Advertisement
ಒಂದು ಕೆ.ಜಿ. ತೂಕಕ್ಕೆ ಸಾಮಾನ್ಯ ಗಾತ್ರದ 8 ರಿಂದ 10 ನುಗ್ಗೆಗಳು ಬೇಕಾಗುತ್ತವೆ. ಕಾಲು ಕೆ.ಜಿ. ನುಗ್ಗೆಗೆ 100 ರೂ. ಇದೆ. ಕಾಲು ಕೆ.ಜಿ.ಯಲ್ಲಿ 2ರಿಂದ 3 ನುಗ್ಗೆ ಮಾತ್ರ ಬರುತ್ತವೆ. ಅಳಿದುಳಿದ ಹೂವುಗಳಿಂದ ನುಗ್ಗೆ ಚಿಗುರೊಡೆದು ಬೆಳವಣಿಗೆ ಹೊಂದಿ ಕೊಯ್ಲಿಗೆ ಬರಲು ಇನ್ನೂ ಸುಮಾರು 1 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಧಾನವಾಗಿ ಇಳಿಯುತ್ತಿರುವಾಗ ನುಗ್ಗೆ ಬೆಲೆ ಗಗನಕ್ಕೇರುತ್ತಿರುವುದು ನುಗ್ಗೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ನಗರದ ಐದು ತರಕಾರಿ ಅಂಗಡಿಗಳು ಸೇರಿದಂತೆ ತಾಲೂಕಿನ ಯಾವುದೇ ಅಂಗಡಿಗಳಲ್ಲಿ ನುಗ್ಗೆ ಮಾರಾಟವೇ ಇಲ್ಲ. ಕೆ.ಜಿ.ಗೆ 300 ರೂ. ದಾಟಿದ ಕೂಡಲೇ ಸ್ಥಳೀಯವಾಗಿ ಖರೀದಿ ಮತ್ತು ಹೊರಗಿನಿಂದ ತರಿಸುವುದನ್ನು ನಿಲ್ಲಿಸಿದ್ದೇವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಕಾಡು ಹೀರೆಯೂ ಇಲ್ಲ ಕಾಡು ಹೀರೆ ಕೂಡ ಕೆಜಿಗೆ 250 ರೂ. ದಾಟಿದ್ದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈರುಳ್ಳಿ 80ರಿಂದ 110 ರೂ. ಶನಿವಾರ ಮಂಗಳೂರಿನಲ್ಲೂ ಈರುಳ್ಳಿ ಧಾರಣೆ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಈರುಳ್ಳಿ ಬೆಲೆ 80 ರೂ.ಗಳಿಂದ 110 ರೂ. ಇತ್ತು. ಸಣ್ಣ ಈರುಳ್ಳಿಗೆ 50 ರೂ., ಹೊಸ ಈರುಳ್ಳಿ ದರ 80 ರೂ. ಹಾಗೂ ಹಳೆ ಈರುಳ್ಳಿಗೆ 110 ರೂ. ಇತ್ತು ಎಂದು ವರ್ತಕರು ಉದಯವಾಣಿಗೆ ತಿಳಿಸಿದ್ದಾರೆ. ಉಡುಪಿಯಲ್ಲೂ ಕೆಜಿಗೆ 85ರಿಂದ 90 ರೂ.ಗಳಲ್ಲಿ ಮಾರಾಟವಾಗುತ್ತಿದೆ.