Advertisement

ಸರಕಾರಿ ಬಸ್‌ಗಳಿಗೆ ಒಬ್ಬರೇ ಚಾಲಕ ಸಾಕು: ಸಾರಿಗೆ ನಿಗಮ ಪುನಶ್ಚೇತನ- ವರದಿ ಸಲ್ಲಿಕೆ

12:39 AM Jul 20, 2022 | Team Udayavani |

ಬೆಂಗಳೂರು: ಸದಾ ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಪುನಶ್ಚೇತನಗೊಳಿಸುವ ಸಂಬಂಧ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್‌. ಶ್ರೀನಿವಾಸ ಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿಯಿಂದ ಸಿಎಂ ಬೊಮ್ಮಾಯಿ ಅವರಿಗೆ ಅಂತಿಮ ವರದಿ ಸಲ್ಲಿಸಲಾಗಿದೆ.

Advertisement

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿ ವರದಿ ಸಲ್ಲಿಸಿದ ಎಂ.ಆರ್‌. ಶ್ರೀನಿವಾಸ ಮೂರ್ತಿ, ಸಾರಿಗೆ ವ್ಯವಸ್ಥೆಯ ಸೋರಿಕೆ ತಡೆಗಟ್ಟಲು ಹಲವು ಸಲಹೆಗಳನ್ನು ನೀಡಿದ್ದಾರೆ. ಬಸ್‌ಗಳಿಗೆ ಚಾಲಕ ಒಬ್ಬರೇ ಸಾಕು, ಅವರೇ ನಿರ್ವಾಹಕರ ಕೆಲಸ ನಿರ್ವಹಿಸಲಿ ಎಂದು ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಂಪನ್ಮೂಲ ಸೃಜನೆಗೆ ಒತ್ತು ನೀಡುವುದು, ಸಂಸ್ಥೆಗಳ ಉತ್ತಮ ಸೇವೆಯ ಮೂಲಕ ಲಾಭದಾಯಕವಾಗಿ ಕಾರ್ಯನಿರ್ವಹಿಸು ವುದು, ನಾಲ್ಕೂ ಸಾರಿಗೆ ಸಂಸ್ಥೆಗಳ ಸುಸ್ಥಿರ ಕಾರ್ಯ ನಿರ್ವಹಣೆ ಕುರಿತು ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಿದ್ದಾರೆ.

ವರದಿಯ ಕೆಲವು ಶಿಫಾರಸುಗಳು
– ನಾಲ್ಕೂ ಸಾರಿಗೆ ನಿಗಮಗಳಿಗೆ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಸಾಲ.
– 4 ನಿಗಮದ ಬಳಿ 24 ಸಾವಿರ ಬಸ್‌ಗಳಿದ್ದು, ಇದು 2030ರ ಹೊತ್ತಿಗೆ 40 ಸಾವಿರಕ್ಕೆ ಏರಿಕೆಯಾಗಬೇಕು.
– ಒಂದು ಬಸ್‌ಗೆ ಚಾಲಕ ಮಾತ್ರ ಸಾಕು. ಚಾಲಕನೇ ನಿರ್ವಾಹಕನ ಕೆಲಸ ಮಾಡುವಂತಿರಬೇಕು.
– ಬಸ್‌ಗಳನ್ನು ಸ್ಟಾಪ್‌ ಟು ಸ್ಟಾಪ್‌ ಮಾತ್ರ ನಿಲ್ಲಿಸುವಂತಿರಬೇಕು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next