ಹುಬ್ಬಳ್ಳಿ: ಸಂಸತ್ ಅಧಿವೇಶನ ಸೆ.14 ರಿಂದ ಆರಂಭವಾಗಲಿದ್ದು, ಪ್ರಶ್ನೋತ್ತರ ವೇಳೆಯನ್ನು ಒಂದು ತಾಸು ನಡೆಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.14 ರಿಂದ ಅಕ್ಟೋಬರ್ ಒಂದರವರೆಗೆ ಅಧಿವೇಶನ ನಡೆಯಲಿದೆ.
ವಿಶೇಷ ಸನ್ನಿವೇಶದಲ್ಲಿ ಲೋಕಸಭೆ, ರಾಜ್ಯಸಭೆ ಅಧಿವೇಶನ ಎರಡು ಕಡೆ ನಡೆಯಲಿದೆ. ಸಂಸದರ ಆಪ್ತ ಕಾರ್ಯದರ್ಶಿ ಹಾಗೂ ಆಪ್ತ ಸಹಾಯಕರಿಗೆ ಅಧಿವೇಶನ ಸಂದರ್ಭದಲ್ಲಿ ಅವಕಾಶ ಇರುವುದಿಲ್ಲ ಎಂದರು.
ಅಧಿವೇಶನಕ್ಕೆ ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಅವರು ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ಒಂದೇ ದಿನ ಅಧಿವೇಶನ ನಡೆಸಿ ಎಲ್ಲಾ ಬಿಲ್ ಗಳನ್ನ ಪಾಸ್ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಕೇಳಿಬರುತ್ತಿರುವ ಡ್ರಗ್ಸ್ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ದ ಕಠಿಣ ಕ್ರಮ ಆಗಬೇಕೆಂದರು.