆ ನಿವೇಶನ ಹಂಚಿಕೆಗೆ ಕಲ್ಲಗುಡ್ಡೆ ಪ್ರದೇಶದಲ್ಲಿ ಮೀಸಲಿರಿಸಿದ 4.04 ಎಕ್ರೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು. 128 ನಿವೇಶನ ಗುರುತಿಸಲಾಗಿದ್ದು, 110 ಸೈಟ್ ಪರಿಶೀಲನೆ ಹಂತದಲ್ಲೇ ಇದೆ ಎಂದು ಪ.ಪಂ. ಮುಖ್ಯಾಧಿಕಾರಿ ಸುಧಾಕರ್ ಮಾಹಿತಿ ನೀಡಿದರು. ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಅವರೊಂದಿಗೆ ಸಮಾಲೋಚನೆ ನಡೆಸಿ ಬಳಿಕ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಶಾಸಕ ಹರೀಶ್ ಪೂಂಜ, ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್ ಜೆ., ನ.ಪಂ. ಸದಸ್ಯರಾದ ಜಯಾನಂದ ಗೌಡ, ಶರತ್, ಎಂಜಿನಿಯರ್ ಮಹಾವೀರ ಉಪಸ್ಥಿತರಿದ್ದರು.